ರಾಮನಗರ: ರಾಮನಗರ ಜಿಲ್ಲೆ ಕೆಮ್ಮಾಳೆ ಗೇಟ್ ಬಳಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕ್ವಾಲಿಸ್ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾರು ಅಡ್ಡಾದಿಡ್ಡಿ ಚಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಬಸ್ ಸಿಬ್ಬಂದಿ ತಿಳಿಸಿದ್ದಾರೆ. ರಾಮನಗರ ವಿಭಾಗ ಕನಕಪುರ ಘಟಕಕ್ಕೆ ಸೇರಿದ ಬಸ್ ಕನಕಪುರದಿಂದ ಹಲಗೂರಿಗೆ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಸಂಜೆ ನಾಲ್ಕೂವರೆ ಗಂಟೆ ಸುಮಾರಿಗೆ ಕೆಮ್ಮಾಳೆ ಗೇಟ್ ಬಳಿ ಎದುರುಗಡೆಯಿಂದ ಬರುತ್ತಿದ್ದ ಕ್ವಾಲಿಸ್ ವಾಹನ ಅಡ್ಡ ದಡ್ಡಿ ಯಾಗಿ ಚಲಿಸುತ್ತಿತ್ತು. ಇದನ್ನು ಗಮನಿಸಿದ ಬಸ್ ಚಾಲಕ ತನ್ನ ವಾಹನವನ್ಬು ಪಕ್ಕಕ್ಕೆ ಸರಿಸಿದರೂ ಕಾರು ನಿಯಂತ್ರಣ ತಪ್ಪಿ ಬಸ್ಸಿಗೆ ಅಪ್ಪಳಿಸಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Year: 2023
ತಮಿಳುನಾಡಿಗೆ 15 ದಿನ 5,000 ಕ್ಯೂಸಸ್ ನೀರು ಬಿಟ್ಟರೆ ಕಾವೇರಿ ಅಚ್ಚುಕಟ್ಟು ರೈತರ ಮರಣ ಶಾಸನ; ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್
ಬೆಂಗಳೂರು: ತಮಿಳುನಾಡಿಗೆ 15 ದಿನ 5,000 ಕ್ಯೂಸಸ್ ನೀರು ಬಿಟ್ಟರೆ ಅದು ಕಾವೇರಿ ಅಚ್ಚುಕಟ್ಟು ರೈತರ ಮರಣ ಶಾಸನವಾಗುತ್ತದೆ. ಇದರಿಂದ ಆರು ಟಿ ಎಂ ಸಿ ನೀರು ಖಾಲಿಯಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಶೇಕಡ 64% ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ ಈಗಾಗಲೇ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. KRS 100 ಅಡಿಗೆ ಬಂದಿದೆ. ಕಬಿನಿ 72 ಅಡಿಗೆ ಇಳಿದಿದೆ. ಕುಡಿಯುವ ನೀರಿಗೂ ಸಂಕಷ್ಟ ಪಡುವ ಪರಿಸ್ಥಿತಿ ಇರುವಾಗ ಪ್ರಾಧಿಕಾರ ನೀರು ಬಿಡಲು ಹೇಗೆ ಸೂಚನೆ ನೀಡಿತು ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ. s ಇದು ಸರಿಯಾದ ಕ್ರಮ ಅಲ್ಲ. ಇದರ ವಿರುದ್ಧ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನ ಮನವಿ ಸಲ್ಲಿಸಲಿ. ನೀರು ಬಿಡಲು ಸಾಧ್ಯವಿಲ್ಲ ಎಂದು ಕಡಾ ಖಂಡಿತವಾಗಿ ಹೇಳಲಿ. ರಾಜ್ಯದ ರೈತರನ್ನು…
ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ‘ಸೂರ್ಯ’ನತ್ತ ಚಿತ್ತ; ಸೆಪ್ಟೆಂಬರ್ 2ರಂದು ‘ಆದಿತ್ಯಾ ಎಲ್ 1’ ಉಪಗ್ರಹವನ್ನು ಉಡಾವಣೆ
