ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇವೆ. ನಿತ್ಯವೂ ಆತಂಕಕಾರಿ ವರದಿ ಬಹಿರಂಗವಾಗುತ್ತಿದ್ದು ರಾಜ್ಯದ ಹಲವೆಡೆ ಸೀಲ್’ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಜನರು ಸ್ವಯಂ ಸೀಲ್’ಡೌನ್ ಮಾಡಲಾರಂಭಿಸಿದ್ದಾರೆ. ಬೆಂಗಳೂರಿನ ಬಹುತೇಕ ಪ್ರದೇಶಗಳು ಸೀಲ್‍ಡೌನ್ ಆಗಲಿವೆ ಎಂಬ ಸುಳಿವನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ನೀಡಿದ್ದಾರೆ. ಚಾಮರಾಜಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ, ಪಾದರಾಯಣಪುರ, ಸಿದ್ದಾಪುರ, ಆನಂದಪುರ, ಸಹಿತ ಹಲವು ಪ್ರದೇಶಗಳನ್ನು ಸೀಲ್’ಡೌನ್ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಅತ್ತ ಕೊರೊನಾ ರಣಕೇಕೆಗೆ ಕನಕಪುರ ಜನ ಕೂಡಾ ಆತಂಕಗೊಂಡಿದ್ದಾರೆ. ಹೀಗಾಗಿ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಜುಲೈ 1ರ ವರೆಗೂ ಕನಕಪುರ ಲಾಕ್‍ಡೌನ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ.
Year: 2020
ಅಗೋಚರ ವೈರಾಣು ಅವಾಂತರ; ಜಗತ್ತಿನಾದ್ಯಂತ ಒಂದೇ ದಿನ 1.83 ಲಕ್ಷ ಜನರಿಗೆ ಸೋಂಕು
ದೆಹಲಿ: ಚೀನಾದಲ್ಲಿ ಸೃಷ್ಟಿಯಾಗಿರುವ ಅಗೋಚರ ಕೊರೋನಾ ವೈರಾಣು ವಿಶ್ವವನ್ನೇ ಅಲುಗಾಡಿಸಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದ್ದು ಕೊರೋನಾ ಸಾಧ್ಯವಾಗುತ್ತಲೇ ಇಲ್ಲ. ವಿಶ್ವದ 213 ರಾಷ್ಟ್ರಗಳನ್ನು ಕಾಡುತ್ತಿರುವ ಈ ವೈರಸ್ ಭಾನುವಾರ ಒಂದೇ ದಿನ ಸುಮಾರು 1 ಲಕ್ಷದ 83 ಸಾವಿರ ಮಂದಿಯಲ್ಲಿ ಪತ್ತೆಯಾಗಿದೆ. ಪ್ರಸಕ್ತ, ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 9,046,215ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ 36,617 ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್’ನಲ್ಲಿ 54,771 ಹೊಸ ಕೇಸ್ ದಾಖಲಾಗಿವೆ. ಭಾರತದಲ್ಲಿ ಒಂದೇ ದಿನ ಸುಮಾರು 15,400 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿವೆ. ಈ ನಡುವೆ, ವಿವಿಧ ರಾಷ್ಟ್ರಗಳಲ್ಲಿ ಸುಮಾರು 470,700 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ವಿಶ್ವಸಮುದಾಯದಲ್ಲಿ ಆತಂಕ ಉಂಟುಮಾಡಿದ ಚೀನಾ-ಭಾರತ ಸಂಘರ್ಷ
ದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಘರ್ಷ ವಿಶ್ವಸಮುದಾಯದಲ್ಲಿ ಆತಂಕ ಉಂಟುಮಾಡಿದೆ. ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ರಾತ್ರಿ ಎರಡೂ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಭಾರತೀಯರನ್ನು ಕೆರಳುವಂತೆ ಮಾಡಿದೆ. ಈ ಸಂಘರ್ಷದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಕ್ಷಣಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧೋಪಕರಣಗಳ ಖರೀದಿಗಾಗಿ ಆರ್ಥಿಕ ಅಧಿಕಾರ ನೀಡಿದೆ. ಪ್ರಮುಖ ಶಸ್ತ್ರಾಸ್ತ್ರಗಳು ಹಾಗೂ ಯುದ್ಧೋಪಕರಣಗಳ ಖರೀದಿಸುವ ಪ್ರತಿ ಯೋಜನೆಗೆ ಗರಿಷ್ಠ 500 ಕೋಟಿ ರೂಪಾಯಿ ಮೊತ್ತದ ವರೆಗೂ ಅನುಮೋದನೆ ನೀಡಲಾಗಿದೆ. ಈ ನಡುವೆ, ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯ ಸಭೆ ಕರೆದು ವಿದೇಶಾಂಗ ಕಾರ್ಯದರ್ಶಿಗಳು, ರಕ್ಷಣಾ ಇಲಾಖೆ ಕಾರ್ಯದರ್ಶಿಗಳು ಮತ್ತು ಇತರ ಉನ್ನತ ಮಟ್ಟದ ನಾಯಕರು ಗಡಿಯಲ್ಲಿ ಏನು ನಡೆಯಿತು,…
ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆ
ದೆಹಲಿ: ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರ 34 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 58 ಪೈಸೆ ಹೆಚ್ಚಳವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ತೈಲ ದರವನ್ನು ತೈಲ ಕಂಪೆನಿಗಳು ಪರಿಷ್ಕರಣೆ ಮಾಡಿರಲಿಲ್ಲ. ಕಳೆದೆರಡು ವಾರಗಳಿಂದ ಪರಿಷ್ಕರಿಸಲು ಆರಂಭಿಸಿರುವ ತೈಲ ಕಂಪೆನಿಗಳು ನಿತ್ಯವೂ ಪೆಟ್ರೋಲ್ ಡೀಸೆಲ್ ದರವನ್ನು ಹೆಚ್ಚಿಸುತ್ತಲಿವೆ. 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 82.15 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ದರ 74.98 ರೂಪಾಯಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲ ದರವನ್ನಾಧರಿಸಿ, ಹಾಗೂ ಮಾರುಕಟ್ಟೆ ವಿದ್ಯಮಾನಗಳನ್ನಾಧರಿಸಿ ತೈಲ ದರ ಪರಿಷ್ಕರಿಸಲು ತೈಲ ಕಂಪೆನಿಗಳಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಕಚ್ಚಾ ತೈಲ ದರ ದಾಖಲೆ ಪ್ರಮಾಣದಲ್ಲಿ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ…
ಅನುಷ್ಕಾ ಶರ್ಮಾರ ‘ಬುಲ್ ಬುಲ್’; ಟ್ರೇಲರ್ ಕುತೂಹಲ
ಸಿನಿಮಾ ರಂಗಕ್ಕೆ ಮತ್ತೆ ಜೀವಕಳೆ ಬಂದಿದೆ. ಒಂದೊಂದೇ ಟೀಸರ್, ಟ್ರೇಲರ್’ಗಳು ಬಿಡುಗಡೆಯಾಗುತ್ತಿವೆ. ಅನುಷ್ಕಾ ಶರ್ಮಾ ನಿರ್ಮಾಣದ ‘ಬುಲ್ ಬುಲ್’ ಸಿನಿ ರಸಿಕರ ಕುತೂಹಲ ಕೆರಳಿಸಿರುವ ಸಿನಿಮಾ. ಇದೀಗ ‘ಬುಲ್ ಬುಲ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅನ್ವಿತ್ ದತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಲಾಕ್’ಡೌನ್ ಸಂದರ್ಭದಲ್ಲಿ ಜಾಲಿ ಮೂಡ್’ನಲ್ಲಿ ನಟ ನಿಖಿಲ್
ಬೆಂಗಳೂರು: ಇತ್ತೀಚೆಗಷ್ಟೇ ವಿವಾಹವಾಗಿರುವ ನಟ ನಿಖಿಲ್ ಇದೀಗ ಲಾಕ್’ಡೌನ್ ಸಂದರ್ಭದಲ್ಲಿ ಜಾಲಿ ಮೂಡ್’ನಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನು ಶೇರ್ ಮಾಡುತ್ತಿರುವ ನಿಖಿಲ್ ಇದೀಗ ಪತ್ನಿಯ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ರೇವತಿಯವರ ಹುಟ್ಟುಹಬ್ಬವನ್ನು ನಿಖಿಲ್ ದಂಪತಿ ವಿಶೇಷವಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸುತ್ತಿರುವ ಸಂದರ್ಭದ ಫೋಟೋ ವನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. View this post on Instagram A post shared by Nikhil Kumaraswamy (@nikhilgowda_jaguar)
ಬರಲಿದೆ ‘ಫಿಶ್ ವೇಪರ್ಸ್’; ಕರಾವಳಿ ಮೂಲದ ಉದ್ಯಮಿ ಸಾಧನೆಗೆ ಸಿಎಂ ಫುಲ್ ಖುಷ್
