‘ಇಂದಿರಾ ಕ್ಯಾಂಟೀನ್ ಬಿಲ್ ವಿಚಾರಕ್ಕೂ ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ; ಮಾಹಿತಿ ಕಲೆಹಾಕಿದ ಸಿಸಿಬಿ

ಬೆಂಗಳೂರು: ಕೋಟಿ ರೂಪಾಯಿ ಪಡೆದು ಟಿಕೆಟ್ ವಂಚನೆ ಆರೋಪಕ್ಕೆ ಗುರಿಯಾಗಿರುವ ಹಿಂದೂ ಭಾಷಣಗಾರ್ತಿ ಚಿತ್ರಾ ಕುಂದಾಪುರ ಇದೀಗ ಬಂಧನದಲ್ಲಿದ್ದು ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಂಧನ ಸಂದರ್ಭದಲ್ಲಿ ಆತ್ಮಹತ್ಯೆ ಯತ್ನದ ಪ್ರಹಸನ ಮಾಡಿದ್ದ ಚೈತ್ರಾ ಕುಂದಾಪುರ, ಸಿಸಿಬಿ ಕಸ್ಟಡಿಯಲ್ಲಿದ್ದಾಗಲೂ ತಮ್ಮ ಚಾಲಾಕಿ ವರ್ತನೆ ತೋರಿಸಿದ್ದಾರೆ. ಟಿಕೆಟ್ ವಂಚನೆ ಆರೋಪ ಬಗ್ಗೆ ಮಾಧ್ಯಮಗಳು ಫೋಕಸ್ ಮಾಡುತ್ತಿದ್ದಂತೆಯೇ, ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ವಿಚಾರ ಪ್ರಸ್ತಾಪ ಮಾಡಿದ ಬೆಳವಣಿಗೆಯಿಂದ ಎಲ್ಲರ ಗಮನವನ್ನು ಬೇರೊಂದು ಕಡೆ ಸೆಳೆಯುವಂತಾಗಿದೆ. ಚೈತ್ರಾ ಸಿಡಿಸಿರುವ ‘ಇಂದಿರಾ ಕ್ಯಾಂಟೀನ್ ಬಿಲ್ ಬಾಂಬ್’ ವಿಚಾರವನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಈ ನಡುವೆ, ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ವಿಚಾರವನ್ನು ಚೈತ್ರಾ ಕುಂದಾಪುರ ಅವರು ಯಾಕೆ ಪ್ರಸ್ತಾಪಿಸಿದ್ದಾರೆ ಎಂಬುದೇ ಕುತೂಹಲಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ…

ಚೈತ್ರಾ ಕೇಸ್; ಹೆಜ್ಜೆ ಜಾಡು ಬೆನ್ನತ್ತಿ ಕೋಟಿ ರೂಪಾಯಿ ಆಸ್ತಿ ದಾಖಲೆ, ಝಣ-ಝಣ ಕಾಂಚಾಣ ಪತ್ತೆ ಮಾಡಿದ ರೀನಾ ಟೀಮ್

ಬೆಂಗಳೂರು: ಬೆಂಗಳೂರಿನ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡುವುದಾಗಿ ನಂಬಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದೆನ್ನಲಾದ ಚಿನ್ನಾಭರಣ, ನಗದು ಸಹಿತ ಆಸ್ತಿ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬಂಡೆಪಾಳ್ಯದಲ್ಲಿ ದಾಖಲಾಗಿರುವ ಈ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಸರಣಿ ಕಾರ್ಯಾಚರಣೆ ಸಾಗಿದೆ. ಇದೇ ಸಂದರ್ಭದಲ್ಲಿ ಸರ್ಚ್ ವಾರೆಂಟ್ ಪಡೆದು ಅಖಾಡಕ್ಕೆ ಧುಮುಕಿರುವ ರೀನಾ ಸುವರ್ಣ ನೇತೃತ್ವದ ಸಿಸಿಬಿ ತಂಡ ಕರಾವಳಿಜಿಲ್ಲೆಯಲ್ಲಿ ನಡೆಸಿರುವ ಕಾರ್ಯಾಚರಣೆ ಕುತೂಹಲದ ಕೇಂದ್ರಬಿಂದುವಾಯಿತು. 3.5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಗ್ಯಾಂಗ್ ಆ ಹಣವನ್ನು ಎಲ್ಲಿ ಇಟ್ಟಿದೆ ಎಂಬ ಬಗ್ಗೆ ಶೋಧನೆಗಿಳಿದಿರುವ ಈ ಪೊಲೀಸರು, ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಗೆ ತೆರಳಿ ತನಿಖೆ ಕೈಗೊಂಡಿದೆ. ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದ ಆಸ್ತಿ ಪತ್ರ, ಬಂಗಾರವನ್ನು ಪತ್ತೆ ಮಾಡಿದೆ.…

