ನಾಟಿ ಕೋಳಿ ಖಾದ್ಯ ಮಾಂಸಾಹಾರಿ ಪ್ರಿಯರ ಬಾಯಲ್ಲಿ ನೀರೂರಿಸುವುದಂತೂ ಸತ್ಯ. ಅದರಲ್ಲೂ ಕರಾವಳಿ ಶೈಲಿಯ ‘ಕೋರಿ ಪುಳಿಮುಂಚಿ’ ಅಂದರೆ ಇನ್ನೂ ಅಚ್ಚುಮೆಚ್ಚು. ಈ ‘ಕೋರಿ ಪುಳಿಮುಂಚಿ’ ತಯಾರಿ ವಿಧಾನ ಗೊತ್ತಾ? ಇಲ್ಲಿದೆ ನೋಡಿ.. ಇದನ್ನೂ ಓದಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’
Year: 2020
ಮಾವಿನ ಹಣ್ಣು ಕ್ಯಾಂಡಿ; ಸವಿರುಚಿ ಅನುಭವಿಸಲು ಇದು ಸಕಾಲ
ಮಾವಿನ ಹಣ್ಣಿನಲ್ಲಿ ಬಗೆಬಗೆಯ ಖಾದ್ಯ ತಯಾರಿಸಬಹುದು. ಅದೇ ಹಣ್ಣಿನಲ್ಲಿ ಐಸ್ ಕ್ರೀಮ್ ಕೂಡಾ ತಯಾರಿಸುತ್ತಾರೆ. ಅದರ ಕ್ಯಾನದಿ ಕೂಡಾ ಸಕತ್ ರುಚಿ. ನೀವೂ ಮಾವಿನಹಣ್ಣು ಕ್ಯಾಂಡಿ ಕಂಡಿದ್ದೀರಾ? ಸವಿರುಚಿ ಅನುಭವಿಸಿದ್ದೀರಾ? ಮನೆಯಲ್ಲೇ ಕ್ಯಾಂಡಿ ತಯಾರಿಸಿ ಸವಿರುಚಿ ಅನುಭವಿಸಲು ಇದು ಸಕಾಲ. ಬೇಕಾದ ಸಾಮಗ್ರಿ: ಮಾವಿನಹಣ್ಣು 3 ಸಕ್ಕರೆ 13 ತೆಂಗಿನ ಹಾಲು 2 ಕಪ್ ಏಲಕ್ಕಿ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಮಾವಿನಹಣ್ಣಿನ ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಹುಡಿ ಹಾಕಿ ಇನ್ನೊಂದು ಸಲ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ಕಾಯಿಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಕ್ಯಾಂಡಿ ಮೇಕರ್’ಗೆ ಹಾಕಿ 7-8 ಗಂಟೆಗಳ ಕಾಲ deep fridge ನಲ್ಲಿ ಇಟ್ಟರೆ ರುಚಿಯಾದ ಮಾವಿನಹಣ್ಣು ಕ್ಯಾಂಡಿ ಸವಿಯಲು ಸಿದ್ಧ. ಇದನ್ನೂ ಮಾಡಿ…
ತೈಲ ದರ ಪರಿಷ್ಕರಣೆ ಪುನರಾರಂಭ; ಪೆಟ್ರೋಲ್ ಮತ್ತು ಡೀಸೆಲ್ ಮತ್ತೆ ದುಬಾರಿ
ದೆಹಲಿ: ದೇಶಾದ್ಯಂತ ಲಾಕ್ ಡೌನ್ ಜಾರಿ ಬಳಿಕ ಸುಮಾರು 83 ದಿನಗಳ ನಂತರ ತೈಲ ಕಂಪೆನಿಗಳು ಇಂಧನ ದರ ಹೆಚ್ಚಳ ಮಾಡಿವೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ನಿತ್ಯವೂ ತೈಲ ದರ ಪರಿಷ್ಕರಣೆ ಮಾಡುತ್ತಿದ್ದ ತೈಲ ಕಂಪೆನಿಗಳು ಈ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದ್ದು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ತಲಾ 60 ಪೈಸೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 63 ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರದಲ್ಲಿ ಕೂಡ 58 ಪೈಸೆಯಷ್ಟು ಏರಿಕೆಯಾಗಿದೆ. ಇದನ್ನೂ ಓದಿ.. ಜನರ ಸಂಕಷ್ಟ ವಿಚಾರ; ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ರೈತರೇ ಅಸ್ತ್ರ
ಕೊರೋನಾ ವೈರಸ್; ಮಹಾರಾಷ್ಟ್ರದಲ್ಲಿನ ಸೋಂಕು ಚೀನಾದ ಒಟ್ಟು ಕೇಸ್’ಗಿಂತಲೂ ಹೆಚ್ಚು
