‘ಧೈರ್ಯವಿದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ’; ಡಿಕೆಶಿ, ಪ್ರಿಯಾಂಕ್‌ಗೆ ವಿಜಯೇಂದ್ರ ಸವಾಲು

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧೈರ್ಯವಿದ್ದರೆ, ಸರ್ಕಾರದ ಅಧಿಕಾರವನ್ನು ಹಿಂಬಾಗಿಲಿನಿಂದ ಬಳಸುವ ಬದಲು ಬಹಿರಂಗವಾಗಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, 100 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಆರ್‌ಎಸ್‌ಎಸ್ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇಂತಹ ತಂತ್ರಗಳ ಮೂಲಕ ಅದರ ಚಟುವಟಿಕೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಸ್ತಾವಿತ ಮಸೂದೆ ಕುರಿತು ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ವಿಜಯೇಂದ್ರ ಅವರ ಈ ಹೇಳಿಕೆ ಹೊರಬಿದ್ದಿದೆ. ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಷ್ಟ್ರಧ್ವಜಾರೋಹಣದಿಂದ ವಿನಾಯಿತಿ ಕೋರಿರುವ ವಿಚಾರವನ್ನೂ ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ. ಆಗಸ್ಟ್ 15ರಂದು…

ಶಾರುಖ್ ಖಾನ್ ಬಳಿಕ ರಾಣಿಗೆ ಗೌರವ; ಸಿನಿಮಾ, ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್

ಮುಂಬೈ: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಲೆಟರ್ಸ್ ಪದವಿ ಸ್ವೀಕರಿಸುವ ವೇಳೆ ಭಾವುಕರಾದರು. ಗೌರವ ಸ್ವೀಕರಿಸುವ ಮುನ್ನ ಅವರು ಕಣ್ಣೀರು ಒರೆಸಿಕೊಂಡ ದೃಶ್ಯ ಗಮನ ಸೆಳೆಯಿತು. 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ಅಂಗವಾಗಿ ಮೆಲ್ಬೋರ್ನ್‌ನ ಫೆಡರೇಶನ್ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಣಿಯನ್ನು ಸನ್ಮಾನಿಸಲಾಯಿತು. ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ಸಿನಿಮಾ ಪಯಣ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಚಿತ್ರರಂಗದ ಸಾಧನೆಯ ಜೊತೆಗೆ ಮಹಿಳೆಯರು, ಮಕ್ಕಳು ಮತ್ತು ಅಂಚಿನ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಣಿ ಮುಖರ್ಜಿ ಅವರ ಮಾನವೀಯ ಕಾರ್ಯ ಹಾಗೂ ಸಾಮಾಜಿಕ ಬದ್ಧತೆಯನ್ನೂ ವಿಶ್ವವಿದ್ಯಾಲಯ ಗುರುತಿಸಿದೆ. ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ರಾಣಿ, ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್…

2026ರಲ್ಲಿ 19 ಸಿಆರ್‌ಪಿಎಫ್ ಸಿಬ್ಬಂದಿ ಆತ್ಮಹತ್ಯೆ; ವರದಿ ಕೇಳಿದ ಎನ್‌ಎಚ್‌ಆರ್‌ಸಿ

ನವದೆಹಲಿ: 2026ರ ಜನವರಿಯಿಂದ ಮೇ 22ರವರೆಗೆ 19 ಸಿಆರ್‌ಪಿಎಫ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವರದಿಯಲ್ಲಿರುವ ಅಧಿಕೃತ ಸಿಆರ್‌ಪಿಎಫ್ ಅಂಕಿಅಂಶಗಳ ಪ್ರಕಾರ, 2025ರಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ 11ರಂದು ಪ್ರಕಟವಾದ ಮಾಧ್ಯಮ ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಒಟ್ಟು 281 ಸಿಆರ್‌ಪಿಎಫ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಸುಮಾರು 216 ಮಂದಿ ಕರ್ತವ್ಯದಲ್ಲಿದ್ದರು ಎಂದು ತಿಳಿಸಲಾಗಿದೆ. ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಸೂಚನೆ ಅಂಕಿಅಂಶಗಳು ನಿಖರವಾಗಿದ್ದರೆ, ಸಿಆರ್‌ಪಿಎಫ್…

