ನವದೆಹಲಿ: ದೇಶದ ಇಂಧನ ಭದ್ರತೆಯನ್ನು ಬಲಪಡಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, 2030-31ರವರೆಗೆ ಅನುಷ್ಠಾನಗೊಳ್ಳಲಿರುವ **₹84,084 ಕೋಟಿ ವೆಚ್ಚದ ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ ‘ಸಮುದ್ರ ಮಂಥನ’**ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ವಲಯದ ಈ ಯೋಜನೆಯು ಭಾರತದ ಕಡಲಾಚೆಯ ತೈಲ ಮತ್ತು ಅನಿಲ ಸಂಪನ್ಮೂಲಗಳ ಅನ್ವೇಷಣೆಯನ್ನು ವೇಗಗೊಳಿಸಿ, ದೇಶೀಯ ಉತ್ಪಾದನೆ ಹೆಚ್ಚಿಸುವ ಮೂಲಕ ದೀರ್ಘಕಾಲೀನ ಇಂಧನ ಭದ್ರತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ್’ ಅಭಿಯಾನಗಳಿಗೆ ಮತ್ತಷ್ಟು ಬಲ ನೀಡಲಿದೆ. ಯೋಜನೆಯಡಿ ಉತ್ತಮ ಗುಣಮಟ್ಟದ ಭೂಕಂಪನ (ಸಿಸ್ಮಿಕ್) ದತ್ತಾಂಶ ಸಂಗ್ರಹ, ಆಳ ಸಮುದ್ರ ಹಾಗೂ ಅತಿ ಆಳದ ಸಮುದ್ರ ಪ್ರದೇಶಗಳಲ್ಲಿ ತೈಲ ಮತ್ತು ಅನಿಲ ಪರಿಶೋಧನೆ, ಗಡಿನಾಡಿನ ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ ಕೊರೆಯುವಿಕೆ, ಕಡಲಾಚೆಯ ಉತ್ಪಾದನೆ…
Month: August 2026
ಪರೀಕ್ಷೆಗಳ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ; ದೇಶಾದ್ಯಂತ ತಕ್ಷಣ ಜಾರಿ
ನವದೆಹಲಿ: ನೀಟ್ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ‘ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ಕಾಯ್ದೆ–2026’ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಕಾಯ್ದೆ ದೇಶಾದ್ಯಂತ ತಕ್ಷಣದಿಂದಲೇ ಜಾರಿಗೆ ಬಂದಿದೆ. ಹೊಸ ಕಾನೂನಿನ ಪ್ರಕಾರ, ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC), ಸಿಬ್ಬಂದಿ ಆಯ್ಕೆ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿ (RRB), ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ನೀಟ್ (NEET), ಸಿಯುಇಟಿ (CUET) ಸೇರಿದಂತೆ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳು ನಡೆಸುವ ಎಲ್ಲ ಸಾರ್ವಜನಿಕ ಸ್ಪರ್ಧಾತ್ಮಕ ಪರೀಕ್ಷೆಗಳು ಇದರ ವ್ಯಾಪ್ತಿಗೆ ಬರಲಿವೆ. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಸಂಘಟಿತ ಜಾಲಗಳು, ಪ್ರಶ್ನೆಪತ್ರಿಕೆ ಸೋರಿಕೆ, ಸೈಬರ್…
ದೇಶದ ಕಾನೂನು ರಾಜ್ಯಕ್ಕೆ ಅನ್ವಯವಾಗುವುದಿಲ್ಲವೆ? RTI ಅರ್ಜಿಗೆ ದಿಢೀರ್ ಬ್ರೇಕ್! ನಗರಾಭಿವೃದ್ಧಿ ಇಲಾಖೆ ಅವಾಂತರ
ಬೆಂಗಳೂರು: ಕಮೀಷನ್ ಆರೋಪ ಸಹಿತ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕರ್ನಾಟಕದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಾಗಲೇ, ರಾಜ್ಯ ಸರ್ಕಾರದ ನಾಗರಾಭಿವೃದ್ದಿ ಇಲಾಖೆ ಅಧಿಕಾರಿಗಳ ನಡೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ದೇಶದಲ್ಲಿ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆಯು ತಮ್ಮ ಇಲಾಖೆಗೆ ಅನ್ವಯವಾಗುವುದಿಲ್ಲ ಎಂಬಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. RTI ಅರ್ಜಿ ಸ್ವೀಕೃತಿಗೂ ಮಂತ್ರಿಗಳ ಶಿಫಾರಸು ಬೇಕೇ ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಅಷ್ಟಕ್ಕೂ ವಿವಾದ ಏನು ಗೊತ್ತೇ? ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ಬೇಕಾಬಿಟ್ಟಿ ಅನುದಾನ ಬಿಡುಗಡೆಯಾಗಿದೆ ಎನ್ನಲಾಗಿದೆ. ಆದರೆ ಕಾಮಗಾರಿಗಳು ನಡೆದಿರುವ ಅನುಮಾನವೂ ಇದೆ. ಹಲವೆಡೆಯ ಕಳಪೆ ಕಾಮಗಾರಿ ಆರೋಪಗಳೂ ಈಗಿನ GBA ಸಚಿವ ಕೃಷ್ಣಾ ಬೈರೇಗೌಡರನ್ನೇ ಕೆರಳಿಸಿದ್ದು, ಇತ್ತೀಚಿಗೆ ಸಭೆಗಳಲ್ಲೇ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ, ನಗರಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿರುವ…