ಮುಂಬೈ: ಜಗತ್ತಿನಾದ್ಯಂತ ಕೊರೋನಾ ವೈರಸ್ ತೊಲಗಿ ತಂಗಾಳಿ ಬೀಸುತ್ತೆ ಎಂಬ ನಿರೀಕ್ಷೆ ಈಗಿನ್ನೂ ಹಸಿಯಾಗಿಯೇ ಇದೆ. ಆದರೆ ವೈರಾಣು ಹಾವಳಿ ತಡೆಗೆ ಸಾಧ್ಯವಾಗಿಲ್ಲ. ಮಹಾರಾಷ್ಟ್ರ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಕೋವಿಡ್-19 ವೈರಸ್ ದಾಳಿ ತೀವ್ರಗೊಂಡಿದೆ. ಮಹಾರಾಷ್ಟ್ರವೊಂದರಲ್ಲೇ ಸೋಂಕಿನ ಪ್ರಮಾಣ ಚೀನಾದ ಓಟೋ ಕೇಸ್’ಗಳಿಗಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಭಾನುವಾರ ಒಂದೇ ದಿನ ಭಾರತದಲ್ಲಿ ಸುಮಾರು 9,983 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,56,611 ಲಕ್ಷಕ್ಕೇರಿದೆ. ಜೊತೆಗೆ 206 ಮಂದಿ ಒಂದೇ ದಿನ ಈ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 7,135ಕ್ಕೆ ತಲುಪಿದೆ. ಭಾನುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 3,007 ಹೊಸ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 85,975ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ 83,036 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.ಆ ಸಂಖ್ಯೆಯನ್ನು ಮಹಾರಾಷ್ಟ್ರ ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಹೊಸದಾಗಿ 1515 ಸೋಂಕು ದೃಢಪಟ್ಟಿದ್ದು ಆ…
ಅನ್ನದಾತರ ಸಂಕಷ್ಟ ವಿಚಾರ; ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ರೈತರೇ ಅಸ್ತ್ರ
ಬೆಂಗಳೂರು: ಅನ್ನದಾತರ ಬಿಪಿಎಲ್ ಕಾರ್ಡ್‌ಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಚಿಂತನೆ ವಿಚಾರ ಇದೀಗ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಮೈಷುಗರ್ ಕಾರ್ಖಾನೆಯನ್ನು ಮುರುಗೇಶ್ ನಿರಾಣಿ ಒಡೆತನದ ಕಂಪೆನಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಚಾರವನ್ನೂ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕಿಳಿಯಲು ಉಭಯ ಪಕ್ಷಗಳು ಚಿಂತನೆ ನಡೆಸುತ್ತಿವೆ. ಬಿಪಿಎಲ್ ಕಾರ್ಡ್ ಹಾಗೂ ಮೈಷುಗರ್ ಕಾರ್ಖಾನೆ ವಿಚಾರಗನ್ನು ಭಾವನಾತ್ಮಕ ವಿಷಯವನ್ನಾಗಿ ರೈತರ ಮುಂದಿಡುವ ಪ್ರಯತ್ನ ಈ ಎರಡು ಪಕ್ಷಗಳಿಂದ ಸಾಗಿದೆ. ಅದರಲ್ಲೂ ಮೈಶುಗರ್ ಖಾರ್ಖಾನೆಗೂ ಹಳೆ ಮೈಸೂರು ಭಾಗದ ಜನರ ನಡುವಿನ ಭಾವನಾತ್ಮಕ ನಂಟಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸುತ್ತಿರುವ ಬೆಳವಣಿಗೆ ರಾಜ್ಯದ ಆಡಳಿತಾರೂಢ ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯತ್ತ ಕೊಂಡೊಯ್ದಿದೆ. ಇದೇ ವೇಳೆ, ರಾಜ್ಯ ಸರ್ಕಾರ ಅನ್ನದಾತರ ಬಿಪಿಎಲ್ ಕಾರ್ಡ್‌ಗಳನ್ನು ಹಿಂಪಡೆಯುವ ವಿಚಾರ ಮುಂದಿಟ್ಟು ರಾಜ್ಯವ್ಯಾಪಿ ರೈತರನ್ನು ರೊಚ್ಚಿಗೆಬ್ಬಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದಾರೆ.…