ಸ್ವಾತಂತ್ರ್ಯ ದಿನಾಚರಣೆಗೆ 100 ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ವಿಶೇಷ ಆಹ್ವಾನ

ನವದೆಹಲಿ: ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ದೆಹಲಿ-ಎನ್‌ಸಿಆರ್‌ನ 100 ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳನ್ನು ‘ವಿಶೇಷ ಅತಿಥಿಗಳು’ ಎಂದು ಆಹ್ವಾನಿಸಲಾಗಿದೆ. ಫಲಾನುಭವಿಗಳು ತಮ್ಮ ಸಂಗಾತಿ ಅಥವಾ ಸಹಚರರೊಂದಿಗೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಹ್ವಾನಿತರಲ್ಲಿ ವಿವಿಧ ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವ ಮಹಿಳಾ ಕುಶಲಕರ್ಮಿಗಳೂ ಇದ್ದು, ದೇಶದ ಕರಕುಶಲ ಪರಂಪರೆಯನ್ನು ಉಳಿಸುವಲ್ಲಿ ಅವರ ಪಾತ್ರವನ್ನು ಗುರುತಿಸಲಾಗುತ್ತಿದೆ. ಆಗಸ್ಟ್ 14ರಂದು ಆಹ್ವಾನಿತ ಕುಶಲಕರ್ಮಿಗಳು ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಸಚಿವಾಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರಿಗೆ ಸ್ಮರಣಿಕೆಗಳನ್ನೂ ನೀಡಲಾಗುತ್ತದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ವೃತ್ತಿಗಳಲ್ಲಿರುವ ಕುಶಲಕರ್ಮಿಗಳಿಗೆ ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು, ಆರ್ಥಿಕ ನೆರವು, ಡಿಜಿಟಲ್ ಸೌಲಭ್ಯ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಯೋಜನೆಯಡಿ…

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ 1,057 ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ

ನವದೆಹಲಿ: 2026ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ, ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ ಒಟ್ಟು 1,057 ಸಿಬ್ಬಂದಿಗೆ ಶೌರ್ಯ ಹಾಗೂ ಸೇವಾ ಪದಕಗಳನ್ನು ಘೋಷಿಸಲಾಗಿದೆ. ಇವುಗಳಲ್ಲಿ 301 ಶೌರ್ಯ ಪದಕಗಳು (GM) ಸೇರಿವೆ. 272 ಪೊಲೀಸ್ ಸಿಬ್ಬಂದಿ ಹಾಗೂ 29 ಅಗ್ನಿಶಾಮಕ ಸಿಬ್ಬಂದಿಗೆ ಈ ಗೌರವ ಲಭಿಸಿದೆ. ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು, ಅಪರಾಧ ತಡೆಗಟ್ಟುವುದು ಹಾಗೂ ಅಪರಾಧಿಗಳನ್ನು ಬಂಧಿಸುವ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶೌರ್ಯ ಪದಕ ಪಡೆದವರ ಪೈಕಿ 197 ಮಂದಿ ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ, 51 ಮಂದಿ ಜಮ್ಮು ಮತ್ತು ಕಾಶ್ಮೀರದಲ್ಲಿ, 12 ಮಂದಿ ಈಶಾನ್ಯ ರಾಜ್ಯಗಳಲ್ಲಿ ಹಾಗೂ 41 ಮಂದಿ ಇತರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದವರಾಗಿದ್ದಾರೆ. ವಿಶಿಷ್ಟ ಸೇವೆಗೂ ಗೌರವ ಒಟ್ಟು 92 ರಾಷ್ಟ್ರಪತಿಗಳ ವಿಶಿಷ್ಟ ಸೇವಾ…

