ನವದೆಹಲಿ: ಹಿರಿಯ ನಾಗರಿಕರ ಘನತೆ, ಕಾಳಜಿ ಮತ್ತು ಗೌರವವನ್ನು ಖಚಿತಪಡಿಸುವ ಉದ್ದೇಶದ ‘ಏಜಿಂಗ್ ವಿತ್ ಡಿಗ್ನಿಟಿ’ ಅಭಿಯಾನದಡಿ 5.36 ಲಕ್ಷಕ್ಕೂ ಹೆಚ್ಚು ನಾಗರಿಕರು ರಾಷ್ಟ್ರೀಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ. ಈ ಅಭಿಯಾನಕ್ಕೆ ಪೂರಕವಾಗಿ ಎಲ್ಡರ್‌ಲೈನ್ 14567 ರಾಷ್ಟ್ರೀಯ ಉಚಿತ ಸಹಾಯವಾಣಿ ದೇಶಾದ್ಯಂತ ಹಿರಿಯ ನಾಗರಿಕರಿಗೆ ಮಾಹಿತಿ, ಸಮಾಲೋಚನೆ, ಕುಂದುಕೊರತೆ ಪರಿಹಾರ ಮತ್ತು ತುರ್ತು ನೆರವು ಒದಗಿಸುತ್ತಿದೆ. ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್, ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಹೇಳಿ, ‘ಏಜಿಂಗ್ ವಿತ್ ಡಿಗ್ನಿಟಿ’ ಪೋರ್ಟಲ್‌ನಲ್ಲಿ ಪ್ರತಿಜ್ಞೆ ಸ್ವೀಕರಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ. 2021ರ ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಡರ್‌ಲೈನ್ 14567 ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ನೀಡುತ್ತಿದೆ. ಆರೋಗ್ಯ ಸೇವೆ, ಪಿಂಚಣಿ,…
Day: July 16, 2026
‘ಬಿಡದಿ ಟೌನ್‌ಶಿಪ್ ಅಂದು ಅಧಿವೇಶನದಲ್ಲಿ ವಿರೋಧ, ಇದೀಗ ಪರ’; ಡಿಕೆಶಿ ನಡೆಗೆ ಬಿಜೆಪಿ ಟೀಕೆ
ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡದ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸುವ ಹೊಸ ನಾಟಕ ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರ ಸಿಂಪತಿ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎಂದಿಗೂ ಸ್ವಾಧೀನಕ್ಕೆ ಆದೇಶ ಹೊರಡಿಸಿರಲಿಲ್ಲ, ಕಾಂಗ್ರೆಸ್ ಕೂಡ ಯೋಜನೆಯನ್ನು ವಿರೋಧ ಮಾಡಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿರುದ್ಧ ರೈತರು ಉಗ್ರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪೊಲೀಸರನ್ನು ಕಳಿಸಿ ಹಲ್ಲೆ ಮಾಡಿದೆ. ಕೊಲೆ, ಬೆದರಿಕೆ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇದಕ್ಕಾಗಿ ಸದನ ಸಮಿತಿ ನೇಮಿಸಿರುವುದು ಹಾಸ್ಯಾಸ್ಪದವಾಗಿದೆ. ರೈತರು ಜಮೀನು ಕೊಡುವುದಿಲ್ಲ ಎಂದಮೇಲೂ ಸದನ ಸಮಿತಿ ಅಗತ್ಯವಿರಲಿಲ್ಲ. ಆದರೆ ಅಧಿವೇಶನ ನಡೆಯಲಿರುವುದರಿಂದ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರೇ ಹೊರತು, ಆದೇಶ…
‘ಬಿಜೆಪಿ ಆಡಳಿತದಲ್ಲೇ ಹೆಚ್ಚು ಕೈದಿಗಳ ಪರಾರಿ’; ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದ ಬಿಜೆಪಿ ಟೀಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚಿನ ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಖರ್ಗೆ, “ಕೈದಿಗಳ ಪರಾರಿ ಪ್ರಕರಣವನ್ನು ‘ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ’ ಸಂಭ್ರಮಿಸುತ್ತಾ ನನ್ನನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು ಮೊದಲು ತಮ್ಮ ಆಡಳಿತದ ವೈಫಲ್ಯವನ್ನು ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ಹೇಳಿದ್ದಾರೆ. 2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಒಂದೇ ಬಾರಿ ಎಂಟು ಕೈದಿಗಳು ಪರಾರಿಯಾಗಿದ್ದರು. ಪರಾರಿಯಾದವರಲ್ಲಿ ಇಬ್ಬರನ್ನು 14 ವರ್ಷಗಳ ಬಳಿಕವೇ ಬಂಧಿಸಲು ಸಾಧ್ಯವಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ 2010ರಲ್ಲಿ 26, 2011ರಲ್ಲಿ 18, 2012ರಲ್ಲಿ 17, 2020ರಲ್ಲಿ 11, 2021ರಲ್ಲಿ 4 ಹಾಗೂ 2022ರಲ್ಲಿ 10 ಕೈದಿಗಳು ಪರಾರಿಯಾಗಿದ್ದರು…