ಕೇಶವೇಂದ್ರ ಶ್ರೀಗಳ 350ನೇ ಪುಣ್ಯ ತಿಥಿ ಹಿನ್ನೆಲೆ; ನಾಡಿನ ದೇಗುಲಗಳಿಗೆ ಶ್ರೀಗಂಧ ಸಸಿ ವಿತರಣೆ
ಮಂಗಳೂರು: ಯತಿವರ್ಯರಾದ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಅವರ 350ನೇ ಪುಣ್ಯ ತಿಥಿ ಆಚರಣೆಯನ್ನು ಪರಿಸರ ಕೈಂಕರ್ಯ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಶ್ರೀ ಕಾಶೀ ಮಠ ಸಂಸ್ಥಾನ ದ ಗುರು ಪರಂಪರೆಯ ದ್ವಿತೀಯ ಯತಿವರ್ಯ ಶ್ರೀಮದ್ ಕೇಶವೇಂದ್ರ ತೀರ್ಥರ 350ನೇ ಪುಣ್ಯ ತಿಥಿ ವರ್ಷ ಆಚರಣೆ ನೆನಪಿಗಾಗಿ ಸುಮಾರು 350 ಶ್ರೀಗಂಧದ ಗಿಡಗಳನ್ನು ವಿತರಿಸಲು ಸಂಸ್ಥಾನದ ಪೀಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಉದ್ದೇಶಿಸಿದ್ದಾರೆ. ಅದರಂತೆ ಸ್ವಾಮೀಜಿಯ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಶ್ರೀಗಂಧ ಸಸಿಗಳನ್ನು ವಿತರಿಸಿ ಈ ಕೈಂಕರ್ಯಕ್ಕೆ ಮುನ್ನುಡಿ ಬರೆದರು. ಸಮಾಜದ ಎಲ್ಲಾ ದೇವಳಗಳಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೀಡಲಾಗುವುದು . ಜಿ.ಯಸ್ .ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಲೆಕ್ಕ ಪರಿಶೋಧಕ ಎಂ. ಜಗನ್ನಾಥ್ ಕಾಮತ್ ಮತ್ತು ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಕೋಟಾ , ಕೋಟೇಶ್ವರ, ಚೆಂಪಿ, ವಿವಿಧ ದೇವಳಗಳ ಆಡಳಿತ…
ಖರ್ಗೆ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶ; ಕಾಂಗ್ರಸ್’ನಲ್ಲಿ ಹೆಚ್ಚಿದ ನಿರೀಕ್ಷೆ
ಬೆಂಗಳೂರು: ಸುಮಾರು 48 ವರ್ಷಗಳ ರಾಜಕೀಯ ಬದುಕಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜಕೀಯ ಪುನರ್ಜನ್ಮ ಸಿಗುತ್ತಿದೆ. ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಸೋಲುಂಡಿದ್ದ ಖರ್ಗೆಯವರನ್ನು ಮೇಲ್ಮನೆಗೆ ಕಳುಹಿಸಬೇಕೆಂದು ಕೈ ನಾಯಕರು ಹಲವು ತಿಂಗಳ ಹಿಂದೆಯೇ ಚಿಂತನೆ ನಡೆಸಿತ್ತು. ಇದೀಗ ಚುನಾವಣಾ ಘೋಷಣೆಯಾಗುತ್ತಿದ್ದಂತೆಯೇ ಎಲ್ಲಾ ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ದೂರಕ್ಕೆ ಸರಿಸಿದ ಕಾಂಗ್ರೆಸ್ ಹೈಕಮಾಂಡ್ ಖರ್ಗೆಯವರ ಹೆಸರನ್ನೇ ಅಂತಿಮಗೊಳಿಸಿದೆ. ಒಂದು ವೇಳೆ ಖರ್ಗೆಯವರು ಆಯ್ಕೆಯಾದರೆ ಅವರು ಇದೇ ಮೊದಲ ಸಲ ರಾಜ್ಯಸಭೆ ಪ್ರಪ್ರವೇಶಿಸಲಿದ್ದಾರೆ. ಧ್ಯೇಯವಾದಿ ಕಾಂಗ್ರೆಸಿಗ, ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕ, ರಾಜ್ಯಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು. Best wishes to…
ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸಮರತಂತ್ರ; ಬಿಎಸ್‌ವೈಗೆ ಕಠಿಣ ಹಾದಿ?
