ಮಂಕಾಳ ವೈದ್ಯ, ಉಮಾಶ್ರೀ ಅವಿರೋಧ ಆಯ್ಕೆ: ವಿಧಾನಸಭೆ, ಪರಿಷತ್ತಿಗೆ ಹೊಸ ಉಪಾಧ್ಯಕ್ಷರು

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನಪರಿಷತ್ತಿನ ಉಪಸಭಾಪತಿಯಾಗಿ ಕಾಂಗ್ರೆಸ್‌ ಎಂಎಲ್‌ಸಿ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಸಭಾಧ್ಯಕ್ಷ ಸ್ಥಾನಕ್ಕೆ ಮಂಕಾಳ ವೈದ್ಯ ಮತ್ತು ಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇಬ್ಬರ ಆಯ್ಕೆ ಅವಿರೋಧವಾಗಿ ನಡೆಯಿತು. ವಿಧಾನಸಭೆಯಲ್ಲಿ ಮಂಕಾಳ ವೈದ್ಯ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಲಕ್ಷ್ಮಣ್ ಸವದಿ ಅವರು ಅನುಮೋದಿಸಿದರು. ಬಳಿಕ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಧ್ವನಿಮತದ ಮೂಲಕ ವೈದ್ಯರನ್ನು ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ರುದ್ರಪ್ಪ ಲಮಾಣಿ ಸೇರ್ಪಡೆಯಾದ ಬಳಿಕ ಅವರು ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಹುದ್ದೆ ಖಾಲಿಯಾಗಿತ್ತು. ಈ ಹಿಂದೆ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷ…

ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ವಶಕ್ಕೆ

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಅವರ ನಿವಾಸದ ಮೇಲೆ ED ಅಧಿಕಾರಿಗಳು ದಾಳಿ ನಡೆಸಿದ್ದು, ಮೊಬೈಲ್ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದದಲ್ಲಿರುವ ಅವರ ನಿವಾಸ ಹಾಗೂ ಕಚೇರಿಯ ಮೇಲೂ ಶೋಧ ನಡೆಸಲಾಗಿದೆ. ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 8 ಜಿಲ್ಲೆಗಳ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದೆ. KPSC ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸ ಹಾಗೂ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ಮನೆಗಳಲ್ಲೂ ಶೋಧ ನಡೆಸಲಾಗಿದೆ. ನೇಮಕಾತಿ ಅಕ್ರಮದ ಹಣದ ಜಾಡು ಹಾಗೂ ಡಿಜಿಟಲ್ ಸಾಕ್ಷ್ಯಗಳಿಗಾಗಿ ED ಅಧಿಕಾರಿಗಳು…

ಬಿಜೆವೈಎಂಗೆ ಹೊಸ ಸಾರಥಿ: ತೇಜಸ್ವಿ ಸೂರ್ಯ ಸ್ಥಾನಕ್ಕೆ ಹೇಮಂಗ್ ಜೋಶಿ ನೇಮಕ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ವಡೋದರ ಲೋಕಸಭಾ ಕ್ಷೇತ್ರದ ಸಂಸದ ಹೇಮಂಗ್ ಜೋಶಿ ಅವರನ್ನು ಭಾರತೀಯ ಜನತಾ ಯುವ ಮೋರ್ಚಾ (BJYM) ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು,  ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಗೆಟ್ ಪಾಸ್ ನೀಡಲಾಗಿದೆ. ಬಿಜೆವೈಎಂ ಅಧ್ಯಕ್ಷರಾಗಿ 14 ವರ್ಷಗಳ ತಮ್ಮ ಪಯಣವನ್ನು ಸ್ಮರಿಸಿರುವ ತೇಜಸ್ವಿ ಸೂರ್ಯ, ಪಕ್ಷದ ಹಿರಿಯ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ಅವರು, ನಗರದ ಯುವ ಮೋರ್ಚಾ ಘಟಕದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ತಮ್ಮ ಪಯಣ ರಾಷ್ಟ್ರೀಯ ನಾಯಕತ್ವದವರೆಗೆ ತಲುಪುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ…

