ಫಲಿತಾಂಶದ ಬಗ್ಗೆ ಗಮನ ಬೇಡ ಪ್ರಯತ್ನದ ಕಡೆಗೆ ಇರಲಿ; ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ: ಕ್ರೀಡೆ, ಶಿಕ್ಷಣದಲ್ಲಿ ಯಶಸ್ಸು ಗಳಿಸಲು ನಿರಂತರ ಅಭ್ಯಾಸ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ‌ಸಾಧಿಸಲು ಶೇ.೧೦೦ರಷ್ಟು ಪ್ರಯತ್ನಪಡಬೇಕು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜು, ಸರ್ಕಾರಿ ಪದವಿ ಪೂರ್ವ ‌ಕಾಲೇಜು ತೂಬಗೆರೆ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಶಾಸಕ ಚಾಲನೆ ನೀಡಿ ಮಾತನಾಡಿದರು. ಎಸ್.ಎಸ್.ಎಲ್.ಸಿ ನಂತರ ಪಿಯು ಕಾಲೇಜಿನಲ್ಲಿ ತಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆ ‌ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಇದು ಮುಖ್ಯ ಘಟ್ಟವಾಗಿದೆ. ಕ್ರೀಡೆ, ಶಿಕ್ಷಣಕ್ಕೆ ಇದು ಸೂಕ್ತ ವಯಸ್ಸು. ಈ ಸಮಯದಲ್ಲಿ ಜಿಲ್ಲೆ, ರಾಜ್ಯ ,ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆ ಆಗಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು. ಕ್ರೀಡೆಗಳಲ್ಲಿ ಒಗ್ಗಟ್ಟಾಗಿ ಭಾಗವಹಿಸಬೇಕು. ಕ್ರೀಡೆ, ಶಿಕ್ಷಣದಲ್ಲಿ ಸದಾ ಉತ್ತಮವಾಗಿರಬೇಕು. ತಾಲೂಕಿನಲ್ಲಿ ಪಿಯು…

ಗಣೇಶೋತ್ಸವಕ್ಕೆ ತಯಾರಿ; ದೊಡ್ಡಬಳ್ಳಾಪುರ ಪೋಲೀಸರಿಂದ ಶಾಂತಿಸಭೆ

ದೊಡ್ಡಬಳ್ಳಾಪುರ: ಸರ್ವಧರ್ಮ ಸಮನ್ವಯ ಸಾರುವ ನಿಟ್ಟಿನಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಿಸಬೇಕು, ಖಾಸಗಿ, ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಡಿವೈಎಸ್ಪಿ ರವಿ ಪಿ ತಿಳಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಉಪ‌ವಿಭಾಗದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಡಿವೈಎಸ್ ಪಿ ರವಿ.ಪಿ ಅವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಗರದ ಬಸವ ಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ಧ್ವನಿ ವರ್ಧಕ ಅನುಮತಿ ಪತ್ರ, ಬೆಸ್ಕಾಂ ಇಲಾಖೆಯಿಂದ ಅನುಮತಿ ಪತ್ರ, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಶೆಡ್, ಪೂಜಾ ಸ್ಥಳ ನಿರ್ಮಿಸಬೇಕು, ಡಿ.ಜೆ ಸೌಂಡ್ ಬಳಸಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ ಎಂದು ತಿಳಿಸಿದರು. ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ  4ಅಡಿ ಎತ್ತರ ಮೀರದಂತೆ ಹಾಗೂ ಮನೆಗಳಲ್ಲಿ 2ಅಡಿ ಎತ್ತರ ಮೀರದಂತೆ…

