ಮುಂಬೈ: ಆರೋಷಿ ಬಜಾಜ್, ಪಿಯೂಷ್ ಖಾಟಿ, ಬಿಯಾಂಕಾ ಅರೋರಾ ಹಾಗೂ ಅಂಶ್ ದುಗ್ಗಲ್ ಅಭಿನಯದ ಯುವಜನರನ್ನು ಕೇಂದ್ರವಾಗಿಟ್ಟುಕೊಂಡ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ‘ಡೋಂಟ್ ಬಿ ಶೈ’ ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ಸ್ನೇಹ, ಮೊದಲ ಪ್ರೀತಿ, ಪ್ರೇಮಭಂಗ, ತಪ್ಪು ನಿರ್ಧಾರಗಳು ಹಾಗೂ ಜೀವನವನ್ನು ಅರ್ಥಮಾಡಿಕೊಳ್ಳುವ ಯುವಕರ ಪ್ರಯಾಣವನ್ನು ಸಿನಿಮಾ ಕಟ್ಟಿಕೊಡಲಿದೆ. ಟ್ರೈಲರ್‌ನಲ್ಲಿ ಸ್ವತಂತ್ರ ಮನೋಭಾವದ ಶ್ಯಾಮಿಲಿ ‘ಶೈ’ ದಾಸ್ ಪಾತ್ರದಲ್ಲಿ ಆರೋಷಿ ಬಜಾಜ್ ಕಾಣಿಸಿಕೊಂಡಿದ್ದಾರೆ. ತನ್ನ ಲಾಭಕ್ಕಾಗಿ ಇತರರನ್ನು ಬಳಸಿಕೊಳ್ಳುವ ಶೈ ಕೊನೆಗೆ ಸಿಕ್ಕಿಬೀಳುತ್ತಾಳೆ. ಬಳಿಕ ಆಕೆಯ ಜೀವನ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. ಸಾಂಪ್ರದಾಯಿಕ ಪ್ರೇಮ ತ್ರಿಕೋನದ ಕಥೆಗಿಂತ ವಿಭಿನ್ನವಾಗಿ ಹಲವು ಸಂಬಂಧಗಳು ಮತ್ತು ಅವುಗಳಿಂದ ಉಂಟಾಗುವ ಭಾವನಾತ್ಮಕ ಏರಿಳಿತಗಳನ್ನು ಚಿತ್ರ ಒಳಗೊಂಡಿದೆ. ಶ್ರೀತಿ ಮುಖರ್ಜಿ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಕುನಾಲ್ ರಾಯ್ ಕಪೂರ್, ಅನುರಾಗ್ ಬಸು, ನೇಹಾ ಧೂಪಿಯಾ ಹಾಗೂ ಅಂಜು ಆಲ್ವಾ ನಾಯಕ್ ಕೂಡ ಪ್ರಮುಖ…
Day: September 12, 2026
ಬ್ರಿಕ್ಸ್ ಶೃಂಗಸಭೆ: ಜಾಗತಿಕ ಸಂಘರ್ಷ, ವಿಶ್ವಸಂಸ್ಥೆ ಸುಧಾರಣೆ ಕುರಿತು ಗುಟೆರೆಸ್-ಮೋದಿ ಚರ್ಚೆ
ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಶುಕ್ರವಾರ ಭೇಟಿಯಾಗಿ ಜಾಗತಿಕ ಸಂಘರ್ಷಗಳು, ಬಹುಪಕ್ಷೀಯ ಸುಧಾರಣೆ ಹಾಗೂ ಉದಯೋನ್ಮುಖ ಸವಾಲುಗಳ ಕುರಿತು ಚರ್ಚಿಸಿದರು. ಭಾರತ ನಾಲ್ಕನೇ ಬಾರಿಗೆ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವುದಕ್ಕೆ ಗುಟೆರೆಸ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸಭೆಯಲ್ಲಿ ಬಹುಧ್ರುವೀಯತೆಯ ಮಹತ್ವ ಹಾಗೂ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ವಾಸ್ತವಗಳಿಗೆ ಅನುಗುಣವಾಗಿ ಬಹುಪಕ್ಷೀಯ ಸಂಸ್ಥೆಗಳನ್ನು ಹೆಚ್ಚು ಪ್ರತಿನಿಧೀಯವಾಗಿಸುವ ಅಗತ್ಯದ ಕುರಿತು ಉಭಯ ನಾಯಕರು ಅಭಿಪ್ರಾಯ ಹಂಚಿಕೊಂಡರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ದೀರ್ಘಕಾಲಿಕ ವಿಚಾರವೂ ಚರ್ಚೆಯಾಯಿತು. ನಡೆಯುತ್ತಿರುವ ಸಂಘರ್ಷಗಳು, ಸಂಚಾರದ ಸ್ವಾತಂತ್ರ್ಯ, ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ…