ಸರ್ಕಾರಿ ಆಸ್ತಿ ಬಳಕೆ ನಿಯಂತ್ರಣ ಮಸೂದೆ; ‘ಆರ್‌ಎಸ್‌ಎಸ್‌ ಉಲ್ಲೇಖವೇ ಇಲ್ಲ’ ಎಂದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ಮಸೂದೆ, 2026ಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಆರೋಪಗಳನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಳ್ಳಿಹಾಕಿದ್ದಾರೆ. ಮಸೂದೆಯಲ್ಲಿ ಆರ್‌ಎಸ್‌ಎಸ್‌ ಹೆಸರೇ ಇಲ್ಲವಾಗಿದ್ದು, ಸಂಘಟನೆಯನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸಲಾಗುತ್ತಿದೆ ಎಂಬ ಆರೋಪಕ್ಕೆ ಆಧಾರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಬಿಜೆಪಿಯವರು ಮಸೂದೆಯನ್ನು ಓದಿದ್ದಾರೆಯೇ? ಓದಿದ್ದರೆ ಅವರ ಆಕ್ಷೇಪಣೆ ಏನು ಎಂಬುದನ್ನು ತಿಳಿಸಲಿ. ಮಸೂದೆಯನ್ನು ಮಂಡಿಸಿ, ಚರ್ಚೆಗೆ ಅವಕಾಶ ನೀಡಲಿ” ಎಂದು ಹೇಳಿದರು. ಯಾವುದೇ ನಿರ್ದಿಷ್ಟ ಸಂಘಟನೆಯನ್ನು ಗುರಿಯಾಗಿಸಿಕೊಂಡು ಮಸೂದೆ ರೂಪಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಸ್ತಾವಿತ ಕಾನೂನಿನಡಿ ಸರ್ಕಾರಿ ಭೂಮಿ, ಕಟ್ಟಡ, ರಸ್ತೆ, ಉದ್ಯಾನವನ, ಆಟದ ಮೈದಾನ, ಜಲಮೂಲ ಸೇರಿದಂತೆ ಸಾರ್ವಜನಿಕ ಆಸ್ತಿಗಳ ಅನಧಿಕೃತ ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹5 ಲಕ್ಷದವರೆಗೆ…

ಹನೂರು : ಮಾನಸ ಶಿಕ್ಷಣ ಸಂಸ್ಥೆಗೆ 30ರ ಸಂಭ್ರಮ; ಆ.22 ರಂದು ಬೃಹತ್ ಉದ್ಯೋಗ ಮೇಳ

ಹನೂರು : ಮಾನಸ ಶಿಕ್ಷಣ ಸಂಸ್ಥೆಯು 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮಾನಸ ಶಿಕ್ಷಣ ಸಂಸ್ಥೆ ಮತ್ತು ಮಾನಸ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆ.22 ರಂದು ಪಟ್ಟಣದ ಗೌರಿ ಶಂಕರ್ ಕಲ್ಯಾಣ ಮಂಟಪವನ್ನು ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿಗಳಾದ ಡಾ ದತ್ತೇಶ್ ಕುಮಾರ್ ಅವರು ತಿಳಿಸಿದ್ದಾರೆ. ಹನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಒದಗಿಸಿದ ಅವರು, ಕಳೆದ 2019ರಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸುಮಾರು 84 ಕಂಪನಿಗಳು ಭಾಗವಹಿಸಿದ್ದವು 1800 ಆಕಾಂಕ್ಷಿಗಳು ಬಂದಿದ್ದರು 720 ಜನರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗಿತ್ತು. ಪ್ರಸ್ತುತ ವರ್ಷದಲ್ಲಿಯೂ ಸಹ ಈ ಭಾಗದ ನಿರುದ್ಯೋಗ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಯುವಕ ಯುವತಿಯರು ಹೆಚ್ಚಾಗಿ ಪಾಲ್ಗೊಂಡು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಅಲ್ಲದೇ ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಮತ್ತು ಹನೂರಿನಲ್ಲಿ…

ಕಾಂಗ್ರೆಸ್‌ಗೆ ಶಾಕ್: ಮಾಜಿ ಪಾಲಿಕೆ ಸದಸ್ಯರು ಸೇರಿ ಮೂವರು ಬಿಜೆಪಿ ಸೇರ್ಪಡೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ನಾರಾಯಣ್, ಸುರೇಶ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಪಕ್ಷದ ಧ್ವಜ ನೀಡಿ ಅವರನ್ನು ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಆರ್. ಅಶೋಕ್, ನಾವೆಲ್ಲರೂ ಒಂದೇ ಮನೆಯಲ್ಲಿ, ಒಂದೇ ಕುಟುಂಬದಂತೆ ಇದ್ದವರು. ರಾಜಕೀಯ ಕಾರಣಗಳಿಂದ ಪಕ್ಷದಿಂದ ಹೊರ ಹೋಗಿದ್ದವರು ಇದೀಗ ಮರಳಿ ಸ್ವಂತ ಮನೆಗೆ ಬಂದಿದ್ದಾರೆ ಎಂದು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆಯೇ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮತ್ತಷ್ಟು ಸಂತಸ ತಂದಿದೆ. ಹಳೆಯ ವಿಚಾರಗಳನ್ನು ಮರೆತು ಎಲ್ಲರೂ…

ಹನೂರು: ವೀರಪ್ಪನ್’ನಿಂದ ಹುತಾತ್ಮರಾದ ಪೊಲೀಸರಿಗೆ ಶ್ರದ್ಧಾಂಜಲಿ

ಹನೂರು: ತಾಲ್ಲೂಕಿನಲ್ಲಿ ದಿನಾಂಕ 14.08.1992 ಮಿಣ್ಯ ದಾಳಿಯಲ್ಲಿ ವೀರಪ್ಪನ್ ನಿಂದ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಭೆಯನ್ನು ಮಾಡಲಾಯಿತು. ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಿಗೆ ರಾಮಾಪರ ವೃತ್ತ ನಿರೀಕ್ಷಕರಾದ ಚಿಕ್ಕರಂಗ ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಹುತಾತ್ಮ ಅಧಿಕಾರಿಗಳ ಸಂಬಂಧಿಕರು ಸ್ಮಾರಕ ಸ್ತಂಭಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದರು. ಈ ವೇಳೆ ವೃತ್ತ ನಿರೀಕ್ಷಕರಾದ ಚಿಕ್ಕರಂಗಶೆಟ್ಟಿ ಮಾತನಾಡಿ ಇತಿಹಾಸವನ್ನು ಮೆಲಕು ಹಾಕಿದರು. ಈ ದಿನ ಎಲ್ಲರಿಗೂ ನೋವುಂಟು ಮಾಡುವ ದಿನವಾಗಿದೆ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಕಮಲ ನಾಯಕ್ ಎಂಬ ಗುಪ್ತ ಮಾಹಿತಿದಾರನ ಕುತಂತ್ರ ಮೋಸ ಮತ್ತು ನಂಬಿಕೆ ದ್ರೋಹದಿಂದ ಇಂತಹ ಯುವ ಪೊಲೀಸ್ ಪಡೆಗಳನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಪೊಲೀಸ್ ಮಾಹಿತಿದಾರನಂತೆ ಕೆಲಸ ಮಾಡುತ್ತಿದ್ದು, ಒಳಗೆ ವೀರಪ್ಪನ್ ಸಹಚರನಾಗಿರುವುದು ಪೊಲೀಸರಿಗೆ ತಿಳಿದಿರಲಿಲ್ಲ . ವೀರಪ್ಪನ್ ಒಳಸಂಚಿನಂತೆ ಕಮಲ ನಾಯಕ್ ಕೆಂಪು ಬಟ್ಟೆ ಧರಿಸಿ…

ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್ ಶುಕ್ರವಾರ ಆಯ್ಕೆಯಾಗಿದ್ದಾರೆ. ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ, ಎನ್‌ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ್ ಪರವಾಗಿ 30 ಸದಸ್ಯರು ಬೆಂಬಲಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ಕಾಂಗ್ರೆಸ್‌ ಸಲೀಂ ಅಹ್ಮದ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಿಂದ ಪಿ.ಎಚ್. ಪೂಜಾರ್ ಸ್ಪರ್ಧಿಸಿದ್ದರು. 75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ 38, ಬಿಜೆಪಿ 25 ಹಾಗೂ ಜೆಡಿಎಸ್‌ ಆರು ಸದಸ್ಯರನ್ನು ಹೊಂದಿದೆ. ಒಬ್ಬರು ಸ್ವತಂತ್ರ ಸದಸ್ಯರಾಗಿದ್ದು, ಐದು ಸ್ಥಾನಗಳು ಸದ್ಯ ಖಾಲಿ ಇವೆ. ಸಭಾಪತಿ ಚುನಾವಣೆಗೆ ಒಟ್ಟು ಏಳು ಪ್ರಸ್ತಾವನೆಗಳು…