MAITREE-XV ಜಂಟಿ ಸೇನಾ ಕವಾಯತು: ಥೈಲ್ಯಾಂಡ್‌ಗೆ ಭಾರತೀಯ ಸೇನಾ ತುಕಡಿ

ನವದೆಹಲಿ: 15ನೇ ಭಾರತ–ಥೈಲ್ಯಾಂಡ್ ಜಂಟಿ ಸೇನಾ ಕವಾಯತು MAITREE-XV (2026) ನಲ್ಲಿ ಭಾಗವಹಿಸಲು ಭಾರತೀಯ ಸೇನಾ ತುಕಡಿ ಸೋಮವಾರ ಥೈಲ್ಯಾಂಡ್‌ಗೆ ತೆರಳಿದೆ. ಆಗಸ್ಟ್ 18ರಿಂದ 31ರವರೆಗೆ ಥೈಲ್ಯಾಂಡ್‌ನ ಸೂರತ್ ಥಾನಿಯಲ್ಲಿರುವ ವಿಭಾವಡಿ ರಂಗಸಿತ್ ಶಿಬಿರದಲ್ಲಿ ಸೇನಾ ಕಸರತ್ತು ನಡೆಯಲಿದೆ. 2025ರ ಸೆಪ್ಟೆಂಬರ್‌ನಲ್ಲಿ ಮೇಘಾಲಯದ ಉಮ್ರೊಯ್‌ನಲ್ಲಿ ಹಿಂದಿನ ಆವೃತ್ತಿಯ ವ್ಯಾಯಾಮ ನಡೆದಿತ್ತು. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ಒತ್ತು ಭಾರತ ಮತ್ತು ಥೈಲ್ಯಾಂಡ್ ಸೇನೆಗಳು ತಲಾ 85 ಸಿಬ್ಬಂದಿಯನ್ನು ನಿಯೋಜಿಸಲಿವೆ. ಭಾರತೀಯ ತುಕಡಿಯಲ್ಲಿ ಮುಖ್ಯವಾಗಿ 9 ಗೂರ್ಖಾ ರೈಫಲ್ಸ್ ಸಿಬ್ಬಂದಿ ಇದ್ದರೆ, ಥಾಯ್ ತುಕಡಿಯಲ್ಲಿ 5ನೇ ಡಿವಿಷನ್‌ನ 25ನೇ ಪದಾತಿ ದಳದ 3ನೇ ಬೆಟಾಲಿಯನ್ ಸಿಬ್ಬಂದಿ ಭಾಗವಹಿಸಲಿದ್ದಾರೆ. ಕಂಪನಿ ಮಟ್ಟದಲ್ಲಿ ನಡೆಯುವ ಈ ಜಂಟಿ ವ್ಯಾಯಾಮದಲ್ಲಿ ಅರಣ್ಯ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ, ದಂಗೆ ನಿಗ್ರಹ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ತರಬೇತಿ ನೀಡಲಾಗುತ್ತದೆ. ಕ್ಷೇತ್ರ ತರಬೇತಿ, ಯುದ್ಧ…

ಕತಾರ್‌ನಿಂದ ಭಾರತಕ್ಕೆ UPI ಮೂಲಕ ಹಣ ಕಳುಹಿಸುವ ಸೇವೆ ಆರಂಭ

ನವದೆಹಲಿ: ಕತಾರ್‌ನಲ್ಲಿ ವಾಸಿಸುವ ಭಾರತೀಯರಿಗೆ ಅನುಕೂಲವಾಗುವಂತೆ ಕತಾರ್ ಪೋಸ್ಟ್ ಔಟ್‌ಲೆಟ್‌ಗಳ ಮೂಲಕ UPI ಆಧಾರಿತ ಡಿಜಿಟಲ್ ರವಾನೆ ಸೇವೆ ಆರಂಭಿಸಲಾಗಿದೆ. ಇದರ ಮೂಲಕ ಕತಾರ್‌ನಿಂದ ಭಾರತದಲ್ಲಿರುವ UPI ಸಕ್ರಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಕಳುಹಿಸಬಹುದು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಿಂದ ‘PosTransfer’ ಸೇವೆ ಕತಾರ್‌ನಲ್ಲಿ ಕಾರ್ಯಾರಂಭಿಸಿದೆ. ಕತಾರ್ ಪೋಸ್ಟ್, ಇಂಡಿಯಾ ಪೋಸ್ಟ್, ಯುನಿವರ್ಸಲ್ ಪೋಸ್ಟಲ್ ಯೂನಿಯನ್‌ನ ಇಂಟರ್‌ಕನೆಕ್ಷನ್ ಪ್ಲಾಟ್‌ಫಾರ್ಮ್ (UPU-IP) ಮತ್ತು NPCI ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಸಹಯೋಗದಲ್ಲಿ ಈ ಸೇವೆ ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರು ಕತಾರ್ ಪೋಸ್ಟ್ ಔಟ್‌ಲೆಟ್‌ನಲ್ಲಿ ಫಲಾನುಭವಿಯ UPI ಐಡಿ ಹಾಗೂ ಅಗತ್ಯ ಗುರುತಿನ ವಿವರಗಳನ್ನು ನೀಡಿ ಹಣ ವರ್ಗಾವಣೆ ಮಾಡಬಹುದು. ಫಲಾನುಭವಿಯು ತಮ್ಮ UPI ಆ್ಯಪ್‌ನಲ್ಲಿ ವಿದೇಶಿ ಒಳಮುಖ ರವಾನೆ ಸ್ವೀಕರಿಸುವ ಸೌಲಭ್ಯವನ್ನು ಸಕ್ರಿಯಗೊಳಿಸಿರಬೇಕು. ಸೌಲಭ್ಯ ಸಕ್ರಿಯವಾಗಿದ್ದರೆ, ಹಣವು ಫಲಾನುಭವಿಯ UPI-ಸಕ್ರಿಯ ಬ್ಯಾಂಕ್ ಖಾತೆಗೆ ತಕ್ಷಣ ಜಮೆಯಾಗಲಿದೆ.…

‘ನೀವು ಆರಂಭಿಸಿದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ತಿ ಮಾಡಬಾರದೇ?’; ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಬಿಡದಿ ಟೌನ್‌ಶಿಪ್ ಮತ್ತು ನೈಸ್ ಯೋಜನೆ ವಿಚಾರವಾಗಿ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅವಧಿಯಲ್ಲಿ ಆರಂಭವಾದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ಣಗೊಳಿಸಬಾರದೇ ಎಂದು ಪ್ರಶ್ನಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌, ಜೆಡಿಎಸ್‌ ನಾಯಕರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ‘ಯೋಜನೆ ಆರಂಭಿಸಿದ್ದು ನೀವೇ, ಪೂರ್ಣಗೊಳಿಸಿದರೆ ತಪ್ಪೇ?’ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕುಮಾರಸ್ವಾಮಿ ಆರಂಭಿಸಿದ್ದರೆ, ನೈಸ್ ಯೋಜನೆಯ ಪಿತಾಮಹರು ದೇವೇಗೌಡರು ಎಂದು ಕಾಂಗ್ರೆಸ್‌ ಹೇಳಿದೆ. ನೀವು ಆರಂಭಿಸಿದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ಣಗೊಳಿಸಬಾರದೇ? ಎಂದು ಪ್ರಶ್ನಿಸಿದೆ. ‘ನೀವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂದು ಹೇಳಲು ಹೇಗೆ ಸಾಧ್ಯ?’ ಎಂದು ಜೆಡಿಎಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್ ಯೋಜನೆಯನ್ನು…

‘ಪ್ರಜಾಪ್ರಭುತ್ವವನ್ನು ಕಲಿಯಿರಿ, ಮುನ್ನಡೆಸಿ’: ಸಿಇಸಿ ಜ್ಞಾನೇಶ್ ಕುಮಾರ್

ಪಾಟ್ನಾ: ಚುನಾವಣಾ ಸಾಕ್ಷರತೆ ಹೆಚ್ಚಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಬೆಳೆಸಲು ಹಾಗೂ ಯುವಜನರ ಮಾಹಿತಿಯುಕ್ತ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪಾತ್ರ ವಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕರೆ ನೀಡಿದ್ದಾರೆ. ಪಾಟ್ನಾದಲ್ಲಿ ಸೋಮವಾರ ನಡೆದ ‘ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಮತ್ತು ಇಸಿಐನೆಟ್‌’ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವರ್ಷಪೂರ್ತಿ ಚುನಾವಣಾ ಜಾಗೃತಿ ಮೂಡಿಸುವ ‘ಚುನಾವಣಾ ಸಾಕ್ಷರತಾ ಕ್ಲಬ್‌ (ELC 2.0)’ ಉಪಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಯುವ ಮತದಾರರು ಭಾರತದ ಚುನಾವಣಾ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾರರ ನೋಂದಣಿ, ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ತಿಳಿದುಕೊಳ್ಳಬೇಕು ಎಂದು ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಹೊಸ ELC ಲೋಗೋ ಮತ್ತು ‘ಪ್ರಜಾಪ್ರಭುತ್ವವನ್ನು ಕಲಿಯಿರಿ. ಪ್ರಜಾಪ್ರಭುತ್ವವನ್ನು ಮುನ್ನಡೆಸಿ.’ ಎಂಬ…

