ಇಡೀ ದೇಶದ ಚಿತ್ತ ಸೆಳೆದ ರಾಜ್ಯದ ಸಾರಿಗೆ ಸಂಸ್ಥೆ; KSRTC, BMTC ಗೆ ಬರೋಬ್ಬರಿ 13 ಪ್ರಶಸ್ತಿಗಳು..

ನವದೆಹಲಿ: ದೇಶದಲ್ಲೇ ಜನಪಯ ಸಾರಿಗೆ ಸಂಸ್ಥೆಯಾಗಿ ಗುರುತಾಗಿರಿವ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ಇದೀಗ ಮತ್ತೊಮ್ಮೆ ಇಡೀ  ದೇಶದ ಚಿತ್ತ ಸೆಳೆದಿದೆ. ರಾಜ್ಯದ ಸಾರಿಗೆ ಸಂಸ್ಥೆಯಾಗಿರುವ KSRTC ಹಾಗೂ BMTC ನಿಗಮಗಳಿಗೆ ಮತ್ತೆ 13 ಪ್ರಶಸ್ತಿಗಳು ಸಿಕ್ಕಿವೆ.‌ KSRTCಗೆ ಒಟ್ಟು 9 ವರ್ಗಗಳಲ್ಲಿ ಹಾಗೂ BMTCಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ Corporate Collateral ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.  . ಸೆಪ್ಟೆಂಬರ್ 22ರಂದು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ನವದೆಹಲಿಯ ಪಿ.ಹೆಚ್.ಡಿ. ಚೇಂಬರ್ಸ್‌ನಲ್ಲಿ ನಡೆದ 17ನೇ ವಿಶ್ವ ಸಂವಹನ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಲಾಯಿರು. ಪ್ರಶಸ್ತಿ ಸಮಾರಂಭದಲ್ಲಿ, ಗುಲಾಂ ರೆಹಮಾನ್, ಮಾಹಿತಿ ಆಯುಕ್ತರು, ಬಾಂಗ್ಲಾದೇಶ, ಎಂ ಬಿ ಜಯರಾಂ, ಗೌರವ ಮುಖ್ಯಸ್ಥರು, ಪಿ.ಆರ್.ಸಿ.ಐ,,  ಬಿ.ವಿ ವಿಠ್ಠಲ್, ನಿರ್ದೇಶಕರು, ಎನ್.ಎಫ್.ಎಲ್., ಪ್ರೊ. ಮ್ಯಾಥ್ಯು ಹಿಬರ್ಡ್, ನಿರ್ದೇಶಕರು, ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ…

ಕಾವೇರಿ ಕಿಚ್ಚಿನಿಂದಾಗಿ ಸಕ್ಕರೆ ನಾಡು ಸ್ತಬ್ಧ; ಮಂಡ್ಯ ಬಂದ್‌ಗೆ ಭಾರೀ ಬೆಂಬಲ

ಮಂಡ್ಯ: ಕಾವೇರಿ ಕಿಚ್ಚಿನಿಂದಾಗಿ ಸಕ್ಕರೆ ನಾಡು ಇಂದು ಸ್ತಬ್ಧವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆನೀಡಿವೆ. ಕಾವೇರಿ ನೀರಿನ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶಗೊಂಡಿರುವ ಸಂಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ಬಂದ್ ಆಚರಿಸುತ್ತಿವೆ. ಮಂಡ್ಯ, ಮದ್ದೂರು ಸಹಿತ ಹಲವು ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಅಂಗಡಿ ಮುಂಗಟ್ಟುಗಳೂ ತೆರೆದಿಲ್ಲ. ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಅನ್ನದಾತರ ಪ್ರತಿಭಟನೆ ಇದೀಗ ಬಂದ್​ ಸ್ವರೂಪ ಪಡೆದುಕೊಂಡಿದೆ. ಬಂದ್, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಮಂಡ್ಯ ಬಂದ್; ಕಾವೇರಿ ಹೋರಾಟಕ್ಕೆ ಜೆಡಿಎಸ್ ಬೆಂಬಲ