KSRTCಗೆ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ’ ಪ್ರಶಸ್ತಿ

ಮುಂಬೈ: ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ರಾಜ್ಯ ಸಾರಿಗೆ ಸಂಸ್ಥೆ (KSRTCಸಿ) ಗೆ ಸಾಲು ಪ್ರಶಸ್ತಿಗಳು ಸಿಗುತ್ತಿವೆ. ಇದೀಗ ಕಾಮಕಾಜಿ ಬಿ2ಬಿ ಮೀಡಿಯಾ ವತಿಯಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ಪ್ರಶಸ್ತಿಯೂ ಲಭಿಸಿದೆ. ಕಾಮಕಾಜಿ ಬಿ 2 ಬಿ ಮೀಡಿಯಾ ನೀಡುವ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ’ ವರ್ಗಗಳಲ್ಲಿ ಕೆಎಸ್ಸಾರ್ಟಿಸಿಗೆ ಎರಡು ಪ್ರಶಸ್ತಿಗಳು ಸಿಕ್ಕಿದೆ. ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ನಲ್ಲಿ ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಬ್ಲೂ ಯಾಂಡರ್ ವ್ಯವಸ್ಥಾಪಕ ನಿರ್ದೇಶಕರು ವಿನೋಕ್‌, ಬ್ಲೂ ಯಾಂಡರ್ ಉಪಾಧ್ಯಕ್ಷ ಉಮೇಶ್ ಗೌರ್, ಬ್ಲೂ ಯಾಂಡರ್ ನಿರ್ದೇಶಕ ಅನುರಾಧ ಅವರು 15ನೇ ಆವೃತ್ತಿಯ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ಶಿಪ್ ವರ್ಗದಡಿ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ…

ಕೆಂಗೇರಿ ಉಪನಗರದ ಬಸ್ ನಿಲ್ದಾಣ ಜನವರಿಯಲ್ಲಿ ಲೋಕಾರ್ಪಣೆ:

ಬೆಂಗಳೂರು: ಕೆಂಗೇರಿ ಉಪನಗರದ ಬಸ್ ನಿಲ್ದಾಣವನ್ನು ಜನವರಿ ತಿಂಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು. ಶಾಸಕ ಎಸ್.ಟಿ. ಸೋಮಶೇಖರ್ ಅವರ ಕೋರಿಕೆ ಮೇರೆಗೆ ಕೆಂಗೇರಿ ಉಪನಗರದಲ್ಲಿರುವ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಮತ್ತು ಅಧಿಕಾರಿಗಳೂಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆಂಗೇರಿ ಉಪನಗರದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಈ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಜನವರಿ ತಿಂಗಳ ಅಂತ್ಯದ ವೇಳೆಗೆ ಬಸ್ ನಿಲ್ದಾಣ ನಿಲ್ದಾಣವನ್ನು ಲೋಕಾರ್ಪಣೆ ಗೊಳಿಸಲಾಗುವುದು ಎಂದು ಹೇಳಿದರು. ಬಸ್ ನಿಲ್ದಾಣದಲ್ಲಿರುವ ಖಾಲಿ ಮಳಿಗೆಗಳನ್ನು ಅತಿ ಶೀಘ್ರವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಾರ್ವಜನಿಕರು ಹಾಗೂ ಕ್ಷೇತ್ರದ ಶಾಸಕರಾದ ಎಸ್‌.ಟಿ.ಸೋಮಶೇಖರ್ ಅವರು ಹೆಚ್ಚುವರಿ ಬಸ್ ಗಳನ್ನು ಓಡಿಸಲು ಸಚಿವರಲ್ಲಿ ಮನವಿ ಮಾಡಿದರು. ನಂತರ…

ಕೆಎಸ್ಸಾರ್ಟಿಸಿಗೆ World Manufacturing Congress ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಕೆಎಸ್ಸಾರ್ಟಿಸಿಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ (World Manufacturing Congress) ವತಿಯಿಂದ ನೀಡಲಾಗುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಸಿಕ್ಕಿದೆ. ‘ಅಂತರನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ’ ಈ ಪ್ರಶಸ್ತಿ ಸಿಕ್ಕಿದೆ. ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಗುರುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಮತಿ ಸ್ಮಿತಿ ಭಟ್ ದಿಯೋರ, ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ, ಅಡ್ವಾಂಟೇಜ್ ಕ್ಲಬ್, ಗುರ್ಗಾಂವ್ ರವರು 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಉತ್ತಮ ವರ್ಷದ ಅಂತರನಗರ ಎಲೆಕ್ಟ್ರಿಕ್ ಬಸ್ – EV Power Plus ಬಸ್ ಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಾದ ಎನ್.ಕೆ. ಬಸವರಾಜು, ಮುಖ್ಯ ತಾಂತ್ರಿಕ ಶಿಲ್ಪಿ, ಜಿ. ಅಂತೋಣಿ ಜಾರ್ಜ್, ಮುಖ್ಯ…