ವಾಲ್ಮೀಕಿ ನಿಗಮ ಹಗರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಪಾತ್ರ: ಸಿ.ಟಿ. ರವಿ ಆರೋಪ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಅದರ ಹೈಕಮಾಂಡ್‌ ಪಾತ್ರವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಗಮದ ₹89.62 ಕೋಟಿ ಹಣ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರುವುದನ್ನು ಸರ್ಕಾರವೇ ಉತ್ತರದಲ್ಲಿ ಒಪ್ಪಿಕೊಂಡಿದೆ ಎಂದರು. ಪ್ರಕರಣದಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಸ್‌ಐಟಿ ತನಿಖೆಯಲ್ಲಿ ಹಣ ದುರುಪಯೋಗವಾಗಿರುವುದು ಸಾಬೀತಾಗಿದೆ ಎಂದು ಹೇಳಿದರು. ಹಗರಣದ ಹಣವನ್ನು ತೆಲಂಗಾಣ ಚುನಾವಣೆ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನ ಚುನಾವಣೆ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಅಲ್ಲದೆ, ಬ್ರಾಂಡಿ ಅಂಗಡಿ, ಜ್ಯುವೆಲ್ಲರಿ ಅಂಗಡಿ ಮತ್ತು ಕಾರು ಶೋರೂಂಗಳಿಗೂ ಹಣ ಹೋಗಿದೆ ಎಂದು ಸಿ.ಟಿ. ರವಿ ಆರೋಪಿಸಿದರು. “ರಾತ್ರಿ ಕಳ್ಳನನ್ನು ಹಿಡಿದು, ಹಗಲು ಮತ್ತೆ ಸಚಿವರನ್ನಾಗಿ ಮಾಡಿದರೆ ಕಾಂಗ್ರೆಸ್‌ ಪಕ್ಷ ಮತ್ತು…

ಪರಿಶಿಷ್ಟ ಪಂಗಡಗಳ ಯೋಜನೆ ಅನುಷ್ಠಾನ ವಿಳಂಬ ಬೇಡ; ಅಧಿಕಾರಿಗಳಿಗೆ ರಘುಮೂರ್ತಿ ತಾಕೀತು

ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಟಿ. ರಘುಮೂರ್ತಿ ಅವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು,ಇಲಾಖೆಯ ಕಾರ್ಯವೈಖರಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಮಾತನಾಡಿದ ಸಚಿವ ರಘುಮೂರ್ತಿ ಅವರು, ಇಲಾಖೆಯಲ್ಲಿ ಈಗಾಗಲೇ ಕೈಗೊಂಡಿರುವ ಎಲ್ಲ ಯೋಜನೆಗಳ ಅನುಷ್ಠಾನದ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವ ಯೋಜನೆಗಳು ಯಾವ ಹಂತದಲ್ಲಿದೆ? ಬಾಕಿ ಇರುವ ಕಾಮಗಾರಿಗಳು ಯಾವುವು ಹಾಗೂ ಅವುಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಕ್ರಮಗಳೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ನಿರ್ದೇಶನ…

Gwalior road accident: 8 killed, over 25 workers injured

Bhopal: At least eight people were killed and more than 25 workers injured in a horrific road accident in Gwalior, Madhya Pradesh, late Monday night. The accident occurred around 12 am near Chinka on National Highway-79, when a truck travelling in the opposite direction collided with a loading vehicle carrying workers. The impact caused the vehicle to overturn, leaving several workers trapped inside. Following the accident, police, local residents and other motorists rushed to the spot and launched a rescue operation. The trapped workers were pulled out and the injured…