ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಈ ಭಾನುವಾರ ನೆರವೇರಲಿದೆ. ಚಂದ್ರದರ್ಶನದ ಪವಿತ್ರ ಕ್ಷಣವನ್ನಾಧರಿಸಿ ಈದುಲ್ ಪಿತ್ರ್ ಹಬ್ಬ ಆಚರಣೆಯನ್ಬು ನಿರ್ಧರಿಸಲಾಗುತ್ತಿದ್ದು, ಈ ಬಾರಿ ಮೇ 24 ಭಾನುವಾರದಂದು ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಘೋಷಿಸಿದ್ದಾರೆ.
ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 23 ಶನಿವಾರ 30 ನೇ ಉಪವಾಸ ಪೂರ್ತಿಗೊಳಿಸಿ, ಮೇ 24 ಆದಿತ್ಯವಾರ ಈದುಲ್ ಫಿತ್ರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ (ಮಂಗಳೂರು) ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳು ಕೇರಳ, ಗೋವಾ ಕರಾವಳಿ ತೀರದ ಮುಸ್ಲಿಮರು ಭಾನುವಾರವೇ ಈ ಹಬ್ಬವನ್ನು ಆಚರಿಸಲಿದ್ದಾರೆ. ಆದರೆ ಬೆಂಗಳೂರು ಮತ್ತಿತರ ಕಡೆ ಈ ಹಬ್ಬ ಆಚರಣೆ ದಿನ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.