ದೆಹಲಿ: ಜಗತ್ತಿನಾದ್ಯಂತ ಕೊರೋನಾ ಸವಾರಿ ಚುರುಕಾಗಿದ್ದು ಬಹುತೇಕ ದೇಶಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಇತ್ತ ಭಾರತದಲ್ಲೂ ಕೊರೋನಾ ಹಾವಳಿ ಜೋರಾಗಿದ್ದು ಶುಕ್ರವಾರ ಒಂದೇ ದಿನ 6,654 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದು ಈ ವರೆಗಿನ ದಾಖಲೆ ಎನ್ನಲಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,25,101ಕ್ಕೆ ತಲುಪಿದೆ. ಇದೇ ವೇಳೆ ಶುಕ್ರವಾರ ಒಂದೇ ದಿನ 137 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಇದರೊಂದಿಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3720ಕ್ಕೆ ಏರಿಕೆಯಾಗಿದೆ. ಈ ನಡುವೆ ಭಾರತವು ಕೋವಿಡ್ -19 ಹೊಸ ಹಾಟ್ ಸ್ಪಾಟ್ ಎಂದು ಗುರುತಾಗಿದೆಯೇ? ಎಂಬ ಪ್ರಶ್ನೆಗಳೂ ಮೂಡಿವೆ. ಸಕ್ರೀಯ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಇದೀಗ ಈ ವರೆಗೆ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಇಟಲಿ, ಸ್ಪೇನ್ ದೇಶಗಳನ್ನೂ ಮೀರಿದೆ. ಅಂಕಿ ಅಂಶಗಳ ಪ್ರಕಾರ ಭಾರತ ಈಗ 5 ನೇ ಸ್ಥಾನದಲ್ಲಿದೆ. ಈ ತಿಂಗಳಾರಂಭದಿಂದ…
Year: 2020
ಹಬ್ಬ ಎಂಬ ಕಾರಣಕ್ಕಾಗಿ ಕರ್ಫ್ಯೂ ಜಾರಿ? ; ಪ್ರಚೋದನಕಾರಿ ಸಂದೇಶಗಳ ಬಗ್ಗೆ ಮುಸ್ಲಿಂ ಪ್ರಜ್ಞಾವಂತರೇ ಗರಂ
ಬೆಂಗಳೂರು: ಭಾನುವಾರ ಮುಸ್ಲಿಮರ ಪವಿತ್ರ ಹಬ್ಬ.. ಆದರೆ ಲಾಕ್’ಡೌನ್ ಜಾರಿಯಲ್ಲಿರುವುದರಿಂದಾಗಿ ಸಂಭ್ರಮಾಚರಣೆ ಇಲ್ಲ. ಜೊತೆಗೆ ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಬಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ‘ಭಾನುವಾರ ಮುಸ್ಲಿಮರ ಹಬ್ಬ ಎಂಬ ಕಾರಣಕ್ಕೆ ಕರ್ಪ್ಯೂ ಜಾರಿಗೊಳಿಸಿದೆ ‘ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ರೀತಿಯ ವರ್ತನೆ ಸರಿಯೇ ಎಂದು ಕನ್ನಡ-ತುಳು ಸಿನಿಮಾ ನಿರ್ದೇಶ ಇಸ್ಮಾಯಿಲ್ ಮೂಡುಶೆಡ್ಡೆ ಅವರು ತಮ್ಮದೇ ಸಮುದಾಯದವರನ್ನು ಪ್ರಶ್ನಿಸಿದ್ದಾರೆ. ‘ಲಾಠಿ ಚಾರ್ಜ್’ ಪತ್ರಿಕೆಯ ಸಂಪಾದಕರೂ ಆಗಿರುವ ಇಸ್ಮಾಯಿಲ್ ಮೂಡುಶೆಡ್ಡೆಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೇಖನವೊಂದನ್ನು ಪೋಸ್ಟ್ ಮಾಡಿದ್ದು, ಪ್ರಚೋದನಾಕಾರಿ ಸಂದೇಶದ ಮೂಲಕ ಸಮಾಜದ ಶಾಂತಿ ಕಾದಾಡುವವರು ವಿಘ್ನ ಸಂತೋಷಿಗಳು ಎಂದಿದ್ದಾರೆ. ಕೆಲವರು ಮುಸ್ಲಿಂ ಸಮಾಜಕ್ಕೆ ತಪ್ಪು ಸಂದೇಶ ತಲುಪಿಸುತ್ತಿದ್ದಾರೆ. ಇವರ ಪೈಕಿ ಹೆಚ್ಚಿನವರು ಕಾಂಗ್ರೆಸ್ಸಿಗರು ಎಂದವರು ಬೇಸರ…
ಹುಷಾರ್.. ವಯಸ್ಸಾದವರಷ್ಟೇ ಅಲ್ಲ ಯುವಜನರನ್ನೂ ಬಲಿಪಡೆಯುತ್ತೆ ಕೊರೋನಾ
ದೆಹಲಿ: ಕೋವಿಡ್ ವೈರಸ್ ಜಗತ್ತಿನಾದ್ಯಂತ ಮರಣ ಮೃದಂಗವನ್ನೇ ಭಾರಿಸುತ್ತಿದೆ. ಅದರಲ್ಲೂ ವೃದ್ದರು ಹಾಗೂ ಮಕ್ಕಳ ಪಾಲಿಗೆ ಈ ಅಗೋಚಾರ ವೈರಾಣು ಯಮಧೂತನಂತಿದೆ. ಇದೀಗ ವೃದ್ದರು, ಮಕ್ಕಳಷ್ಟೇ ಅಲ್ಲ ಎಲ್ಲಾ ವರ್ಗದವರಿಗೂ ಕೊರೋನಾ ಮಾರಣಾಂತಿಕವಾಗಿ ಕಾಡುತ್ತಿದೆ ಎಂಬ ಸಂಗತಿ ಬಯಲಾಗಿದೆ. ದೇಶದಲ್ಲಿ ಕೊರೋನಾಗೆ ಬಲಿಯಾದವರ ಪೈಕಿ ನೂರಕ್ಕೂ ಹೆಚ್ಚು ಮಂದಿ ಯುವಜನರು ಎಂಬ ಸಂಗತಿಯನ್ನು ಸರ್ಕಾರವೇ ಬಹಿರಂಗಪಡಿಸಿದೆ. 60 ದಾಟಿರುವರಿಗೆ ಹಾಗೂ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯಕಾರಿ. ಚಿಕ್ಕ ಮಕ್ಕಳಲ್ಲೂ ಸೋಂಕನ್ನು ಸಹಿಸುವ ಸಾಮರ್ಥ್ಯ ಇರಲ್ಲ. ಆದರೆ ೩೦ ವರ್ಷದೊಳಗಿನ ಯುವಜನರಿಗೆ? ಈ ವರೆಗೂ ಯುವಜನರಲ್ಲಿ ರೋಗಾಣು ದಾಳಿ ಎದುರಿಸುವ ಶಕ್ತಿ ಇದೆ ಎನ್ನಲಾಗುತ್ತಿದೆ. ಆದರೆ ಕೋವಿಡ್ ವೈರಸ್ ವಿಚಾರದಲ್ಲಿ ಇದು ಶೇಕಡಾ ನೂರರಷ್ಟು ಸತ್ಯವಲ್ಲ. ದೇಶದಲ್ಲಿ ಈವರೆಗೆ 30 ವರ್ಷದೊಳಗಿನ 103 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿರುವ ವಿಚಾರ ಎಲ್ಲಾ ತರ್ಕಗಳಿಗೆ ಉತ್ತರವಾಗಿ ನಮ್ಮ ಮುಂದಿದೆ. ಭಾರತದಲ್ಲಿ…
ಲಾಕ್’ಡೌನ್ ಸಂದರ್ಭದಲ್ಲೂ ತಿಮ್ಮಪ್ಪನ ಮಹಿಮೆ; ಹುಂಡಿಯಲ್ಲಿ ಸಿಕ್ತು 1.97 ಕೋ.ರೂ.
