ಬೆಂಗಳೂರು: ಉಚಿತಗಳ ಯೋಜನೆ ಮೂಲಕ ರಾಜ್ಯದ ಜನರ ಗಮನ ಕೇಂದ್ರೀಕರಿಸಿರುವ ಸಿದ್ದರಾಮಯ್ಯ ಸರ್ಕಾರ ಇದೀಗ ಕಾಂಗ್ರೆಸ್ ಕಾರ್ಯಕರ್ತರಿಗೂ ಬಂಪರ್ ಕೊಡುಗೆ ನೀಡಲು ತಯಾರಿ ನಡೆಸಿದೆ. ಪಕ್ಷದ ಶಾಸಕರಿಗೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ನಾಯಕರಿಗೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡಲು ಸಿಎಂ ಸಿದ್ದರಾಮಯ್ಯ ಅವರು ಕಸರತ್ತು ನಡೆಸಿದ್ದಾರೆ. ನಿಗಮ-ಮಂಡಳಿ ನೇಮಕಾತಿ ಪಟ್ಟಿ ಸಿದ್ದವಾಗಿದ್ದು ಯಾವುದೇ ಸನಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, ಹಲವು ಸಮಯದಿಂದ ಬಾಕಿ ಇರುವ ನಿಗಮ – ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
Year: 2023
ಮಧ್ಯಪ್ರಾಚ್ಯ ಕದನ; ಗಾಜಾದಲ್ಲಿ ಇಸ್ರೇಲ್ ನಿರಂತರ ವಾಯು ದಾಳಿ
ಗಾಜಾ: ಮಧ್ಯಪ್ರಾಚ್ಯಯಾದಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಕದನ ತಾರಕಕ್ಕೇರಿದ್ದು, ಭೀಕರ ಬಾಂಬ್ ದಾಳಿ ಹಲವರನ್ನು ಬಲಿತೆಗೆದುಕೊಂಡಿದೆ. ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸಲು ಇಸ್ರೇಲ್ ಸೇನೆ ಗಾಜಾದಲ್ಲಿ ವೈಮಾನಿಕ ದಾಳಿ ತೀವ್ರಗೊಳಿಸಿದೆ. ಗಾಜಾ ಗಡಿಯೊಳಗೆ ನುಗ್ಗಿರುವ ಇಸ್ರೇಲ್ ಸೇನಾ ಪಡೆ, ನಿರಂತರ ವಾಯುದಾಳಿ ನಡೆಸಿವೆ. ದಾಳಿ ಹಿನ್ನೆಲೆಯಲ್ಲಿ ಭಾರೀ ಸಾವು-ನೋವು ಸಂಭವಿಸಿದ್ದು, ಗಾಜಾದಲ್ಲಿ ಇಂಟರ್ ನೆಟ್ ಹಾಗೂ ಮೊಬೈಲ್ ಸೇವೆ ಸ್ತಬ್ಧವಾಗಿದೆ. ಗಾಜಾ ಪಟ್ಟಿ ಪ್ರದೇಶಗೊಳಗೆ ಲಗ್ಗೆ ಹಾಕಿರುವ ಇಸ್ರೇಲ್ ಯುದ್ಧ ಟ್ಯಾಂಕರ್ ಗಳು ಹಮಾಸ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ.ಇದೇ ವೇಳೆ, 10ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. Aftermath of Last Night's Bombardment of Gaza😮#IsraelPalestineWar #Israel#HamasislSIS #Gaza #starlinkforgaza #crymua #AUSvsNZ #GazaWar#Israel #غزة_الآن#Gazabombing #IsraelPalestineConflict #GazaWar #ElonMusk #FreePalestine from #HamasTerroristspic.twitter.com/B6feKPLJsl — 🆃🄷🅾🅁 (@THOR_X_SAHIL) October 28, 2023
ಅನುದಾನ ಕೊರತೆ; 2 ವರ್ಷಗಳಿಂದ ನೆನೆಗುದಿಗೆ ಬಿದ್ದ ವಾಲ್ಮೀಕಿ ಭವನ ಕಟ್ಟಡ
ವಿಶೇಷ ವರದಿ: ಸುರೇಶ ಬಾಬು ನಾಯಕ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಈ ಸಮುದಾಯದ ಬಗ್ಗೆ ಸರ್ಕಾರ ಎಷ್ಟು ಆಸಕ್ತಿ ವಹಿಸಿದೆ ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ. ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಅರಳು ಮಲ್ಲಿಗೆ ಗೇಟ್ ಬಳಿ ನಿರ್ಮಾಣ ಹಂತದಲ್ಲಿರುವ ಭವ್ಯವಾದ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣಗೊಂಡಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ನಾಯಕ ಸಮುದಾಯ ಸೇರಿದಂತೆ ಬಡ ಜನರಿಗೆ ಯಾವುದೇ ಶುಭ ಸಮಾರಂಭಗಳನ್ನು ನಡೆಸಲು ಜಾಗದ ಕೊರತೆ ಉಂಟಾಗಿತ್ತು. ನಾಯಕ ಸಮಾಜದ ಆಶಯದಂತೆ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನು ಮತ್ತು ಒಂದೂವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಇದೀಗ ಕಟ್ಟಡದ ಅಂತ್ಯದಲ್ಲಿ ಪ್ಲಾಸ್ಟಿಂಗ್, ಮೋಲ್ಡಿಂಗ್, ಸುಣ್ಣಬಣ್ಣ ಮಾಡಲು ಹಣವಿಲ್ಲದೆ…
ಪ್ರಾಪರ್ಟಿ ಪರೇಡ್: ನಾನಾಲ್ವರು ಮೊಬೈಲ್ ಕಳ್ಳರಿಂದ 1037 ಮೊಬೈಲ್ ವಶ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸಾರ್ವಜನಿಕರನ್ನು ಯಾಮಾರಿಸಿ ಕಳ್ಳರು ತಮ್ಮ ಕೈಚಳಕದಿಂದ ವಿವಿದೆಢೆಗಳಲ್ಲಿ ಹಲವರಿಂದ ಬೆಲೆ ಬಾಳುವ ಮೊಬೈಲ್ ಗಳನ್ನ ಕಳ್ಳತನ ಮಾಡಿರುವ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಸಾವಿರಕ್ಕೂ ಹೆಚ್ಚು ಮೊಬೈಲ್’ಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಗಳನ್ನು ಕಳೆದುಕೊಂಡ ಬಗ್ಗೆ ದೂರು ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿಯು ನಾಲ್ಕು ಜನ ಮೊಬೈಲ್ ಕಳ್ಳರನ್ನು ದಸ್ತಗಿರಿ ಮಾಡಿ ಅವರಿಂದ 1037 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಫೋನ್’ಗಳನ್ನು ದೊಡ್ಡಬಳ್ಳಾಪುರದಲ್ಲಿನ ಪ್ರಾಪರ್ಟಿ ಪರೇಡ್’ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪರಿಶೀಲಿಸಿದರು. ನಾಲ್ವರು ಮೊಬೈಲ್ ಕಳ್ಳರನ್ನು ಬಂಧಿಸಿ ಅವರಿಂದ 1037 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್, ಕ್ರೈಂ ಸಿಬ್ಬಂದಿಯ ಕಾರ್ಯವನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಈ ವೇಳೆ ಅಪರ ಪೊಲೀಸ್ ಅಧೀಕ್ಷಕ, ಆನೇಕಲ್ ವಿಭಾಗದ ಡಿಸಿಪಿ,…
ರಾಮ-ಲಕ್ಷ್ಮಣ-ಸೀತೆ ವಿಗ್ರಹ ಗಿಫ್ಟ್ ಹಿಂದಿದೆ ನಿಖಿಲ್ ಗುಟ್ಟು
ಬೆಂಗಳೂರು: ರಾಜ್ಯ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಬಿಜೆಪಿ ಜೊತೆಗಿನ ಮೈತ್ರಿ ಕಸರತ್ತಿಗೆ ರೋಚಕತೆ ತುಂಬಿದ್ದಾರೆ. ಈ ಭೇಟಿ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಸಿಎಂ ಯೋಗಿಗೆ ರಾಮ-ಲಕ್ಷ್ಮಣ-ಸೀತೆ ವಿಗ್ರಹ ನೀಡಿ ಗಮನಸೆಳೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್–ಬಿಜೆಪಿ ಮೈತ್ರಿಯ ಬಗ್ಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಅವರು ಹಂಚಿಕೊಂಡರು. ಅವರು ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ನನ್ನನ್ನು ಬರಮಾಡಿಕೊಂಡು ಆಶೀರ್ವದಿಸಿದರು. ಪ್ರೀತಿಯಿಂದ ಸತ್ಕರಿಸಿದ ನಿಮಗೆ ಧನ್ಯವಾದಗಳು ಯೋಗಿ ಜೀ…’ ಎಂದು ನಿಖಿಲ್ ಫೋಸ್ ಹಂಚಿಕೊಂಡಿದ್ದಾರೆ.