ಬೆಂಗಳೂರು: ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯ ಜಿಲ್ಲೆಯ ಜನರು ನಡೆಸುತ್ತಿರುವ ಬಂದ್ ಗೆ ತಮ್ಮ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈ ಬಗ್ಗೆ ನವದೆಹಲಿಯಿಂದಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಶನಿವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ತಾವು ವಾಪಸ್ಸಾಗಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮಂಡ್ಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ಸರ್ಕಾರದ ತಪ್ಪಿನಿಂದ ರಾಜ್ಯದ ಜನರು ದೊಡ್ಡ ಪ್ರಮಾಣದ ಜಲ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಈಗಾಗಲೇ ಭೀಕರ ಜಲಕ್ಷಾಮದ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಆದರೂ ಸರಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಹಿಗಾಗಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಜನರ ಜತೆ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಅಮಿತ್ ಶಾ ಜತೆ ಕುಮಾರಸ್ವಾಮಿ ‘ಕಾವೇರಿ’ದ ಚರ್ಚೆ..!  

ಬೆಂಗಳೂರು: ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದ ಅವರು; ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಬಹಳ ಅಸಡ್ಡೆ ಪ್ರದರ್ಶಿಸಿದೆ. ಕನ್ನಡನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಕಿಡಿಕಾರಿದರು. ಒಂದು ಕಡೆ ನೀರಿನಲ್ಲ ಎಂದು ಸರಕಾರವೇ ಹೇಳುತ್ತದೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ತಡವಾಗಿ ಅರ್ಜಿಯನ್ನು ಹಾಕಿದೆ ಸರಕಾರ.…

ಚಾಮರಾಜನಗರಕ್ಕೆ ಸಿದ್ದರಾಮಯ್ಯ.. ಸಿಎಂ ಸ್ವಾಗತಕ್ಕೆ ಭರ್ಜರಿ ತಯಾರಿ

ಹನೂರು: ಮುಖ್ಯಮಂತ್ರಿಯಾದ ನಂತರ ಮೊಟ್ಟಮೊದಲ ಬಾರಿಗೆ ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯರವರನ್ನು ಅದ್ದೂರಿಯಾಗಿ ಸ್ವಾಗತಕೋರಿ ಬರಮಾಡಿಕೊಳ್ಳಬೇಕೆಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಸ್ತೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಸೆಪ್ಟೆಂಬರ್ 26ರಂದು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮದುವನಹಳ್ಳಿ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ ಆಯಾಯ ಗ್ರಾಮದ ಮುಖಂಡರುಗಳು ಕೆಪಿಸಿಸಿ ಕಚೇರಿಯ ಮಾರ್ಗದರ್ಶನದಲ್ಲಿ ಶಿಷ್ಟಾಚಾರದಂತೆ ಫ್ಲೆಕ್ಸ್ ಅಳವಡಿಸಿ ಅದ್ದೂರಿ ಸ್ವಾಗತ ಕೋರಬೇಕು ಎಂದು ತಿಳಿಸಿದರು. ನಿಗಮ ಮಂಡಳಿ ಸದಸ್ಯರುಗಳು, ಆಶ್ರಯ, ಆರಾಧನಾ, ಅಕ್ರಮ ಸಕ್ರಮ, ಸ್ಥಳೀಯ ನಗರ ಸಂಸ್ಥೆಗಳಿಗೆ ಹನೂರು ವಿಧಾನಸಭಾ ಕ್ಷೇತ್ರದ ಹೆಚ್ಚಿನ ಕಾರ್ಯಕರ್ತರಿಗೆ ಅಧಿಕಾರ…

ಲೋಕಾ ಸಮರದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ; NDA ಗರಡಿ ಸೇರಿದ ಗೌಡರ ಸೈನ್ಯ