ಹೈದರಾಬಾದ್: ತಿರುಪತಿ ತಿಮ್ಮಪ್ಪ ಹಿಂದೂಗಳ ಆರಾಧ್ಯ ದೈವ. ಈ ಶ್ರೀನಿವಾಸನ ಸನ್ನಿಧಿಯೇ ಜಗತ್ತಿನ ಶ್ರೀಮಂತ ದೇಗುಲಗಳಲ್ಲೊಂದು. ಸಾಮಾನ್ಯವಾಗಿ ದೇವಾಲಯಗಳಿಗೆ ಸಾವಿರ ಸೀಮೆಯನ್ನು ಗುರುತಿಸಲಾಗುತ್ತದೆ. ಆದರೆ ತಿಮ್ಮಪ್ಪನ ಈ ದೇವಾಲಯ ಇಡೀ ವಿಶ್ವದ ಜನರನ್ನು ಭಕ್ತರನ್ನಾಗಿಸಿದೆ. ಪ್ರಸ್ತುತ ಲಾಕ್’ಡೌನ್ ಜಾರಿಯಲ್ಲಿದ್ದರೂ ತಿಮ್ಮಪ್ಪನ ಮಹಿಮೆ ಜಗದಗಲಕ್ಕೆ ಚಾಚಿದ್ದು ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಈ ಪರಿಸ್ಥಿತಿಯಲ್ಲೂ ಏಪ್ರಿಲ್ ತಿಂಗಳಲ್ಲಿ 1.97 ಕೋಟಿ ರೂಪಾಯಿ ಕಾಣಿಕೆ ಬಂದಿದೆ. ತಿಮ್ಮಪ್ಪನ ಇ- ಹುಂಡಿಗೆ ಈ ಹಣ ಹರಿದುಬಂದಿದ್ದು ಕಳೆದ ವರ್ಷದ ಎಪ್ರಿಲ್’ನಲ್ಲಿ ಬಂದ ಕಾಣಿಕೆಗಿಂತ ಈ ವರ್ಷ ಲಾಕ್’ಡೌನ್ ಇದ್ದರೂ ಹಿಂದಿಗಿಂತ ಹೆಚ್ಚು ಕಾಣಿಕೆ ಬಂದಿದೆ. ಈವರೆಗೂ ದೇಗುಲದ ಸಿಬ್ಬಂದಿಗೆ ವೇತನ ಪಾವತಿ ಬಗ್ಗೆ ಆಡಳಿತ ಮಂಡಳಿ ಅಸಹಾಯಕತೆ ವ್ಯಕ್ತಪಡಿಸುತ್ತಿತ್ತು. ಅದಾಗಲೇ ಇ-ಕಾಣಿಕೆಯ ಮೊತ್ತ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ತಿರುಪತಿ ಲಡ್ಡು ಪ್ರಸಾದವನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಲು ದೇವಾಲಯ ನಿರ್ಧರಿಸಿದೆ. ಲಾಕ್‌ಡೌನ್ ಕಾರಣದಿಂದಾಗಿ…
ಭಾನುವಾರ ಪವಿತ್ರ ಈದ್ ಹಬ್ಬ; ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಘೋಷಣೆ
ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಈ ಭಾನುವಾರ ನೆರವೇರಲಿದೆ. ಚಂದ್ರದರ್ಶನದ ಪವಿತ್ರ ಕ್ಷಣವನ್ನಾಧರಿಸಿ ಈದುಲ್ ಪಿತ್ರ್ ಹಬ್ಬ ಆಚರಣೆಯನ್ಬು ನಿರ್ಧರಿಸಲಾಗುತ್ತಿದ್ದು, ಈ ಬಾರಿ ಮೇ 24 ಭಾನುವಾರದಂದು ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಘೋಷಿಸಿದ್ದಾರೆ. ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 23 ಶನಿವಾರ 30 ನೇ ಉಪವಾಸ ಪೂರ್ತಿಗೊಳಿಸಿ, ಮೇ 24 ಆದಿತ್ಯವಾರ ಈದುಲ್ ಫಿತ್ರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ (ಮಂಗಳೂರು) ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳು ಕೇರಳ,…