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಇದೀಗ ರಾಜ್ಯ ರಾಜಕಾರಣದಲ್ಲಿ ರಹಸ್ಯ ಕಸರತ್ತಿನಲ್ಲಿ ತೊಡಗಿದ್ದು, ಯಡಿಯೂರಪ್ಪ ಸರ್ಕಾರದ ವಿರುದ್ಧ ಸಮರ ತಂತ್ರ ಹೆಣೆಯುತ್ತಿವೆ. ಮಾಜಿ ಪ್ರಧಾನಿಯವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವ ಜೆಡಿಎಸ್ ಪ್ರಯತ್ನಕ್ಕೆ ನೀರೆರೆದಿದ್ದೆ ಕಾಂಗ್ರೆಸ್. ಡಿ.ಕೆ.ಶಿವಕುಮಾರ್ ಅವರಿಗೆ ಪ್ರದೇಶ ಕಾಂಗ್ರೆಸ್’ನ ಸಾರಥ್ಯ ಸಿಕ್ಕಿದ್ದೇ ತಡ ಒಕ್ಕಲಿಗ ಮುಖಂಡರು ಒಗ್ಗಟ್ಟಾಗಿದ್ದು, ಈ ವೇದಿಕೆಯೇ ದೇವೇಗೌಡರ ಕುಟುಂಬ ಮತ್ತು ಡಿಕೆಶಿ ಜೊತೆಗಿನ ನಂಟನ್ನು ಬಿಗಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ಉಭಯ ಪಕ್ಷಗಳು ಒಗ್ಗಟ್ಟಾಗಿಯೇ ಮುಗಿಬೀಳುತ್ತಿರುವ ಸನ್ನಿವೇಶ ಈ ಎಲ್ಲಾ ಬೆಳವಣಿಗೆಗಳಿಗೆ ಪುಷ್ಠಿನೀಡಿವೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಬಯಲಿಗೆಳೆದು ಸಿಎಂ ಬದಲಾವಣೆವರೆಗೂ ಸನ್ನಿವೇಶ ಸಾಗಿತ್ತು. ಆ ಸಂದರ್ಭದಲ್ಲಿ ಹೆಚ್ಡಿಕೆ ಜೊತೆ ಕಾಂಗ್ರೆಸ್ ಕೈ ಜೋಡಿಸಿರಲಿಲ್ಲ. ಇದೀಗ ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಡಿಕೆಶಿ ಬೆಂಗಾವಲಾಗಿ…
ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಆರಂಭ; ತೀರ್ಥ, ಪ್ರಸಾದದ ವಿತರಣೆ ಇಲ್ಲ
ಬೆಂಗಳೂರು: ಲಾಕ್’ಡೌನ್ ಕಾರಣದಿಂದಾಗಿ ಮುಚ್ಚಲಾಗಿದ್ದ ದೇವಾಲಯಗಳು ಇದೀಗ ತೆರೆದಿವೆ. ಬಹುತೇಕ ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಮೈಸೂರಿನ ಚಾಮುಂಡೇಶ್ವರಿನ ನಂಜನಗೂಡು ನಂಜುಂಡೇಶ್ವರ, ಪೊಳಲಿ ರಾಜರಾಜೇಶ್ವರಿ, ಧರ್ಮಸ್ಥಳ ಮಂಜುನಾಥನ ಸನ್ನಿಧಿ ಸಹಿತ ಬಹುತೇಕ ದೇವಾಲಯಗಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಮಾರ್ಗಸೂಚಿಯನ್ನು