ಬೆಂಗಳೂರು: ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಭಾರತ ಇದೀಗ ಸೂರ್ಯನತ್ತ ಮುಖ ಮಾಡಿದೆ. ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದು ಸೂರ್ಯನತ್ತ ಹೆಜ್ಜೆ ಇಡಲು ಸಿದ್ಧವಾಗಿದೆ. ಕುತೂಹಲಕಾರಿ ತೀರ್ಮಾನವೊಂದರಲ್ಲಿ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆ ಉಡಾವಣೆಗೆ ಇಸ್ರೋ ಮುಹೂರ್ತನಿಗದಿ ಮಾಡಿದೆ. ಸೆಪ್ಟೆಂಬರ್ 2 ಶನಿವಾರ ಬೆಳಗ್ಗೆ 11:50ಕ್ಕೆ PSLV-C57 ಉಡಾವಣಾ ನೌಕೆ ಮೂಲಕ ‘ಆದಿತ್ಯಾ ಎಲ್ 1’ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಪ್ರಕಟಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ 2 ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ. ಈ ಕುರಿತಂತೆ ಇಸ್ರೋ ಮಾಡಿರುವ ಟ್ವೀಟ್ ದೇಶದ ಜನರ ಕುತೂಹಲವನ್ನು ಹೆಚ್ಚಿಸಿದೆ. 🚀PSLV-C57/🛰️Aditya-L1 Mission: The launch of Aditya-L1, the…
ಯತೀಂದ್ರಗೆ ಸಾಂವಿಧಾನಿಕ ಹುದ್ದೆ; ಧೃತರಾಷ್ಟ್ರನನ್ನೇ ಮೀರಿಸುವಂತಿದೆಯೇ ಸಿದ್ದರಾಮಯ್ಯರ ಪುತ್ರ ವ್ಯಾಮೋಹ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ, ಡಾ.ಯತೀಂದ್ರ ವವರಿಗೆ ಸಾಂವಿಧಾನಿಕ ಹುದ್ದೆ ನೀಡುವ ಮೂಲಕ ರಾಜಕೀಯ ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ರಾಜ್ಯ ಸರ್ಕಾರವು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಸಮಿತಿ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ನೇಮಕ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ವ್ಯಾಮೋಹವು ಧೃತರಾಷ್ಟ್ರನನ್ನೇ ಮೀರಿಸುವಂತಿದೆ ಎಂದು ಪ್ರತಿಕ್ರಿಯಿಸಿದೆ. ಸರ್ಕಾರದ ಆಡಳಿತದಲ್ಲಿ ಹಾಗೂ ವರ್ಗಾವಣೆ ದಂಧೆಯಲ್ಲಿ ಇನ್ನಿಲ್ಲದಂತೆ ಹಸ್ತಕ್ಷೇಪ ಮಾಡುವ ಆರೋಪ ಹೊತ್ತಿರುವ ಶ್ಯಾಡೋ ಸಿಎಂ ಯತೀಂದ್ರರವರಿಗೆ ಈಗ ಸಾಂವಿಧಾನಿಕ ಹುದ್ದೆಯನ್ನು ದಯಪಾಲಿಸಲಾಗಿದೆ, ಅದು ಗುಟ್ಟಾಗಿ! ಎಂದು ಟ್ವೀಟ್ ಮಾಡಿರುವ ಬಿಜೆಪಿ, ‘ತಮ್ಮದು ಪಾರದರ್ಶಕ ಸರ್ಕಾರ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯರವರು, ತಮ್ಮ ಪುತ್ರನಿಗೆ ನೀಡಿದ…
ಚಾಮರಾಜನಗರ; ಗಾಂಜಾ ಮಾರಾಟ ಆರೋಪ, ಒಬ್ಬನ ಬಂಧನ
ಚಾಮರಾಜನಗರ: ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ರಾಮಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಶಂಪಾಳ್ಯ ಗ್ರಾಮದ ಮುರುಗೇಶ್ (65) ಎಂಬ ವ್ಯಕ್ತಿ ಕೌದಳ್ಳಿ ಮಾರ್ಗವಾಗಿ ಹೊಸದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಬಳಿ ತಮಿಳುನಾಡಿನಲ್ಲಿ ಮಾರಾಟ ಮಾಡಲು ಬಸ್ಸ್ ಗಾಗಿ ಕಾಯುತ್ತಿದ್ದಾರೆಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹಾಗೂ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಸೋಮೇಗೌಡರವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು 800 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಸಿದ್ದೇಶ್ ಪೇದೆಗಳಾದ ಬಿರಾದರ್ , ಲಿಯಾಖತ್ ಅಲಿಖಾನ್ ಪಾಲ್ಗೊಂಡಿದ್ದರು.
