ಸಾಲಗಾರರ ನೆರವಿಗೆ ಧಾವಿಸಿದ RBI; ಆಗಸ್ಟ್’ವರೆಗೂ ಸಾಲ ಮರುಪಾವತಿಗೆ ವಿನಾಯಿತಿ

ಹೊಸದಿಲ್ಲಿ: ಜಗತ್ತಿನಾದ್ಯಂತ ಕೊರೋನಾ ವಕ್ಕರಿಸಿದ್ದು ಹಲವು ದೇಶಗಳು ಸಂದಿಗ್ಧ ಸ್ಥಿತಿಯಲ್ಲಿವೆ. ಕೊರೋನಾ ಸೋಂಕು ತಡೆಯಲು ಲಾಕ್’ಡೌನ್ ಜಾರಿ ಒಂದೆಡೆಯಾದರೆ ಕಠಿಣ ಮಾರ್ಗಸೂಚಿ ಕೂಡಾ ಜನರನ್ನು ಅಸಹಾಯಕರನ್ನಾಗಿಸಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮತ್ತೆ ಬ್ಯಾಂಕ್ ಗ್ರಾಹಕರಿಗೆ ರಿಲೀಫ್ ನೀಡಿದೆ. ಬ್ಯಾಕ್ ಸಾಲದ ಕಂತುಗಳನ್ನು ಮತ್ತೆ 3 ತಿಂಗಳು ವಿಸ್ತರಿಸಿದೆ.

ಇದನ್ನೂ ಓದಿ.. ಬರಡು ಭೂಮಿಗೆ ಜೀವಜಲ ಹರಿಸಿದ “ಭಗೀರಥ’; ಇಂದಿರಾ ಕ್ಯಾಂಟೀನ್ ಕ್ಯಾಪ್ಟನ್ ‘ಪೂಜಾರಿ’ಗೆ ಸೆಲ್ಯೂಟ್

ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನಡೆಸಿದ ಸುದ್ದಿಗೋಷ್ಠಿ ಗಮನ ಸೆಳೆಯಿತು. ಈಗಾಗಲೇ ಲಾಕ್ ಡೌನ್ ಘೋಷಣೆಯಾ್ದ ಬಳಿಕ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಲಾಗಿತ್ತು. ಇದೀಗ ಅದನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಜೂನ್ ಒಂದರಿಂದ ಆಗಸ್ಟ್ 31ರ ವರೆಗೆ ಜನರು ಇಎಂಐ ಪಾವತಿಗೆ ಒತ್ತಾಯಿಸದಿರುವಂತೆ ಬ್ಯಾಂಕ್’ಗಳಿಗೆ ಸಲಹೆ ಮಾಡಿದ್ದಾರೆ.

ಇದೆ ವೇಳೆ, ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಲಾಗಿದೆ. ಶೇಕಡಾ 4.4ರಷ್ಟಿದ್ದ ರೆಪೋ ದರ ಶೇಕಡಾ 4ಕ್ಕೆ ಇಳಿಸಲಾಗಿದ್ದು ರಿವರ್ಸ್ ರಿಪೋ ದರವನ್ನೂ ಕೂಡ ಶೇಕಡಾ 3.35ಕ್ಕೆ ಇಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ತಿಳಿಸಿದರು.

ಇದನ್ನೂ ಓದಿ.. ಚಂಡಮಾರುತದ ಸುಳಿಯಲ್ಲಿ ಪೂರ್ವ ಕರಾವಳಿ; ಸ್ಮಾಶಾನವಾದ ದೀದಿ ನಾಡು

Related posts