ಕೇಂದ್ರವೇ 5 ಕೆಜಿ ಅಕ್ಕಿ ನೀಡುತ್ತಿದೆ, ರಾಜ್ಯ ಸರ್ಕಾರವಲ್ಲ: ಪ್ರಹ್ಲಾದ ಜೋಶಿ
ಬಳ್ಳಾರಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ ಅಕ್ಕಿ ನೀಡುತ್ತಿದೆ ಎಂಬುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು. ಕಾಂಗ್ರೆಸ್ ಸರ್ಕಾರ ಅವುಗಳನ್ನು ಸರಿಯಾಗಿ ಮುಂದುವರಿಸಿಲ್ಲ ಎಂದು ಆರೋಪಿಸಿದರು. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೊರೆಯುತ್ತಿರುವ 5 ಕೆಜಿ ಅಕ್ಕಿಯನ್ನೇ ರಾಜ್ಯ ಸರ್ಕಾರ ನೀಡುತ್ತಿರುವಂತೆ ಬಿಂಬಿಸಲಾಗುತ್ತಿದೆ ಎಂದು ಜೋಶಿ ಟೀಕಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ 100 ದಿನಗಳ ಸಂಭ್ರಮ ಆಚರಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್…
‘ಬಿಜೆಪಿ ತಂದೆ–ಮಕ್ಕಳ ಪಕ್ಷವಾಗುತ್ತಿದೆ; ಕೆಲಸ ಮಾಡುವ ಕಾರ್ಯಕರ್ತರಿಗೆ ಬೆಲೆಯಿಲ್ಲ’: ಕಮಲ ತೊರೆದ ನರೇಂದ್ರಬಾಬು
ಬೆಂಗಳೂರು: ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ರಾಜಾಜಿನಗರ–ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರು ಸೆ.13ರಂದು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ನಗರದ ಮೌರ್ಯ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಸದಸ್ಯರಾಗಿ ಮೂರು ಬಾರಿ ಹಾಗೂ ಶಾಸಕರಾಗಿ ಎರಡು ಬಾರಿ ಸೇರಿದಂತೆ ಸುಮಾರು 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಳೆದ 10 ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದರೂ ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ತಮ್ಮನ್ನು ಹಾಗೂ ತಮ್ಮ ಕಾರ್ಯಕರ್ತರನ್ನು ಪಕ್ಷದಿಂದ ದೂರ ಮಾಡಲಾಗಿದೆ ಎಂದು ಆರೋಪಿಸಿದರು. ‘ನನ್ನ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಪಕ್ಷದ ತೀರ್ಮಾನಗಳಲ್ಲಿ ಜಾಣ ಕುರುಡು,…
HPV ಲಸಿಕೆ: ಭಾರತದಲ್ಲಿ 80 ಲಕ್ಷಕ್ಕೂ ಹೆಚ್ಚು ಡೋಸ್ ವಿತರಣೆ; ಕರ್ನಾಟಕದಲ್ಲಿ 85%
ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಎಚ್‌ಪಿವಿ (HPV) ಲಸಿಕಾ ಅಭಿಯಾನ ಮಹತ್ವದ ಹಂತ ತಲುಪಿದೆ. ಫೆಬ್ರವರಿಯಲ್ಲಿ ಅಭಿಯಾನ ಆರಂಭವಾದ ಬಳಿಕ ದೇಶಾದ್ಯಂತ 80 ಲಕ್ಷಕ್ಕೂ ಹೆಚ್ಚು ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಕರ್ನಾಟಕದಲ್ಲಿ ಶೇ.85ಕ್ಕೂ ಅಧಿಕ ವ್ಯಾಪ್ತಿ ಸಾಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಈ ಅಭಿಯಾನದಡಿ ಪೋಷಕರ ಒಪ್ಪಿಗೆಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 14 ವರ್ಷ ವಯಸ್ಸಿನ ಬಾಲಕಿಯರಿಗೆ ಉಚಿತ ಹಾಗೂ ಸ್ವಯಂಪ್ರೇರಿತವಾಗಿ ಏಕ-ಡೋಸ್ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಅಂದಾಜಿನಂತೆ, ಪ್ರತಿ ವರ್ಷ ಸುಮಾರು 1.2 ಕೋಟಿ 14 ವರ್ಷದ ಬಾಲಕಿಯರು ಈ ಅಭಿಯಾನದ ವ್ಯಾಪ್ತಿಗೆ ಬರುತ್ತಾರೆ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಿಜೋರಾಂ ಶೇ.100ರಷ್ಟು ವ್ಯಾಪ್ತಿ ಸಾಧಿಸಿವೆ. ಬಿಹಾರ, ಆಂಧ್ರಪ್ರದೇಶ ಹಾಗೂ ಅಸ್ಸಾಂ ಶೇ.90ಕ್ಕೂ ಅಧಿಕ ಸಾಧನೆ ಮಾಡಿವೆ. ಕರ್ನಾಟಕ…
ಅ.1ರಿಂದ ‘ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್ 2026’ ಜಾರಿ; ಡಿಜಿಟಲ್ ಬ್ಯಾಂಕಿಂಗ್ ದಾಖಲೆಗಳಿಗೂ ಕಾನೂನು ಮಾನ್ಯತೆ
ನವದೆಹಲಿ: ಬ್ಯಾಂಕಿಂಗ್ ದಾಖಲೆಗಳನ್ನು ನ್ಯಾಯಾಲಯದ ಕಲಾಪಗಳಲ್ಲಿ ಸಾಕ್ಷ್ಯವಾಗಿ ಬಳಸುವ ನಿಯಮಗಳನ್ನು ಆಧುನೀಕರಿಸುವ ‘ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್ 2026’ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಮೂಲಕ 1891ರ ಹಳೆಯ ಕಾಯ್ದೆ ಬದಲಾಗಲಿದ್ದು, ತಂತ್ರಜ್ಞಾನ-ತಟಸ್ಥ ಕಾನೂನು ಚೌಕಟ್ಟು ಜಾರಿಗೆ ಬರಲಿದೆ. ಆಗಸ್ಟ್ 13ರಂದು ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಹೊಸ ಕಾಯ್ದೆಯು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ತಾಂತ್ರಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಬ್ಯಾಂಕಿಂಗ್ ದಾಖಲೆಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ. ಹೊಸ ಕಾಯ್ದೆಯಡಿ ಭೌತಿಕ ದಾಖಲೆಗಳ ಜತೆಗೆ ಎಲೆಕ್ಟ್ರಾನಿಕ್, ಡಿಜಿಟಲ್, ವರ್ಚುವಲ್, ಕ್ಲೌಡ್ ಆಧಾರಿತ ಸೇರಿದಂತೆ ಸಮಕಾಲೀನ ಸ್ವರೂಪಗಳಲ್ಲಿ ನಿರ್ವಹಿಸಲಾದ ಬ್ಯಾಂಕಿಂಗ್ ದಾಖಲೆಗಳಿಗೂ ಕಾನೂನು ಮಾನ್ಯತೆ ದೊರೆಯಲಿದೆ. ಬ್ಯಾಂಕುಗಳು ದಾಖಲೆಗಳ ನಿರ್ವಹಣೆ ಮತ್ತು ಸಂಸ್ಕರಣೆಯಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಕಲಾಪಗಳಲ್ಲಿ ಇಂತಹ ದಾಖಲೆಗಳನ್ನು ಸಾಕ್ಷ್ಯವಾಗಿ ಮಂಡಿಸಲು ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ. ಬ್ಯಾಂಕಿಂಗ್…
‘ಬಿಜೆಪಿ ತಂದೆ–ಮಕ್ಕಳ ಪಕ್ಷವಾಗುತ್ತಿದೆ; ಕೆಲಸ ಮಾಡುವ ