ಪಾಕಿಸ್ತಾನದಲ್ಲಿ ಹೊಸ ಉಗ್ರ ಸಂಘಟನೆ ದಾಳಿ; 21 ಸೈನಿಕರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ರಕ್ತಸಿಕ್ತ ಭಾನುವಾರ! ವಾಯುವ್ಯ ಪಾಕಿಸ್ತಾನದಲ್ಲಿರುವ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ಭಯೋತ್ಪಾದಕರು ನಡೆಸಿದ ಉಗ್ರ ದಾಳಿಯಲ್ಲಿ 21 ಸೈನಿಕರು ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿಕೋರರು ಮೊದಲು ಕಾರು ಬಾಂಬ್ ಸ್ಫೋಟಗೊಳಿಸಿ, ನಂತರ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಚೆಕ್‌ಪಾಯಿಂಟ್ ಕ್ಷಣಾರ್ಧದಲ್ಲಿ ಧ್ವಂಸವಾಗಿದ್ದು, ಪೊಲೀಸರು ಪ್ರತಿದಾಳಿಗೆ ಸಿದ್ಧಗೊಳ್ಳುವ ಮೊದಲು ಪರಿಸ್ಥಿತಿ ನಿಯಂತ್ರಣದ ಹೊರಗೆ ಹೋಗಿದೆ.
ದಾಳಿಯ ನಂತರ ಉಗ್ರರು ಪೊಲೀಸರ ಶಸ್ತ್ರಾಸ್ತ್ರಗಳನ್ನು ದೋಚಿ ಪರಾರಿಯಾಗಿದ್ದು, ಗಡಿಯತ್ತ ಓಡಿಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಘಟನೆಯು ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಈ ವಿಧ್ವಂಸ ನಡೆದಿದ್ದು, ಈ ದಾಳಿಯ ಹೊಣೆಯನ್ನು ಇತ್ತೇಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್ ಸಂಘಟನೆ ಹೊತ್ತುಕೊಂಡಿದೆ.

Related posts