ಡೈಮಂಡ್ ಲೀಗ್ 2023: ಎರಡನೇ ಸ್ಥಾನ ಗೆದ್ದನೀರಜ್ ಚೋಪ್ರಾ

ಕಳೆದ ವರ್ಷ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಜಾವೆಲಿನ್ ಸೆನ್ಸೇಷನ್ ನೀರಜ್ ಚೋಪ್ರಾ, ಶನಿವಾರ ತಡರಾತ್ರಿ ಹೇವರ್ಡ್ ಫೀಲ್ಡ್‌ನಲ್ಲಿ ನಡೆದ ಡೈಮಂಡ್ ಲೀಗ್ 2023 ಫೈನಲ್‌ನಲ್ಲಿ ಶ್ಲಾಘನೀಯ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.. ಅವರು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಅವರು ಗಮನಾರ್ಹಪ್ರದರ್ಶನ ನೀಡಿ ಜಗತ್ತಿನ ಗಮನಸೆಳೆದಿದ್ದಾರೆ. 89.94 ಮೀಟರ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ 25 ವರ್ಷದ ಭಾರತೀಯ ಅಥ್ಲೀಟ್ ನೀರಜ್ ತನ್ನ ಆರಂಭಿಕ ಪ್ರಯತ್ನದಲ್ಲಿ ಫೌಲ್‌ನೊಂದಿಗೆ ಪ್ರಾರಂಭಿಸಿದರು. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 83.80 ಮೀ ಎಸೆಯುವ ಮೂಲಕ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು, 84.01 ಮೀ ಪ್ರಯತ್ನದಿಂದ ಪ್ರಾರಂಭಿಸಿದ ವಡ್ಲೆಜ್ಚ್ ನಂತರ ಎರಡನೇ ಸ್ಥಾನವನ್ನು ಪಡೆದರು. ತನ್ನ ಮೂರನೇ ಪ್ರಯತ್ನದಲ್ಲಿ 81.37 ಮೀ ಎಸೆದರೂ ಮತ್ತು ನಾಲ್ಕನೇ ಬಾರಿಗೆ ಮತ್ತೊಂದು ಫೌಲ್ ಮಾಡಿದರೂ, ನೀರಜ್ ತನ್ನ ಮುನ್ನಡೆಯನ್ನು ಕಾಯ್ದುಕೊಂಡ ವಡ್ಲೆಜ್ಚ್ ಅವರನ್ನು…

ಅಬಾಕಸ್: ರಾಷ್ಟ್ರೀಯ ಚಾಂಪಿಯನ್ ಆದ ಪೌರಕಾರ್ಮಿಕರ ಮಗ: ಸಾಧನೆಗೈದ ಸರ್ಕಾರಿ ಶಾಲಾ ಬಾಲಕ ವಸಂತ್

ದೊಡ್ಡಬಳ್ಳಾಪುರ: ತಮಿಳುನಾಡಿನ ಚೆನ್ನೈ ನಗರದ ಟ್ರೇಡ್ ಸೆಂಟರ್ ನಲ್ಲಿ ನಡೆದ 42ನೇ ರಾಷ್ಟ್ರೀಯ ಹಂತದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ವಸಂತ್.ಎಸ್ ಚಾಂಪಿಯನ್ ಆಗಿದ್ದು, ವಿದ್ಯಾರ್ಥಿಯ ಸಾಧನೆಗೆ ಮೆಚ್ಚಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಅವರು ಶಾಲೆಗೆ ಬಂದು ವಿದ್ಯಾರ್ಥಿ ವಸಂತ್‌ಗೆ ಶುಭಾಶಯ ಕೋರಿ, ಶಾಲೂ ಹೊದಿಸಿ ಅಭಿನಂದನೆ ಸಲ್ಲಿಸಿದರು. ನಗರಸಭೆಯಲ್ಲಿ ಪೌರಕಾರ್ಮಿರಾಗಿ ಕೆಲಸ ಮಾಡುತ್ತಿರುವ ಸುಬ್ಬು ಮತ್ತು ಮಂಜಮ್ಮ ಅವರ ಪುತ್ರ ವಸಂತ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸೆಪ್ಟೆಂಬರ್ 10 ರಂದು ಚೆನೈ ನಗರದಲ್ಲಿ ಆಯೋಜಿಸಲಾಗಿದ್ದ 42ನೇ ರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಸಂತ್.ಎಸ್ ಅಬಾಕಸ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾನೆ. ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ B4 ಚಾಂಪಿಯನ್ ಸ್ಥಾನ ಪಡೆದ ವಸಂತ್ ವಿದ್ಯೆ…