KSRTCಗೆ ಪ್ರತಿಷ್ಠಿತ ‘Grow Care India Best Strategy ಚಿನ್ನದ ಪ್ರಶಸ್ತಿ’
ನಮ್ಮ ರಥ ನಮ್ಮ ಹೆಮ್ಮೆ.. ಕರುನಾಡಿನ ಹೆಮ್ಮೆಯ KSRTC ಸಾಧನೆಯ ಕಿರೀಟಕ್ಕೆ ಮಗದೊಂದು ಗರಿ… ಪ್ರತಿಷ್ಠಿತ ‘Grow Care India Best Strategy ಚಿನ್ನದ ಪ್ರಶಸ್ತಿ’ ಲಕ್ನೋ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಉತ್ತರ ಭಾರತದಲ್ಲೂ ಸುದ್ದಿಯಲ್ಲಿದೆ. ಉತ್ಕುಷ್ಟ ಸೇವೆಗಾಗಿ ಯೋಗಿಯ ನಾಡಿನಿಂದಲೂ ಪುರಸ್ಕಾರ ಸಿಕ್ಕಿದೆ. ಗ್ರೋ ಕೇರ್ ಇಂಡಿಯಾ ಸಂಸ್ಥೆ ನೀಡುವ ‘Grow Care India Best Strategy’ ಚಿನ್ನದ ಪ್ರಶಸ್ತಿ ಪ್ರಶಸ್ತಿ KSRTC ಪಾಲಿಗೆ ಒಲಿದಿದೆ. ಮಾನವ ಸಂಪನ್ಮೂಲ ವರ್ಗದಲ್ಲಿ ವಿನೂತನ ಉಪಕ್ರಮಗಾಗಿ ಈ ಪ್ರಶಸ್ತಿಯನ್ನು KSRTCಗೆ ನೀಡಲಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಗ್ರೋ ಕೇರ್ ಇಂಡಿಯಾ ಆಯೋಜಿಸಿದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರೀಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಮಾಜಿ ಸದಸ್ಯರಾದ ಡಾ ಮುಜಫರ್ ಅಹಮದ್, ಉತ್ತರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಅದಿತಿ ಉಮ್ರಾವ್, ಗ್ರೋಕೇರ್…
‘ನೆಲ್ಸನ್’ : ವಿನೋದ್ ಪ್ರಭಾಕರ್ ಕಮಾಲ್
‘ವಿಷ್ಣುಪ್ರಿಯ’ : ಶ್ರೇಯಸ್ ಮಂಜು- ಪ್ರಿಯಾ ವಾರಿಯರ್ ಕಾಂಬಿನೇಷನ್
ರಾಜ್ಯದ ಜನರ ದಾರಿ ತಪ್ಪಿಸಲು ‘ಹುಲಿಯ ಉಗುರು’ ನಾಟಕ? ಸರ್ಕಾರದ ವಿರುದ್ಧ ರವಿ ವಾಗ್ಬಾಣ
ಬೆಂಗಳೂರು: ಇತ್ತೀಚಿಗೆ ನಡೆದ ಐಟಿ ದಾಳಿ, ಅಲ್ಲಿ ಪತ್ತೆಯಾದ ನೂರು ಕೋಟಿಗೂ ಅಧಿಕ ಅಕ್ರಮ ಹಣದ ಕುರಿತಾದ ಚರ್ಚೆಯನ್ನು ದಾರಿತಪ್ಪಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಮಿಷನ್ ಕಲೆಕ್ಟರ್ (CM) ಮತ್ತು ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಆರಂಭಿಸಿರುವ ಹೊಸ ನಾಟಕ “ಹುಲಿ ಉಗುರು” ಎಂದು ಬಿಜೆಪಿ ನಾಯಕ ಸಿ.ಟಿ.