ಪಾಲಿಸಲೇಬೇಕಿದೆ ಎಂಬ ಸೂಚನೆಯನ್ನು ದೇವಾಲಯ ಸಿಬ್ಬಂದಿ ನೀಡುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ಲಭಿಸಲಿದ್ದು ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕ್ಯಾಥೊಲಿಕ್ ಚರ್ಚ್ ಗಳು ಜೂನ್ 13ರಿಂದ ಆರಂಭವಾಗುತ್ತವೆ. ಮಾರ್ಗಸೂಚಿ ನಿಯಮಗಳೇನು? ಭಕ್ತರಿಗೆ ತೀರ್ಥ, ಪ್ರಸಾದದ ವಿತರಣೆ ಇಲ್ಲ 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಪ್ರವೇಶ ದ್ವಾರದ ಸಮೀಪ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಪ್ರವೇಶ ದ್ವಾರ ಬಳಿ ಸೋಪ್, ಸ್ಯಾನಿಟೈಸರ್ ಇಟ್ಟಿರಬೇಕು ಇದನ್ನೂ ಓದಿ.. ಪೊಳಲಿ ಕ್ಷೇತ್ರದಲ್ಲಿ ವಿಶೇಷತೆ ಏನು?
ಕರ್ನಾಟಕದಲ್ಲಿ ಸರಿಯದ ಕಿಲ್ಲರ್ ಕೊರೋನಾ ಹಾವಳಿ; ಮತ್ತೆ 239 ಕೇಸ್
ಬೆಂಗಳೂರು: ಜಗತ್ತಿನ 216 ದೇಶಗಳ ಜನರನ್ನು ಭೀತಿಯ ಅಲೆಯಲ್ಲಿ ಸಿಲುಕಿಸಿರುವ ಕೊರೋನಾ ವೈರಾಣು ಕರುನಾಡಿನ ಮಂದಿಯನ್ನೂ ಹೈರಾಣಾಗಿಸಿದೆ. ನಿತ್ಯವೂ ನೂರಾರು ಸೋಂಕಿನ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗುತ್ತಿದ್ದೂ ಇಂದೂ ಕೂಡಾ 239 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಶನಿವಾರ ಸಂಜೆಯಿಂದ ಭಾನುವಿಬಾರ ಸಂಜೆ ವರೆಗಿನ ಅಂಕಿ ಅಂಶಗಳನ್ನು ಪೇರಿಸಿರುವ ಆರೋಗ್ಯ ಇಲಾಖೆ ರಾಜ್ಯದಲ್ಲಿ ದೃಢಪಟ್ಟಿರುವ ಸೋಂಕಿನ ಪ್ರಮಾಣವನ್ನು ಬಹಿರಂಗಪಡಿಸಿದೆ. ಕಲಬುರಗಿಯಲ್ಲಿ : 39 ಹೊಸ ಕೇಸ್ ಯಾದಗಿರಿ : 39 ಹೊಸ ಕೇಸ್ ಬೆಳಗಾವಿ : 38 ಹೊಸ ಕೇಸ್ ಬೆಂಗಳೂರು ನಗರ : 23 ಹೊಸ ಕೇಸ್ ದಕ್ಷಿಣ ಕನ್ನಡ : 17 ಹೊಸ ಕೇಸ್ ದಾವಣಗೆರೆ : 17 ಹೊಸ ಕೇಸ್ ಉಡುಪಿ : 13 ಹೊಸ ಕೇಸ್ ಶಿವಮೊಗ್ಗ : 12 ಹೊಸ ಕೇಸ್ ವಿಜಯಪುರ : 9 ಹೊಸ ಕೇಸ್ ಬೀದರ್ :…