ಕೆಎಸ್ಸಾರ್ಟಿಸಿಗೆ Asia Pacific HRM Congress ಪ್ರಶಸ್ತಿ

ಬೆಂಗಳೂರು: ಏಷ್ಯಾ ಫೆಸಿಫಿಕ್ ಮಾನವ ಸಂಪನ್ಮೂಲ ಕಾಂಗ್ರೆಸ್ (Asia Pacific HRM Congress) ರವರು ಸ್ಥಾಪಿಸಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಅನುಷ್ಠಾನಗೊಳಿಸಿದ ಸಂಸ್ಥೆಯ ಪ್ರಶಸ್ತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಲಭಿಸಿದೆ. ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ 14.09.2023ರಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಓಡಿಶಾ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ನಿರ್ದೇಶಕರು ಹಾಗೂ ಹೆಚ್ಚುವರಿ ಕಾರ್ಯದರ್ಶಿಗಳಾದ ಡಾ. ಪಾರ್ಥ ಸಾರಧಿ ಮಿಶ್ರ ಅವರು ಏಷ್ಯಾದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ ಉನ್ನತ ಸಂಸ್ಥೆ ಯ ಪ್ರಶಸ್ತಿಯನ್ನು ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಜಿ.ಎನ್. ಲಿಂಗರಾಜು, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶ್ರೀ ಶಿವನಂದ ಕವಳಿಕಾಯಿ ಮತ್ತು ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಎಸ್. ರಾಜೇಶ್ ರವರಿಗೆ ನಿಗಮದ ಪರವಾಗಿ ಪ್ರಧಾನ ಮಾಡಿದರು.

ಸೊಣ್ಣಪ್ಪನಹಳ್ಳಿ ಡೇರಿಗೆ 11 ನಿರ್ದೆಶಕರ ಅವಿರೋಧ ಆಯ್ಕೆ.

ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಸೊಣ್ಣಪ್ಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುರುವಾರ ಚುನಾವಣೆ ನಡೆಯಿತು. ಒಟ್ಟು 11 ನಿರ್ದೆಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರಾಗಿ ಲಕ್ಷ್ಮಮ್ಮ, ಮೀನಾಕ್ಷಿ, ಶ್ರೀನಿವಾಸ, ಲಿಂಗಮೂರ್ತಿ, ನಂಜೇಗೌಡ, ಹನುಮಂತಪ್ಪ, ಶಿವಕುಮಾರ್, ಶಶಿಕುಮಾರ್, ಶಂಕರಪ್ಪ, ಸುರೇಶ್, ಆನಂದ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆಯ ಮಾಧವರೆಡ್ಡಿ ಕರ್ತವ್ಯ ನಿರ್ವಹಿಸಿದರು. ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಮಾಧವರೆಡ್ಡಿ ಸೊಣ್ಣಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನ ಸದಸ್ಯರು ಕರ್ನಾಟಕ ಹಾಲು ಮಹಾಮಂಡಳ ಹಾಗೂ ಬೆಂಗಳೂರು ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಕ್ಕೂಟದಿಂದ ರೈತರಿಗೆ ಜೋಳ, ರಾಸುಗಳಿಗೆ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳು, ಹಾಲು ಕರೆಯುವ ಯಂತ್ರಗಳು, ರಾಸುಗಳ ವಿಮಾ ಸೌಲಭ್ಯ, ಬಮೂಲ್ ವಿಮಾ ಸೌಲಭ್ಯ, ಸಂಘದ ಕಟ್ಟಡ ಕಟ್ಟಲು…

BSY ಅವರನ್ನು ಮೂಲೆಗುಂಪಾಗಿಸಲು JDS ಜೊತೆ ಮೈತ್ರಿಗೆ BJP ನಾಯಕರಿಂದ ಮುದ್ರೆ; ರಮೇಶ್ ಬಾಬು

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸಲು ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ನಾಯಕರು ಮುದ್ರೆ ಒತ್ತಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ವಿಶ್ಲೇಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯ 26 ಶಾಸಕರು ಹೈಕಮಾಂಡಿಗೆ ಪತ್ರ ಬರೆದು ಬೊಮ್ಮಾಯಿ ಅವರಿಗೆ ಸರ್ಕಾರ ನಡೆಸಲು ಶಕ್ತಿ ಇಲ್ಲ ಎಂದಿದ್ದರು. ಅವರನ್ನು ಕೆಳಗೆ ಇಳಿಸಿ ಎಂದು ಮಾಡಿದ್ದರು, ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೆ ತಳ್ಳಲು ಹುನ್ನಾರ ಮಾಡಿದವರೇ ಇಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಮುದ್ರೆ ಒತ್ತಿದ್ದಾರೆ ಎಂದರು. ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ಯಡಿಯೂರಪ್ಪ ಅವರ ಚುಕ್ಕಾಣಿಗೆ ಹೋಗಿತ್ತು, ಅದನ್ನು ತಪ್ಪಿಸಲು ಈ ಮೈತ್ರಿಯ ಹುನ್ನಾರ. ವ್ಯವಸ್ಥಿತವಾಗಿ ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸುವ ಕೆಲಸ ಇದಾಗಿದೆ. ಹಿರಿಯ ನಾಯಕನಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗುತ್ತಿದೆ…

ಕಾವೇರಿ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಹಿನ್ನಡೆ: ಕಾಂಗ್ರೆಸ್ ಆರೋಪ

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮೋಸ ಹಾಗೂ ಕರ್ನಾಟಕ ಬಿಜೆಪಿ ನಾಯಕರ ಹೇಡಿತನದಿಂದ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕೆಪಿಸಿಸಿ ವಕ್ತಾರ ಸಿ.ಲಕ್ಷ್ಮಣ್, ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮೋಸ ಹಾಗೂ ಕರ್ನಾಟಕ ಬಿಜೆಪಿ ನಾಯಕರ ಹೇಡಿತನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಕೆಆರ್ಎಸ್ ನೀರಿನ ಮಟ್ಟ 97 ಅಡಿ ಇದೆ. 5.10 ಟಿಎಂಸಿ ನೀರು ಕಬಿನಿಯಲ್ಲಿ, ಹಾರಂಗಿಯಲ್ಲಿ 7.54, ಹೇಮಾವತಿಯಲ್ಲಿ 18 ಟಿಎಂಸಿ ನೀರು ಲಭ್ಯವಿದ್ದು ಒಟ್ಟು 43.19 ಟಿಎಂಸಿ ನೀರಿದೆ. ಡೆಡ್ ಸ್ಟೋರೇಜ್ 12 ಟಿಎಂಸಿ ಇದೆ ಎಂದು ಗಮನಸೆಳೆದರು. ಕೆ.ಆರ್‌ಎಸ್ ಅಣೆಕಟ್ಟಿನ ಒಳಹರಿವು 2,881 ಕ್ಯೂಸೆಕ್ಸ್ ಇದ್ದು, ಹೊರ ಹರಿವು 1,681 ಕ್ಯೂಸೆಕ್ಸ್ ಇದೆ. ಕೇರಳದಲ್ಲಿ ಸ್ವಲ್ಪ…

ಜನ ಜಾನವಾರನ್ನು ಸಂಕಷ್ಟಕ್ಕೆ ದೂಡಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಕರ್ನಾಟಕ ಸ್ಪಷ್ಟನೆ

ಬೆಂಗಳೂರು: ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ರೈತರು , ಕುಡಿಯುವ ನೀರಿಗಾಗಿ ಅವಲಂಬಿತರಾಗಿರುವ ಜಾನುವಾರು ಹಾಗೂ ಮಾನವರ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ 15 ದಿನಗಳ ಕಾಲ ಕೆ.ಆರ್.ಎಸ್.ಹಾಗೂ ಕಬಿನಿಯಿಂದ 5000 ಕ್ಯೂಸೆಕ್ಸ್ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿಗಳು, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಮರುಪರಿಶೀ ಲಿಸುವಂತೆ ಕೋರಿದ್ದಾರಲ್ಲದೆ, ಬರಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಮಿತಿಯ ಹಿಂದಿನ ನಿರ್ದೇಶನವನ್ನು ಪಾಲಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಬಹುತೇಕ ತಾಲ್ಲೂಕುಗಳು ಮುಂಗಾರು ವೈಫಲ್ಯ ದಿಂದ…