ಮಾವು ಸೂಪರ್.. ‘ಮಾವಿನ ಹಲ್ವಾ’ ಸೂಪರೋ ಸೂಪರ್
ಈಗ ಬಿರು ಬೇಸಿಗೆಯ ಸಮಯ.. ಕಡಿಮೆಯಾಗದ ಬಿಸಿಲ ಧಗೆ.. ಈ ವಸಂತಕಾಲದಲ್ಲಿ ಸಿಗುವ ‘ಮಾವು’ ಅದೆಲ್ಲವನ್ನೂ ಮರೆಸುವ ಮಾಂತ್ರಿಕ ಹಣ್ಣು..! ಮನೆಯೊಳಗೇ ಕುಳ್ಳಿರಿಸುವಂತೆ ಮಾಡುವ ಬೇಸಿಗೆಯ ವೇಳೆ ಬಗೆಬಗೆಯ ನಳಪಾಕಕ್ಕೆ ಅವಕಾಶ ಕೊಟ್ಟಿರುವುದೂ ಇದೇ ಮಾವು. ಹಣ್ಣುಗಳ ರಾಜ ‘ಮಾವು’ ತಿನ್ನಲಷ್ಟೆ ಅಲ್ಲ, ರಾಸಾಯನಕ್ಕೂ ಸೂಕ್ತ. ಅಷ್ಟೇ ಏಕೆ? ಮಾವಿನ ಖಾದ್ಯಗಳು ಅವೆಷ್ಟೋ? ಅದರಲ್ಲೂ ‘ಮಾವು ಹಲ್ವಾ’ ಅಂದ್ರೆ..? ವ್ಹಾ..!! ತಿಂದರೆ ಮತ್ತೆ ಮತ್ತೆ ಆಸ್ವಾದಿಸಬೇಕೆಂದು ಹಾತೊರೆಯುತ್ತೀರಿ ಖಂಡಿತ. ಸ್ವಾದಿಷ್ಟದ ‘ಮ್ಯಾಂಗೋ ಕೋಕನಟ್ ಹಲ್ವಾ’ ಮಾಡುವ ವಿಧಾನವೂ ಬಲು ಸುಲಭ.. ಇಲ್ಲಿದೆ ನೋಡಿ ‘ಮಾವಿನ ಹಣ್ಣಿನ ಹಲ್ವಾ’ ಮಾಡುವ ವಿಧಾನ.. ಇದನ್ನೂ ಓದಿ.. ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ
ಕರುನಾಡಲ್ಲಿ ಕಿಲ್ಲರ್ ಕೊರೋನಾ; ಮತ್ತೆ 105 ಮಂದಿಗೆ ಸೋಂಕು
ಬೆಂಗಳೂರು: ದೇಶದಲ್ಲಿ ಕೊರೋನಾ ಸವಾರಿ ಆತಂಕಕಾರಿ ರೀತಿಯಲ್ಲಿ ಸಾಗಿದ್ದು, ಇತ್ತ ಕರ್ನಾಟಕದಲ್ಲೂ ನಿತ್ಯವೂ ಜನ ಬೆಚ್ಚಿ ಬೀಳಿಸುವ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಕೂಡಾ ಕಳವಳಕಾರಿ ಸಂಗತಿಗಳನ್ನೇ ಬಹಿರಂಗಪಡಿಸಿದೆ. ಗುರುವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗಿನ ಕೊರೋನಾ ವಿದ್ಯಮಾನಗಳನ್ನು ಆಧರಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ 105 ಹೊಸ ಪಾಸಿಟಿವ್ ಕೇಸ್’ಗಳತ್ತ ಬೊಟ್ಟು ಮಾಡಿದೆ. ಚಿಕ್ಕಬಳ್ಳಾಪುರ – 45 ಹೊಸ ಕೇಸ್ ಹಾಸನ – 14 ಹೊಸ ಕೇಸ್ ತುಮಕೂರು – 8 ಹೊಸ ಕೇಸ್ ಬೀದರ್ – 6 ಹೊಸ ಕೇಸ್ ಬೆಂಗಳೂರು ನಗರ – 5 ಹೊಸ ಕೇಸ್ ಚಿಕ್ಕಮಗಳೂರು – 5 ಹೊಸ ಕೇಸ್ ಬೆಂಗಳೂರು ಗ್ರಾಮಾಂತರ – 4 ಹೊಸ ಕೇಸ್ ಮಂಡ್ಯ – 3 ಹೊಸ ಕೇಸ್ ಹಾವೇರಿ – 3 ಹೊಸ ಕೇಸ್…