ಮುಖದ ಸೌಂದರ್ಯಕ್ಕೆ ಮೊಡವೆಗಳು ಅಡ್ಡಿಯೇ? ಪರಿಹಾರಕ್ಕಾಗಿ ಈ ಉಪಕ್ರಮ ಅನುಸರಿಸಿ

ಮುಖದ ಸೌಂದರ್ಯಕ್ಕೆ ಮೊಡವೆಗಳು ಅಡ್ಡಿಯಾಗುವುದು ಸಹಜ. ಮೊಡವೆಗಳಿಂದ ಮುಕ್ತರಾಗಿ ಆರೋಗ್ಯ ತ್ವಚೆ ಪಡೆಯಲು ಕೆಲವೊಂದು ಉಪಾಯಗಳನ್ನು ಅನುಸರಿಸಬಹುದು. ಪ್ರಮುಖವಾಗಿ ಜೀವನಶೈಲಿ ಬದಲಾಗಬೇಕು. ನಿಯಮಿತ ಶ್ರಮದೀಪ್ತ ಜೀವನಶೈಲಿ, ಸರಿಯಾದ ಮತ್ತು ಸಾಕಾಗುವಷ್ಟು ನಿದ್ದೆ ಮಾಡಬೇಕು. ಜಂಕ್ ಫುಡ್ ನಂತಹ ತಿಂಡಿಗಳ ಕಡಿವಾಣ ಕೂಡಾ ಮೊಡವೆಗಳ ಸ್ವಸ್ಥತೆಗೆ ಸಹಕಾರಿ ಸೂತ್ರ. ಪ್ರೊಟೀನ್-ಸಮೃದ್ಧ ಆಹಾರ, ಹಾಲಿನ ಉಪಯೋಗವನ್ನು ಹಾಗೂ ತಿಂಡಿಗಳನ್ನು ನಿಯಮಿತವಾಗಿ ಸೇವಿಸುವುದು ಮೊಡವೆಗಳ ಸ್ವಸ್ಥತೆಗೆ ಸಹಾಯ ಮಾಡಬಹುದು. ಮಾಲಿನ್ಯ ನಿವಾರಣೆಗಾಗಿ ಅತಿಯಾದ ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಹಿಡಿದುಕೊಳ್ಳಬೇಕು. ಇದರಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಉಲ್ಬಣಗೊಳ್ಳುತ್ತವೆ. ಈಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ ವಿಧಾನ. ಜೀರ್ಣ ಶಕ್ತಿ ಸ್ವಸ್ಥವಾಗಿದ್ದಲ್ಲಿ, ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಫೈಬರ್-ಸಮೃದ್ಧ ಆಹಾರವನ್ನು ಸೇವಿಸುವುದು ಪಚನಕ್ರಿಯೆಯನ್ನು ಸುಧಾರಿಸಬಹುದು. ಇದರಿಂದ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗಬಹುದು.

ಪೊಲೀಸ್ ವ್ಯವಸ್ಥೆಗೆ ಮತ್ತೆ ಸರ್ಜರಿ; ಮತ್ತೆ 93 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ವಿವಿಧ ಠಾಣೆಗಳ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆಯಾ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಹಲವು ಠಾಣೆಗಳ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ 93 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಸುಧಾಕರರನ್ನು ಸಚಿವ ಸ್ಥಾನದಿಂದ ಕೈಬಿಡಿ: ಸಿ.ಟಿ.ರವಿ

ಬೆಂಗಳೂರು: ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ನಡೆಸಿದ್ದಾರೆಂದು ಕಾಂಗ್ರೆಸ್ ಸಚಿವ ಡಿ.ಸುಧಾಕರ್ ಅವರ ಮೇಲೆ ದೂರು ದಾಖಲಾಗಿದೆ. ಸಚಿವರ ಮೇಲೆ ದೂರು ದಾಖಲಾಗಿ ಮೇಲ್ನೋಟಕ್ಕೆ ಸತ್ಯವಿದೆ ಎಂದು ಕಂಡುಬಂದಾಗ ನಿಷ್ಪಕ್ಷಪಾತ ತನಿಖೆಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಬಳಿಕ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ. ಆದ್ದರಿಂದ ಅವರನ್ನು ಸಚಿವಸಂಪುಟದಿಂದ ಕೈಬಿಡಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದಾ ಕಾಲ ದಲಿತರ ಪರ ಎನ್ನುವ ಮಹದೇವಪ್ಪ ಹಾಗೂ ಸಿಎಂ, ಗೃಹಸಚಿವರ ಸೇರಿ ಎಲ್ಲ ಖಾತೆಗಳ ಜಿಪಿಎ ಪಡೆದ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲಿ ಮೌನವಾಗಿದ್ದಾರೆ. ಅವರ ಮೌನ ಹಲವು ಅನುಮಾನಗಳನ್ನು ಸೃಷ್ಟಿಸುತ್ತದೆ. ಅವರು ಮೌನ ವಹಿಸಬಾರದೆಂದು ಒತ್ತಾಯಿಸಿದರು. 4 ತಿಂಗಳಾದರೂ ವರ್ಗಾವಣೆ ಗೊಂದಲ ಬಗೆಹರಿದಿಲ್ಲ. 115 ಪೊಲೀಸ್ ಅಧಿಕಾರಿಗಳಿಗೆ ಜಾಗ ತೋರಿಸದೆ, ಕೆಲಸವನ್ನೂ…

ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ? ಸರ್ಕಾರಕ್ಕೆ ಹೆಚ್ಡಿಕೆ ತರಾಟೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೃಷಿ ಮತ್ತು ಕಂದಾಯ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ? ಎಂದು ಪ್ರಶ್ನಿಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು…

ಭಾರತದ ಪ್ರಜೆಗಳಾದ ನಾವು: 500 ಶಾಲಾ ಮಕ್ಕಳೊಂದಿಗೆ ಸಂವಿಧಾನ ಓದು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ:ನಗರದ ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಜನಪರ ಸಂಘಟನೆಗಳ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ನಡೆಯಿತು. ಈ ವೇಳೆ ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಸಮ್ಮತವಾದ ಪ್ರಪಂಚದಲ್ಲೇ ಅತ್ಯುತ್ತಮವಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಜೀವಪರ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಿಐಟಿಯು ಮುಖಂಡ ಪಿಎ ವೆಂಕಟೇಶ್ ಮಾತನಾಡಿ ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಲ್, ಹಿಂದುಗಳಿಗೆ ರಾಮಾಯಣ ಮಹಾಭಾರತ ಶ್ರೇಷ್ಠಗ್ರಂಥವಾದರೆ ಇಡೀ ಭಾರತೀಯರಿಗೆ ನಮ್ಮ ಹೆಮ್ಮೆಯ ಸಂವಿಧಾನ ಶ್ರೇಷ್ಠವಾದ ಗ್ರಂಥ, ಸಂವಿಧಾನವೂ ಯಾವುದೇ ವ್ಯಕ್ತಿಯನ್ನು ಧರ್ಮ, ಜಾತಿ, ಭಾಷೆ, ಆಧಾರದ ಮೇಲೆ ತಾರತಮ್ಯ ತೋರುವುದಿಲ್ಲ, ಲಿಂಗ ಅಸಮಾನತೆಯನ್ನು ಸಹಿಸುವುದಿಲ್ಲ. ಇಂತಹ ಜೀವಪರ ಮೌಲ್ಯಗಳನ್ನು ಭಾರತೀಯರಾದ ನಾವೆಲ್ಲರೂ ಪಾಲಿಸುವುದರಿಂದ ದೇಶದ…

ಟಿಕೆಟ್ ರಾಕೆಟ್ ಕೋಲಾಹಲ; ಪೊಲೀಸ್ ವಶದಲ್ಲಿದ್ದಾಗಲೇ ಕುಸಿದು ಬಿದ್ದ ಚೈತ್ರಾ

ಬೆಂಗಳೂರು: ಟಿಕೆಟ್ ರಾಕೆಟ್ ಪ್ರಕರಣದ ತನಿಖೆ ರೋಚಕ ಘಟ್ಟದಲ್ಲಿದ್ದು ಸಿಸಿಬಿ ಪೊಲೀಸರ ತನಿಖೆ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಈ ನಡುವೆ ಸಿಸಿಬಿ ವಶದಲ್ಲಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಅವರನ್ನು ಇಂದು ಬೆಳಿಗ್ಗೆ ಪೊಲೀಸರು ಕರೆದೊಯ್ದ ಸಂದರ್ಭದಲ್ಲಿ ಕೋಲಾಹಲದ ಸನ್ನಿವೇಶ ನಡೆಯಿತು. ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಪೂಜಾರಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಆರೋಪಿ ಚೈತ್ರಾ ಕುಂದಾಪುರ ಅವರು ಪೊಲೀಸರ ವಶದಲ್ಲಿದ್ದಾಗ ತೀವ್ರ ಅಸ್ವಸ್ಥರಾಜಿ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಂಧಿತ ಆರೋಪಿಗಳಾದ ಚೈತ್ರಾ ಮತ್ತು ಇತರರನ್ನು ನ್ಯಾಯಾಲಯದ ಆದೇಶದಂತೆ 10 ದಿನಗಳ ಅವಧಿಗೆ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಪ್ರಕರಣ ಸಂಬಂಧ ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಈ ನಡುವೆಯೇ ಇಂದು ಬೆಳಿಗ್ಗೆ ಚೈತ್ರಾ ಕುಂದಾಪುರ ಅವರು ಅಸ್ವಸ್ಥರಾಗಿದ್ದು…