ರವಿ ವಿಶ್ಲೇಷಿಸಿದ್ದಾರೆ. ನೂರಾರು ವರ್ಷಗಳಿಂದ ಹುಲಿಯುಗುರನ್ನು ಬಹಳ ಜನ ರಾಜ್ಯದಾದ್ಯಂತ (ದೇಶದಾದ್ಯಂತ) ಆಭರಣವಾಗಿ ಧರಿಸುತಿದ್ದದ್ದು ಹೊಸದೂ ಅಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಣದೆ ಇದ್ದದ್ದೂ ಅಲ್ಲ. ಈಗ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಬೋಗಸ್ ಭರವಸೆಗಳ ಮೇಲಿನ ಜನರ ಆಕ್ರೋಶ, ರೈತರಿಗೆ ವಿದ್ಯುತ್ ಪೂರೈಸಲಾಗದೆ ನೀಡಿದ ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ, ನಿಮ್ಮ ಸರಕಾರದ ಮಂತ್ರಿಗಳು ತೆರೆದ ನಕಲಿ ದಾಖಲೆಗಳ ಇಲಾಖೆ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ ಮತ್ತು…
ಆರೋಗ್ಯಕರ ಪರಿಸರ ವ್ಯವಸ್ಥೆಗೆ ಸಾಗರದಲ್ಲಿನ ಅಭ್ಯಾಸಗಳು ಹೆಚ್ಚಾಗಬೇಕಿದೆ ರಾಷ್ಟ್ರಪತಿ ಮುರ್ಮು
ಚೆನ್ನೈ: ಆರೋಗ್ಯಕರ ಪರಿಸರ ವ್ಯವಸ್ಥೆಗೆ ಸಾಗರದಲ್ಲಿನ ಅಭ್ಯಾಸಗಳು ಹೆಚ್ಚಾಗಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಪಾದಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಇಂಡಿಯನ್ ಮ್ಯಾರಿಟೈಮ್ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಭಾರತವು 7,500 ಕಿಮೀ ಉದ್ದದ ಕರಾವಳಿ ಮತ್ತು 1,382 ಕಡಲಾಚೆಯ ದ್ವೀಪಗಳೊಂದಿಗೆ ಗಮನಾರ್ಹವಾದ ಸಮುದ್ರ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು. ಭಾರತವು 14,500 ಕಿಲೋಮೀಟರ್‌ಗಳಷ್ಟು ಸಂಭಾವ್ಯವಾಗಿ ಸಂಚರಿಸಬಹುದಾದ ಜಲಮಾರ್ಗಗಳನ್ನು ಹೊಂದಿದೆ, ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಕಾರ್ಯತಂತ್ರದ ಸ್ಥಳವನ್ನು ಹೊರತುಪಡಿಸಿ. ದೇಶದ ಕಡಲ ವಲಯವು ಅದರ ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಏಕೆಂದರೆ ದೇಶದ ವ್ಯಾಪಾರದ 95 ಪ್ರತಿಶತದಷ್ಟು ಮತ್ತು ಮೌಲ್ಯದಿಂದ 65 ಪ್ರತಿಶತದಷ್ಟು ವ್ಯಾಪಾರವನ್ನು ಕಡಲ ಸಾರಿಗೆಯ ಮೂಲಕ ಕೈಗೊಳ್ಳಲಾಗುತ್ತದೆ. ಕರಾವಳಿ ಆರ್ಥಿಕತೆಯು 4 ಮಿಲಿಯನ್ ಮೀನುಗಾರರನ್ನು ಬೆಂಬಲಿಸುತ್ತದೆ ಮತ್ತು ಸುಮಾರು 2,50,000 ಮೀನುಗಾರಿಕೆ ದೋಣಿಗಳ ಫ್ಲೀಟ್‌ನೊಂದಿಗೆ ಭಾರತವು…
