ಬೆಂಗಳೂರು: ವಯೋವೃದ್ಧನಿಗೆ ಸೇರಿದ್ದೆನ್ನಲಾದ ಆಸ್ತಿಯನ್ನು ಖಾಸಗಿ ಸಂಸ್ಥೆಗಳ ಗೂಂಡಾಗಳು ಅತಿಕ್ರಮಿಸಲು ಯತ್ನಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲು ಯಲಹಂಕ ಠಾಣೆ ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ನೊಂದ ವೃದ್ಧ FIR ದಾಖಲಿಸಲು ನಿರ್ದೇಶನ ಕೋರಿ ಬೆಂಗಳೂರು ಪೊಲೀಸ್ ಕಮೀಷನರ್’ಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಆಡುಗೋಡಿ ನಿವಾಸಿ 70 ವರ್ಷ ಪ್ರಾಯದ ಅಬ್ದುಲ್ ಸತ್ತಾರ್, ಎಂಬವರು ತಮಗೆ ಸೇರಿದ್ದೆನ್ನಲಾದ ಯಲಹಂಕದ ಸರ್ವೇ ನಂಬರ್ 29/3ರ 7 ಗುಂಟೆ ನಿವೇಶನವನ್ನು ಕೆಲವು ವ್ಯಕ್ತಿಗಳು ಅತಿಕ್ರಮಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೂ ಏಪ್ರಿಲ್ 8 ರಂದು ಮಧ್ಯಾಹ್ನ 25 ಕ್ಕೂ ಹೆಚ್ಚು ಮಂದಿ ಸದರಿ ಸ್ಥಳಕ್ಕೆ ಬಂದು ‘ತಾವು Mac Charles Hob Projects Pvt Ltd ಮತ್ತು Embassy ಕಂಪನಿ ಕಡೆಯವರು ಈ ನಿವೇಶನಕ್ಕೆ ತೆರಳಿ ಈ ಸ್ವತ್ತನ್ನು ತಮಗೆ ಬಿಟ್ಟುಕೊಟ್ಟು ಸ್ಥಳದಿಂದ ತೆರಳಬೇಕು’…