ಬೆಂಗಳೂರು: ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯವೈಖರಿಗೆ ಹೊಸ ಆಯಾಮ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ವಿನೂತನ ಉದ್ದಿಮೆಗೆ ಮುನ್ನುಡಿ ಬರೆದಿದ್ದಾರೆ. ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ ಉದ್ಯಮಿಯ ಗರಡಿಯಲ್ಲಿ ಸಾಧ್ಯವಾಗಿದ್ದು, ಇದೀಗ ಎಲ್ಲರ ಕುತೂಹಲ ಈ ಚಿಪ್ಸ್‌ನತ್ತ ನೆಟ್ಟಿದೆ. ಏನಿದು ಫಿಷ್ ವೇಪರ್ಸ್? ಮೀನುಗಾರಿಕೆ ಕರಾವಳಿಯ ಸಾಂಪ್ರದಾಯಿಕ ಕಸುಬುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಆಹಾರ ಕ್ಷೇತ್ರಕ್ಕಷ್ಟೇ ಅಲ್ಲ, ಫಿಷ್ ಆಯಿಲ್ ಸಹಿತ ವಿವಿಧ ಉತ್ಪನ್ನಗಳಿಗಾಗಿ ರಫ್ತಾಗುತ್ತವೆ. ಆದರೂ ಮತ್ಯೋದ್ಯಮ ಕ್ಷೇತ್ರ ಆರ್ಥಿಕವಾಗಿ ಬಡವಾಗಿದ್ದು ಮೀನಿಗೆ ಬೇಡಿಕೆ ಸೃಷ್ಟಿಸಿ ಮೀನುಗಾರ ಕುಟುಂಬಕ್ಕೆ ವರದಾನವಾಗುವ ರೀತಿ ಉದ್ದಿಮೆ ಸ್ಥಾಪಿಸುವಲ್ಲಿ ದೇಶದ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ‘ಶೆಫ್ ಟಾಕ್’ ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ‘ಮತ್ಸ್ಯ ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.…
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ; ಇಂದು 453 ಹೊಸ ಕೇಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇಂದು ಹೊಸದಾಗಿ 453 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ ಬರೋಬ್ಬರಿ 196 ಹೊಸದಾಗಿ ಪಾಸಿಟಿವ್ ಕೇಸ್ ವರದಿಯಾಗಿದ್ದು ರಾಜಧಾನಿ ಜನ ಆತಂಕಕ್ಕೀಡಾಗಿದ್ದಾರೆ. ಬೆಂಗಳೂರು ನಗರ : 196 ಹೊಸ ಕೇಸ್ ಬಳ್ಳಾರಿ : 40 ಹೊಸ ಕೇಸ್ ಕಲಬುರಗಿ : 39 ಹೊಸ ಕೇಸ್ ವಿಜಯಪುರ : 39 ಹೊಸ ಕೇಸ್ ಮೈಸೂರು : 18 ಹೊಸ ಕೇಸ್ ಗದಗ್ : 18 ಹೊಸ ಕೇಸ್ ಧಾರವಾಡ : 15 ಹೊಸ ಕೇಸ್ ಬಾಗಲಕೋಟೆ : 14 ಹೊಸ ಕೇಸ್ ಬೀದರ್ : 13 ಹೊಸ ಕೇಸ್ ದಾವಣಗೆರೆ : 8 ಹೊಸ ಕೇಸ್ ಉತ್ತರಕನ್ನಡ : 8 ಹೊಸ ಕೇಸ್ ಕೋಲಾರ: 8 ಹೊಸ ಕೇಸ್ ದಕ್ಷಿಣಕನ್ನಡ : 7 ಹೊಸ ಕೇಸ್ ಮಂಡ್ಯ…
ತೋಟದಲ್ಲಿ ಸಚಿವರಿಂದ ಯೋಗ ದಿನಾಚರಣೆ
ಶಿವಮೊಗ್ಗ: ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನ ಅಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲರು ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು. ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಯೋಗ ಸಾಬೀತಾಗಿದೆ.ಯೋಗವನ್ನು ಗುರುಗಳಿಂದ ಯೋಗಶಾಲೆಯಲ್ಲಿ ಕಲಿಯಬಹುದು.ಅಲ್ಲದೇ ಕೈಬೆರಳಲ್ಲಿರುವ ಮೊಬೈಲ್‌ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‌ಗಳು ಆ್ಯಪ್‌ಗಳು ಸಹ ಲಭ್ಯ.ನಮ್ಮನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ…
ನೀನಾಸಂ ಸತೀಶ್-ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕೆಮಿಸ್ಟ್ರಿ; ‘ಗೋದ್ರಾ’ ಟೀಸರ್ ಸಕತ್ ಸದ್ದು
ಲಾಕ್’ಡೌನ್ ಸಡಿಲವಾಗುತ್ತಿದ್ದಂತೆಯೇ ಸಿನಿಮಾ ಕ್ಷೇತ್ರದಲ್ಲೂ ಮಂದಹಾಸ ಮೂಡಿದೆ. ಒಂದೊಂದೇ ಟೀಸರ್’ಗಳು ಬಿಡುಗಡೆಯಾಗುತ್ತಿವೆ. ಇದೀಗ ನೀನಾಸಂ ಸತೀಶ್ ಅಭಿನಯದ ‘ಗೋದ್ರಾ’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕೂಡಾ ನೀನಾಸಂ ಸತೀಶ್’ಗೆ ಸಾತ್ ನೀಡಿರುವ ‘ಗೋದ್ರಾ’ ಚಿತ್ರವನ್ನು ಕೆ.ಎಸ್ ನಂದೀಶ್ ನಿರ್ದೇಶಿಸುತ್ತಿದ್ದಾರೆ