ಸೋನಿಯಾ ಗಾಂಧಿ Vs ಶೋಭಾ ಕರಾಂದ್ಲಾಜೆ; FIR ರದ್ದು ಮಾಡದಂತೆ ಸಲಹೆ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾಡಿ ಟ್ವೀಟ್ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ಫಯರ್ ಬ್ರಾಂಡ್ ನಾಯಕಿ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯಬೇಡಿ, ಸೋನಿಯಾ ವಿರುದ್ದದ ಎಎಫ್ಐಆರ್ ರದ್ದು ಮಾಡಬೇಡಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. https://twitter.com/ShobhaBJP/status/1263714538920312833 ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಮೋದಿಯವರು ಪಿಎಂ ಕೇರ್ ಫಂಡ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಪಿಎಂ ಕೇರ್ ಫಂಡ್ ಫ್ರಾಡ್ ಎಂದು ಟ್ವಿಟರ್ ನಲ್ಲಿ ಟೀಕಿಸಲಾಗಿದೆ. ಈ ಮೂಲಕ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡಲಾಗಿದೆ ಎಂದು ವಕೀಲ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದು ಈ ದೂರಿನ ಹಿನ್ನೆಲೆಯಲ್ಲಿ ಎಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ.. ಸಾಲಗಾರರ ನೆರವಿಗೆ ಧಾವಿಸಿದ RBI; ಆಗಸ್ಟ್’ವರೆಗೂ…
ಸಾಲಗಾರರ ನೆರವಿಗೆ ಧಾವಿಸಿದ RBI; ಆಗಸ್ಟ್’ವರೆಗೂ ಸಾಲ ಮರುಪಾವತಿಗೆ ವಿನಾಯಿತಿ
ಹೊಸದಿಲ್ಲಿ: ಜಗತ್ತಿನಾದ್ಯಂತ ಕೊರೋನಾ ವಕ್ಕರಿಸಿದ್ದು ಹಲವು ದೇಶಗಳು ಸಂದಿಗ್ಧ ಸ್ಥಿತಿಯಲ್ಲಿವೆ. ಕೊರೋನಾ ಸೋಂಕು ತಡೆಯಲು ಲಾಕ್’ಡೌನ್ ಜಾರಿ ಒಂದೆಡೆಯಾದರೆ ಕಠಿಣ ಮಾರ್ಗಸೂಚಿ ಕೂಡಾ ಜನರನ್ನು ಅಸಹಾಯಕರನ್ನಾಗಿಸಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮತ್ತೆ ಬ್ಯಾಂಕ್ ಗ್ರಾಹಕರಿಗೆ ರಿಲೀಫ್ ನೀಡಿದೆ. ಬ್ಯಾಕ್ ಸಾಲದ ಕಂತುಗಳನ್ನು ಮತ್ತೆ 3 ತಿಂಗಳು ವಿಸ್ತರಿಸಿದೆ. RBI Governor’s address https://t.co/lgJvUP91iE — ReserveBankOfIndia (@RBI) May 22, 2020 ಇದನ್ನೂ ಓದಿ.. ಬರಡು ಭೂಮಿಗೆ ಜೀವಜಲ ಹರಿಸಿದ “ಭಗೀರಥ’; ಇಂದಿರಾ ಕ್ಯಾಂಟೀನ್ ಕ್ಯಾಪ್ಟನ್ ‘ಪೂಜಾರಿ’ಗೆ ಸೆಲ್ಯೂಟ್ ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನಡೆಸಿದ ಸುದ್ದಿಗೋಷ್ಠಿ ಗಮನ ಸೆಳೆಯಿತು. ಈಗಾಗಲೇ ಲಾಕ್ ಡೌನ್ ಘೋಷಣೆಯಾ್ದ ಬಳಿಕ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಲಾಗಿತ್ತು. ಇದೀಗ ಅದನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ…
ಹಳ್ಳಿಗೆ ಜೀವಜಲ ಹರಿಸಿದ ‘ಭಗೀರಥ’; ಎಲ್ಲೆಲ್ಲೂ ChefTalk ‘ಪೂಜಾರಿ’ದ್ದೇ ಮಾತು
ಬಿರು ಬೇಸಿಗೆಯ ಬೇಗೆ. ಅತಿಯಾದ ಬಿಸಿಲ ಧಗೆ.. ಇದು ಕರಾವಳಿಯಲ್ಲಿ ಬೇಸಿಗೆ ಸಂದರ್ಭದಲ್ಲಿನ ಪರಿಸ್ಥಿತಿ. ಲಾಕ್ಡೌನ್’ನಿಂದಾಗಿ ಕೆಲಸವಿಲ್ಲ, ಮಳೆ ಇನ್ನೂ ದೂರದಲ್ಲಿದ್ದು ಕುಡಿಯಲು ನೀರಿಲ್ಲ.. ಸುಮುದ್ರ ತೀರ ಪ್ರದೇಶ ಅಂದುಕೊಂಡರೂ ಬಹುತೇಕ ಕಡೆ ಕುಡಿಯುವ ನೀರಿಗೂ ಬವಣೆ. ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಸಾಮಾನ್ಯವೆಂಬಂತಿರುವ ದುಸ್ಥಿತಿ. ಇಂತಹಾ ಸಂಧಿಕಾಲದಲ್ಲಿ ಜನಪ್ರತಿನಿಧಿಗಳು ನೆರವಾಗದಿದ್ದರೂ ಭಗೀರಥ ಪ್ರಯತ್ನದಂತೆ ನೀರು ಹರಿಸಿದ್ದಾರೆ ಬೆಂಗಳೂರಿನ ಉದ್ಯಮಿ. ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಹಸಿವು ನೀಗಿಸುವ ಕೈಂಕರ್ಯದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಇದೀಗ ತನ್ನ ತವರು ಜಿಲ್ಲೆ ಉಡುಪಿ ಸಮೀಪದ ಊರುಗಳ ಜನರಿಗೆ ಜೀವಜಲ ಒದಗಿಸುವ ಯಜ್ಞದಲ್ಲಿ ತಲ್ಲೀನರಾಗಿದ್ದಾರೆ. ಕುಂದಾಪುರ ಸಮೀಪದ ಬಿಜೂರು ಗ್ರಾಮ ಅರಬ್ಬೀ ಸಮುದ್ರಕ್ಕೆ ಸಮೀಪವಿದ್ದರೂ ಅಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಜೀವಜಲಕ್ಕಾಗಿ ಅಲ್ಲಿನ ಜನ ಪರದಾಡುತ್ತಿದ್ದಾರೆ. ಬೇಸಿಗೆ ಆರಂಭವಾದರಂತೂ ಹನಿ ನೀರಿಗೂ ಯದ್ಧ ನಡೆಸುವ ಸ್ಥಿತಿ ಎದುರಾಗುತ್ತದೆ. ಸುಮಾರು…
