ಕೊರೋನಾ ವೈರಸ್; ಮಹಾರಾಷ್ಟ್ರದಲ್ಲಿನ ಸೋಂಕು ಚೀನಾದ ಒಟ್ಟು ಕೇಸ್’ಗಿಂತಲೂ ಹೆಚ್ಚು

ಮುಂಬೈ: ಜಗತ್ತಿನಾದ್ಯಂತ ಕೊರೋನಾ ವೈರಸ್ ತೊಲಗಿ ತಂಗಾಳಿ ಬೀಸುತ್ತೆ ಎಂಬ ನಿರೀಕ್ಷೆ ಈಗಿನ್ನೂ ಹಸಿಯಾಗಿಯೇ ಇದೆ. ಆದರೆ ವೈರಾಣು ಹಾವಳಿ ತಡೆಗೆ ಸಾಧ್ಯವಾಗಿಲ್ಲ. ಮಹಾರಾಷ್ಟ್ರ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಕೋವಿಡ್-19 ವೈರಸ್ ದಾಳಿ ತೀವ್ರಗೊಂಡಿದೆ. ಮಹಾರಾಷ್ಟ್ರವೊಂದರಲ್ಲೇ ಸೋಂಕಿನ ಪ್ರಮಾಣ ಚೀನಾದ ಓಟೋ ಕೇಸ್’ಗಳಿಗಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಭಾನುವಾರ ಒಂದೇ ದಿನ ಭಾರತದಲ್ಲಿ ಸುಮಾರು 9,983 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,56,611 ಲಕ್ಷಕ್ಕೇರಿದೆ. ಜೊತೆಗೆ 206 ಮಂದಿ ಒಂದೇ ದಿನ ಈ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 7,135ಕ್ಕೆ ತಲುಪಿದೆ.

ಭಾನುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 3,007 ಹೊಸ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 85,975ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ 83,036 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.ಆ ಸಂಖ್ಯೆಯನ್ನು ಮಹಾರಾಷ್ಟ್ರ ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಹೊಸದಾಗಿ 1515 ಸೋಂಕು ದೃಢಪಟ್ಟಿದ್ದು ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31,684ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 1282 ಹೊಸ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ.. ಖರ್ಗೆ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶ; ಕಾಂಗ್ರಸ್’ನಲ್ಲಿ ಹೆಚ್ಚಿದ ನಿರೀಕ್ಷೆ 

Related posts