ಜೈಲ್ ಬ್ರೇಕ್ ಪ್ರಕರಣ: ‘ವೈಫಲ್ಯ ಮುಚ್ಚಲು ಕಾಗಕ್ಕ-ಗುಬ್ಬಕ್ಕ ಕಥೆ ಬೇಡ’; ಖರ್ಗೆಗೆ ವಿಜಯೇಂದ್ರ ಟೀಕೆ
ಬೆಂಗಳೂರು: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, “2010ರಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ ಈಗಿನ ವೈಫಲ್ಯವನ್ನು ಸಮರ್ಥಿಸಿಕೊಳ್ಳಬೇಡಿ. ನಿಮ್ಮ ವೈಫಲ್ಯ ಮುಚ್ಚಲು ಕಾಗಕ್ಕ-ಗುಬ್ಬಕ್ಕ ಕಥೆ ಹೇಳಬೇಡಿ” ಎಂದು ಟೀಕಿಸಿದ್ದಾರೆ. “ನಿಮಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ಸಮಯ ಇದೆ. ಆದರೆ ಜೈಲು ಭದ್ರತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡಲು ಸಮಯ ಇಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಕೈದಿಗಳು ಜೈಲಿನಿಂದ ಪರಾರಿಯಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿರುವ ಅವರು, “ಮಹತ್ವದ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ” ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ಮೂರು…
ಭಾರತ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ; ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ದಾಖಲೆ
ನವದೆಹಲಿ: ಭಾರತ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಸ್ಮಾರ್ಟ್‌ಫೋನ್‌ಗಳು ದೇಶದ ಅತಿದೊಡ್ಡ ರಫ್ತು ಉತ್ಪನ್ನವಾಗಿ ದಾಖಲೆ ನಿರ್ಮಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2014-15ರಲ್ಲಿ ₹1.9 ಲಕ್ಷ ಕೋಟಿ ಇದ್ದ ಎಲೆಕ್ಟ್ರಾನಿಕ್ಸ್ ಉತ್ಪಾದನೆ 2025-26ರಲ್ಲಿ ₹13.11 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಫ್ತುಗಳು ₹4.24 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಮೊಬೈಲ್ ಫೋನ್ ರಫ್ತು ಮಾತ್ರ ₹2.6 ಲಕ್ಷ ಕೋಟಿ ತಲುಪಿದೆ. ಕಳೆದ ದಶಕದಲ್ಲಿ ಈ ವಲಯದಲ್ಲಿ 25 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ಮೊಬೈಲ್ ಉತ್ಪಾದನಾ ವಲಯದಲ್ಲೇ 12 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳು ಲಭಿಸಿವೆ. ನೇರ ಕಾರ್ಯಪಡೆಯ ಸುಮಾರು 70% ಮಹಿಳೆಯರು ಎಂಬುದು ವಿಶೇಷ. ತಮಿಳುನಾಡಿನ ಹೊಸೂರು, ಶ್ರೀಪೆರಂಬದೂರು ಹಾಗೂ ಕರ್ನಾಟಕದ ಬೆಂಗಳೂರಿನ ಮೊಬೈಲ್ ಉತ್ಪಾದನಾ ಘಟಕಗಳು ಸೇರಿ ಒಂದು ಲಕ್ಷಕ್ಕೂ…
ಭಾರತ–ಲಂಡನ್ CETA ಜಾರಿ; ಭಾರತದ 99% ರಫ್ತಿಗೆ ಯುಕೆಯಲ್ಲಿ ಶೂನ್ಯ ಸುಂಕ
ನವದೆಹಲಿ: ಭಾರತ–ಯುನೈಟೆಡ್ ಕಿಂಗ್‌ಡಮ್ ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಬುಧವಾರದಿಂದ ಜಾರಿಗೆ ಬಂದಿದ್ದು, ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ. ಒಪ್ಪಂದದಡಿ ಯುಕೆಗೆ ಭಾರತದ ಸುಮಾರು 99% ರಫ್ತಿಗೆ ಶೂನ್ಯ ಸುಂಕ ಸೌಲಭ್ಯ ದೊರೆಯಲಿದ್ದು, ಜವಳಿ, ಚರ್ಮ, ರತ್ನಾಭರಣ, ಎಂಜಿನಿಯರಿಂಗ್, ಸಮುದ್ರ ಉತ್ಪನ್ನ, ರಾಸಾಯನಿಕ ಹಾಗೂ ಸಂಸ್ಕರಿತ ಆಹಾರ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ. ಒಪ್ಪಂದ ಜಾರಿಯಾದ ಮೊದಲ ದಿನವೇ ದೇಶದ 20ಕ್ಕೂ ಹೆಚ್ಚು ಬಂದರು, ವಿಮಾನ ನಿಲ್ದಾಣ, ಐಸಿಡಿ, ಎಸ್‌ಇಝಡ್ ಹಾಗೂ ಉತ್ಪಾದನಾ ಘಟಕಗಳಿಂದ 140 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ರಫ್ತು ಸರಕುಗಳನ್ನು ರವಾನಿಸಲಾಯಿತು. ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಇದು ಭಾರತ–ಯುಕೆ ಸಂಬಂಧದಲ್ಲಿ “ನಿರ್ಣಾಯಕ ಮೈಲಿಗಲ್ಲು” ಎಂದು ಬಣ್ಣಿಸಿದ್ದು, MSMEಗಳು, ರೈತರು, ತಯಾರಕರು ಹಾಗೂ ಐಟಿ, ಹಣಕಾಸು, ಶಿಕ್ಷಣ ಮತ್ತು ವೃತ್ತಿಪರ…