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಹೊಸ ಮನ್ವಂತರ ಆರಂಭವಾಗಿದೆ. ರಾಜಕೀಯದಲ್ಲಿ ಪ್ರಬಲ ಸೈದ್ದಾಂತಿಕ ಎದುರಾಳಿಗಳಾಗಿರುವ ಬಿಜೆಪಿ-ಜೆಡಿಎಸ್ ಪಕ್ಷಗಳು ಒಂದಾಗಿವೆ. ಮುಂಬರುವ ಲೀಕಸಭಾ ಚುನಾವಣೆಯಲ್ಲಿ ಮೈತ್ರಿ ಹೋರಾಟಕ್ಕೆ ಎರಡೂ ಪಕ್ಷಗಳು ಸಂಕಲ್ಪತೊಟ್ಟಿವೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಸರತ್ತು ನಡೆಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಉಭಯ ಪಕ್ಷಗಳ ನಾಯಕರು ಮಹತ್ವದ ಮಾತುಕತೆ ನಡೆಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಕೈಜೋಡಿಸುವ ಪ್ರಕ್ರಿಯೆಗೆ ಮುನ್ನುಡಿ ಬರೆದ ಈ ಮುಖಂಡರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ .ಅಡಿಕೊಳ್ಳುವ ಬಗೆಗಿನ ಕುತೂಹಲಗಳಿಗೆ ರೋಚಕತೆ ತುಂಬಿದರು. ನಿಖಿಲ್ ಕುಮಾರ ಸ್ವಾಮಿ ಸಹಿತ ಜೆಡಿಎಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಹನೂರು ಪಟ್ಟಣದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ; ದಿನೇಶ್ ಗುಂಡುರಾವ್ ಭರವಸೆ

ಹನೂರು : ಪಟ್ಟಣದ ಕೇಂದ್ರ ಸ್ಥಾನದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್.ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರತಿ ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆಗಳು ನಡೆದಿದೆ. ಅದರಂತೆ ನೂತನ ಹನೂರು ತಾಲೂಕಿನಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಿನ ವರ್ಷ ಕ್ರಮ ಕೈಗೊಳ್ಳಲಾಗುವುದು ಇದಲ್ಲದೆ ಹನೂರು ತಾಲೂಕಿನಲ್ಲಿ ಒಂದು ಡಯಾಲಿಸಿಸ್ ಕೇಂದ್ರವನ್ನು ತೆರೆಯಲು ತುರ್ತಾಗಿ ಆದೇಶ ಮಾಡುತ್ತೇನೆ ಹಾಗೂ ಕೌದಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮೊದಲು ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಹನೂರು ತಾಲೂಕು…

ಸಂಘನಿಕೇತನ ಗಣೇಶೋತ್ಸವ.. ಕ್ರೈಸ್ತ ಸಮುದಾಯದ ಗಣ್ಯರಿಂದ ಕೈಂಕರ್ಯ

ಮಂಗಳೂರು: ಕಡಲತಡಿ ಮಂಗಳೂರಿನ ಸಂಘನಿಕೇತನದಲ್ಲಿ ಗಣೇಶೋತ್ಸವ ಸಂಭ್ರಮ ಗಮನಸೆಳೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿ ಕೇಂದ್ರ ಸಂಘನಿಕೇತನಕ್ಕೆ ಭೇಟಿ ನೀಡಿದ ಕ್ರೈಸ್ತ ಸಮುದಾಯದ ಗಣ್ಯರು ಈ ಉತ್ಸವ ಸಂಭ್ರಮದಲ್ಲಿ ಭಾಗಿಯಾಗಿ ಕುತೂಹಲದ ಕೇಂದ್ರಬಿಂದುವಾಗಿದೆ. ದಶಕಗಳ ಗಣೇಶೋತ್ಸವ ಆಚರಣೆಗೆ ಹೆಸರಾಗಿರುವ ಸಂಘನಿಕೇತನದಲ್ಲಿ ಭಾಗಿಯಾದ ಕ್ರೈಸ್ತ ಸಮುದಾಯದ ಗಣ್ಯರು, ವಿವಿಧ ಕೈಂಕರ್ಯ ನೆರವೇರಿಸಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಕ್ರೈಸ್ತ ಸಮದಾಯದ ಗಣ್ಯರ ಭೇಟಿ ನೀಡಿದ್ದರು. ಈ ಗಣ್ಯರನ್ನು ಬರಮಾಡಿಕೊಂಡ ಆರೆಸ್ಸೆಸ್ ದಕ್ಷಿಣ ಪ್ರಾಂತ‌ ಸರಸಂಘ ಚಾಲಕ ಡಾ ವಾಮನ್‌ ಶಣೈ ಅವರು ಪೂಜಾ ಮಹೋತ್ಸವದ ಮಹತ್ವ ವಿವರಿಸಿದರು. ಸಾಮರಸ್ಯ ಹಾಗೂ ಸೌಹಾರ್ದತೆಯ ಉದ್ದೇಶದಿಂದ ಗಣೇಶೋತ್ಸವದಲ್ಲಿ ಭಾಗಿಯಾದ ಕ್ರೈಸ್ತ ಸಮುದಾಯದ ಗಣ್ಯರು ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 76 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಇದಾಗಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ…

ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಯುವಕ ಸಾವು

ದೊಡ್ಡಬಳ್ಳಾಪುರ: ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಲು ಮುಂದಾದ ಯುವಕ, ವಿದ್ಯುತ್ ಶಾಕ್ ಒಳಗಾಗಿ ಸಾವನಪ್ಪಿರುವ ಘಟನೆ ನಗರದ ಜಿ.ರಾಮೇಗೌಡ ವೃತ್ತದ ಸಮೀಪದ ಹಾಲಿನ ಶಿಥಲೀಕರಣ ಘಟಕದ ಬಳಿ ಸಂಭವಿಸಿದೆ. ಶಾಂತಿನಗರ ನಿವಾಸಿ ರೋಷನ್(20 ವರ್ಷ) ಮೃತ ಯುವಕ ಎಂದು ಗುರುತಿಸಲಾಗಿದೆ. ಗ್ಯಾರೇಜಿನಲ್ಲಿ ಸಾಕಿದ್ದ ಬೆಕ್ಕಿನ ಕೊರಳಿಗೆ ಅಳವಡಿಸಿದ್ದ ಚೈನ್ ಮರಕ್ಕೆ ಸಿಕ್ಕಿಕೊಂಡಿದ್ದರಿಂದ ಬೆಕ್ಕು ಮರದ ಮೇಲೆಯೇ ಕುಳಿತು ಚಿರಾಡುತ್ತಿತ್ತು. ಇದನ್ನು ಗಮನಿಸಿದ ರೋಷನ್, ಬೆಕ್ಕನ್ನು ರಕ್ಷಿಸಲು ಮರ ಏರಿದ್ದಾನೆ. ಈ ವೇಳೆ ಮರದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿ ಯುವಕ ಮರದಲ್ಲೇ ಜೀವ ಬಿಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಸಂಕಷ್ಟ ಸೂತ್ರ ಜಾರಿಯಾಗುವ ತನಕ ತಮಿಳುನಾಡಿಗೆ ನೀರು ಹರಿಸಬೇಡಿ; ಸರ್ಕಾರಕ್ಕೆ ಜಲ ಸಂರಕ್ಷಣಾ ಸಮಿತಿ ಆಗ್ರಹ

ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ತೀರ್ಪು ಒಪ್ಪಬಾರದು ಸಂಕಷ್ಟ ಸೂತ್ರ ಜಾರಿಯಾಗೂ ತನಕ ಒಪ್ಪುವುದಿಲ್ಲ ಎಂದು ರಾಜ್ಯ ಸರ್ಕಾರ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕು ಎಂದು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ. ರಾಜ್ಯದ ಜನರ ರೈತರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನಾರ್ತ್ ಈಸ್ಟ್ ಮಾನ್ಸೂನ್ ಮಳೆ ತಮಿಳುನಾಡಿಗೆ ಹೆಚ್ಚು ಬರುವ ಅಲ್ಲಿನ ನೀರು ಅದೇ ರಾಜ್ಯಕ್ಕೆ ಹೋಗುವ ಕಾರಣ ಕಾರಣ ನಾವು ಕಾವೇರಿ ಜಲಾಶಯದಿಂದ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಿ, ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಸಂಕಷ್ಟ ಸೂತ್ರ ಜಾರಿಯಾಗುವ ತನಕ ಆದೇಶ ಪಾಲನೆ ಸಾಧ್ಯವಿಲ್ಲ ಎಂದು ತಿಳಿಸಬೇಕು ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖ್ಯಸ್ಥರೂ ಆದ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ…