ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸಮರತಂತ್ರ; ಬಿಎಸ್‌ವೈಗೆ ಕಠಿಣ ಹಾದಿ?

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಇದೀಗ ರಾಜ್ಯ ರಾಜಕಾರಣದಲ್ಲಿ ರಹಸ್ಯ ಕಸರತ್ತಿನಲ್ಲಿ ತೊಡಗಿದ್ದು, ಯಡಿಯೂರಪ್ಪ ಸರ್ಕಾರದ ವಿರುದ್ಧ ಸಮರ ತಂತ್ರ ಹೆಣೆಯುತ್ತಿವೆ.

ಮಾಜಿ ಪ್ರಧಾನಿಯವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವ ಜೆಡಿಎಸ್ ಪ್ರಯತ್ನಕ್ಕೆ ನೀರೆರೆದಿದ್ದೆ ಕಾಂಗ್ರೆಸ್. ಡಿ.ಕೆ.ಶಿವಕುಮಾರ್ ಅವರಿಗೆ ಪ್ರದೇಶ ಕಾಂಗ್ರೆಸ್’ನ ಸಾರಥ್ಯ ಸಿಕ್ಕಿದ್ದೇ ತಡ ಒಕ್ಕಲಿಗ ಮುಖಂಡರು ಒಗ್ಗಟ್ಟಾಗಿದ್ದು, ಈ ವೇದಿಕೆಯೇ ದೇವೇಗೌಡರ ಕುಟುಂಬ ಮತ್ತು ಡಿಕೆಶಿ ಜೊತೆಗಿನ ನಂಟನ್ನು ಬಿಗಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ಉಭಯ ಪಕ್ಷಗಳು ಒಗ್ಗಟ್ಟಾಗಿಯೇ ಮುಗಿಬೀಳುತ್ತಿರುವ ಸನ್ನಿವೇಶ ಈ ಎಲ್ಲಾ ಬೆಳವಣಿಗೆಗಳಿಗೆ ಪುಷ್ಠಿನೀಡಿವೆ.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಬಯಲಿಗೆಳೆದು ಸಿಎಂ ಬದಲಾವಣೆವರೆಗೂ ಸನ್ನಿವೇಶ ಸಾಗಿತ್ತು. ಆ ಸಂದರ್ಭದಲ್ಲಿ ಹೆಚ್ಡಿಕೆ ಜೊತೆ ಕಾಂಗ್ರೆಸ್ ಕೈ ಜೋಡಿಸಿರಲಿಲ್ಲ. ಇದೀಗ ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಡಿಕೆಶಿ ಬೆಂಗಾವಲಾಗಿ ನಿಂತಿದ್ದಾರೆ. ಮುಖ್ಯಮಂತ್ರಿ ನವನಗರೋತ್ಥಾನ ಯೋಜನೆಯಲ್ಲಿನ ಬಹುಕೋಟಿ ಹಗರಣ ವಿಚಾರ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು, ಅದರ ಜೊತೆಗೆ ಕೊರೋನಾ ಪರಿಹಾರ ಸಹಿತ ಇತ್ತೀಚಿನ ಹಗರಣಗಳನ್ನು ಬಯಲಿಗೆಳೆಯುವ ಪ್ರಯತ್ನ ನಡೆಯುತ್ತಿದ್ದು, ಪ್ರತಿಪಕ್ಷಗಳು ಈ ಅಸ್ತ್ರಗಳನ್ನೇ ಬಳಸುವ ಸಾಧ್ಯತೆಗಳಿವೆ.

ಇದನ್ನೂ ಓದಿ.. ಖರ್ಗೆ ಮೊದಲಬಾರಿಗೆ ರಾಜ್ಯಸಭೆ ಪ್ರವೇಶ ನಿರೀಕ್ಷೆ 

 

Related posts