ಸರ್ಕಾರ ಸೆಂಚುರಿ ಬಾರಿಸಿ ಮುನ್ನುಗ್ಗಿದೆ, ಕೆಲಸ ಜನರ ಕಣ್ಣಿಗೆ ಕಾಣುತ್ತಿದೆ: ಡಿಕೆಶಿ
ಬೆಂಗಳೂರು: “ಸರ್ಕಾರದ ನೂರು ದಿನಗಳ ಕೆಲಸ ರಾಜ್ಯದ ಜನರ ಕಣ್ಣಿಗೆ ಕಾಣುತ್ತಿದೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ರಾಜ್ಯ ಸರ್ಕಾರಕ್ಕೆ ನೂರು ದಿನಗಳು ಪೂರ್ಣಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನಮ್ಮ ಸರ್ಕಾರ ನೂರು ದಿನಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.10 ಕೋಟಿ ಮನೆ ಯಜಮಾನಿಯರಿಗೆ ಆ. 30 ರಿಂದ ಪ್ರತಿ ತಿಂಗಳು 2 ಸಾವಿರ ರೂ. ಹಣ ತಲುಪಲಿದೆ. 1.36 ಲಕ್ಷ ಜನರಿಗೆ ಉಚಿತ ಅಕ್ಕಿ ತಲುಪುತ್ತಿದೆ. 1.41 ಕೋಟಿ ಗ್ರಾಹಕರಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆ. ಡಿಸೆಂಬರ್ ವೇಳೆಗೆ ನಿರುದ್ಯೋಗಿ ಯುವಕರಿಗೆ ಭತ್ಯೆ ಯೋಜನೆ ಜಾರಿ ಮಾಡುತ್ತೇವೆ ಎಂದರು. ಇದು ಸಿದ್ದರಾಮಯ್ಯ…
ನೋಡ ನೋಡುತ್ತಿದ್ದಂತೆಯೇ ಕ್ಯಾಂಟರ್ ಲಾರಿ ಅಡಿಗೆ ಬಿದ್ದ ಅಪರಿಚಿತ; ಹೀಗೊಂದು ಆತ್ಮಹತ್ಯೆ
ಬೆಂಗಳೂರು: ನೋಡ ನೋಡುತ್ತಿದ್ದಂತೆಯೇ ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬ ಕ್ಯಾಂಟರ್ ಲಾರಿ ಅಡಿಗೆ ಬಿದ್ದು ಸಾವನ್ನಪಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಇಸ್ಲಾಂಪುರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಚಲಿಸುತ್ತಿದ್ದ ಕ್ಯಾಂಟರ್ ಕೆಳಗೆ ಹಾರಿ ಚಕ್ರಕ್ಕೆ ಸಿಲುಕಿದ್ದಾನೆ. ಸಾರ್ವಜನಿಕರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಆತ ಸಾವನ್ನಪ್ಪಿದ್ದಾನೆ. ಈ ಘಟನೆ ಶನಿವಾರ ಸಂಜೆ ನಗರದ ಇಸ್ಲಾಂಪುರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಲಾರಿಯ ಚಕ್ರ ಅಪರಿಚಿತ ವ್ಯಕ್ತಿಯ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತನ್ನ ಪಾಡಿಗೆ ತಾನು ರಸ್ತೆ ಬದಿಯಲ್ಲಿ ಕೈಕಟ್ಟಿಕೊಂಡು ನಿಂತ್ತಿದ್ದಾತ ನೋಡ ನೋಡುತ್ತಲೇ ದಿಢೀರನೆ ಚಲಿ ಲಾರಿಗೆ ಕೆಳಗೆ ಹಾರಿ ಚಕ್ರಕ್ಕೆ ತಲೆ ಕೊಟ್ಟಿದ್ದಾನೆ. ವ್ಯಕ್ತಿಯ ಊರು, ಹೆಸರು ತಿಳಿದು ಬಂದಿಲ್ಲ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ,
ಒಂದಾಗ್ತಾರಾ ದರ್ಶನ್-ಸುದೀಪ್; ಸಂಭ್ರಮದ ‘ವೀಡಿಯೊ’ ಕುತೊಹಲ
ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಮಾತೆ ಒಂದಾಗುತ್ತಿದ್ದಾರೆಯೇ? ಇಂತಹಾ ಖುಷಿ ಸುದ್ದಿಯೊಂದು ಕನ್ನಡ ಸಿನಿಲೋಕದಲ್ಲಿ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಈ ಇಬ್ಬರೂ ನಟರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದ ಮುನಿಸಿಕೊಂಡು ಆರು ವರ್ಷಗಳಿಂದ ದೂರ ಉಳಿದಿರುವ ದರ್ಶನ್ ಹಾಗೂ ಸುದೀಪ್ ಕಳೆದ ರಾತ್ರಿ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಂಭ್ರಮದಲ್ಲಿ ಭಾಗಿಯಾದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವೀಡಿಯೊ ಕೂಡಾ ಕುತೂಹಲ ಹೆಚ್ಚಿಸಿದೆ. This is real but it feels like something straight out of…
ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ, ರಾಜ್ಯದಲ್ಲಿ ಪಕ್ಷ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ: ಶೆಟ್ಟರ್
ಉಡುಪಿ: ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ, ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ಲೇಷಿಸಿದ್ದಾರೆ. ಉಡುಪಿ ಪ್ರವಾಸ ಸಂದರ್ಭದಲ್ಲಿ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ರಾಜ್ಯ ಬಿಜೆಪಿಯಲ್ಲಿ ನಾಯಕರಿಲ್ಲದಂತಾಗಿದೆ ಎಂದಿದ್ದಾರೆ. ಬಿಜೆಪಿಯಲ್ಲಿ ನಾಯಕರಿಲ್ಲದ ಕಾರಣದಿಂದ ಇಲ್ಲಿಯವರೆಗೆ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲಎಂದರು. ಜೆಪಿಯಲ್ಲಿ ಅನೇಕ ನಾಯಕರು ನೋವು ಅನುಭವಿಸಿದ್ದಾರೆ ಮತ್ತು ಅವರಲ್ಲಿ ಅನೇಕರು ಆ ಪಕ್ಷದಿಂದ ಹೊರಬರಲು ಬಯಸುತ್ತಾರೆ. ಬಿಜೆಪಿ ನಾಯಕರು ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.
ನಾಯಕರಿಲ್ಲದ ಬಿಜೆಪಿಯಿಂದ ಶೆಟ್ಟರ್ ಸೆಳೆಯಲು ತಂತ್ರ? ಶಾ ಜೊತೆ ನಡೆದಿದ್ಯಾ ಮಾತುಕತೆ?
ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಶಾಸಕರಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತೃ ಪಕ್ಷಕ್ಕೆ ಮರಳುತ್ತಾರೆ? ಇಂಥದ್ದೊಂದು ಚರ್ಚೆ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ. ಇದೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆಂಬ ಚರ್ಚೆ ಒಟ್ಟಾರೆ ಬೆಳವಣಿಗೆಗಳನ್ನು ಕುತೂಹಲದತ್ತ ಕೊಂಡೊಯ್ದಿದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ವರಿಷ್ಠರ ಬಗ್ಗೆ ಮುನಿಸಿಕೊಂಡು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದ್ದು, ಪ್ರಸಕ್ತ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಯಾರೊಬ್ಬ ನಾಯಕರೂ ಸೂಕ್ತ ಅನ್ನಿಸದ ಪರಿಸ್ಥಿತಿ ಇದೆ. ಅಷ್ಟೇ ಅಲ್ಲ, ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಹಲವು ತಿಂಗಳಾದರೂ ವಿರೋಧಪಕ್ಷದ ನಾಯಕನ ಆಯ್ಕೆಯೂ ನಡೆದಿಲ್ಲ. ಈ ಹೀನಾಯ ಸ್ಥಿತಿಯನ್ನು ಬೊಟ್ಟು ಮಾಡಿರುವ ಪ್ರತಿಪಕ್ಷದ ಮುಖಂಡರು ಬಿಜೆಪಿಯಲ್ಲೀಗ ನಾಯಕರೇ ಇಲ್ಲ ಎಂದು ಗೇಲಿ ಮಾಡುತ್ತಿದ್ದಾರೆ. ಇದೇ…
