ಕೊರೋನಾ ಹಾಟ್’ಸ್ಪಾಟ್ ಪಾದರಾಯನಪುರದಲ್ಲಿ ಪುಂಡರ ಕ್ರೌರ್ಯ

ಬೆಂಗಳೂರು: ಕೊರೋನಾ ಹಾಟ್’ಸ್ಪಾಟ್ ಬೆಂಗಳೂರಿನ ಪಾದರಾಯನಪುರ ಘಟನೆಯಿಂದ ಇಡೀ ಬೆಂಗಳೂರು ಅಕ್ಷರಶಃ ಬೆಚ್ಚಿ ಬಿದ್ದಿದೆ. ಕೊರೋನಾ ಹಾವಳಿ ನಿಯಂತ್ರಣ ಕೆಲಸದಲ್ಲಿ ತೊಡಗಿದವರ ಮೇಲೆ ಪೈಶಾಚಿಕ ದಾಳಿ ನಡೆದಿದ್ದು, ಈ ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪಾದರಾಯನಪುರ ವಾರ್ಡ್ ಬೆಂಗಳೂರಿನ ಕೊರೋನಾ ಪ್ರಕರಣಗಳ ಪೈಕಿ ಅತೀ ಸೂಕ್ಷ್ಮ ಪ್ರದೇಶ. ಸೀಲ್ ಡೌನ್ ನಿರ್ಧಾರ ವಿಚಾರದಲ್ಲಿ ಮೊದಲನೆಯ ವಾರ್ಡ್ ಎಂದೇ ಗುರುತಾಗಿದ್ದ ಈ ಪ್ರದೇಶ ಭಾನುವಾರ ರಾತ್ರಿ ರಣರಂಗದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸೋಂಕಿತರ ಸಂಪರ್ಕದ ಕಾರಣಕ್ಕಾಗಿ ಮುಂಜಾಗರೂಕತಾ ಕ್ರಮವಾಗಿ ಶಂಕಿತರನ್ನು ಕ್ವಾರಂಟೈನ್’ಗೆ ವ್ಯವಸ್ಥೆ ಮಾಡಲು ತೆರಳಿದ್ದ ಕೊರೋನಾ ವಾರಿಯರ್ಸ್ ಮೇಲೆ ಪುಂಡರು ದಾಳಿ ಮಾಡಿದ್ದಾರೆ.

ಆರಂಭದಲ್ಲಿ ಕೆಲವೇ ಮಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು ವಿಸ್ತಾರವಾದಾಗ 30 ಜನರನ್ನು ಕ್ವಾರಂಟೈನ್’ಗೆ ಗುರಿಪಡಿಸಲಾಗಿತ್ತು. ಇನ್ನುಳಿದ ಸುಮಾರು 50 ಮಂದಿಯನ್ನು ಕ್ವಾರಂಟೈನ್’ಗೆ ಕರೆದೊಯ್ಯಬೇಕಿತ್ತು. ಈ ಸಂಬಂಧ ಅವರನ್ನು ಮನವೊಲಿಸಲು ಕೊರೋನಾ ವಾರಿಯರ್ಸ್ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರು ಸ್ಥಳಕ್ಕೆ ಆಗಮಿಸುವವರೆಗೂ ನಾವು ಬರಲ್ಲ ಎಂದು ಪಟ್ಟು ಹಿಡಿದರು. ಆ ಕೂಡಲೇ ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪುಂಡರು ಬಾಡಿಗೆ, ರಾಡುಗಳಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ತಿ ಪಾಸ್ತಿ ನಾಶ ಮಾಡಿ ಕ್ರೌರ್ಯ ಪ್ರದರ್ಶಿಸಿದ್ದಾರೆ.

ಕ್ಷಣಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆಯಲು ಸಾಧ್ಯವಾಗದ ರೀತಿಯ ಪ್ರಸಂಗ ಅದಾಗಿತ್ತು. ಈ ಘಟನೆ ಕುರಿತು ಸಿಸಿಟಿವಿ ಫೂಟೇಜ್ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ. ರಾತ್ರಿ ನಡೆದ ಈ ಘಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ..  ಚೀನಾ ವಿರುದ್ಧ ತೊಡೆ ತಟ್ಟಿದ ಭಾರತ, ಅಮೇರಿಕ; ಡ್ರ್ಯಾಗನ್ ರಾಷ್ಟ್ರ ಕಂಗಾಲು

Related posts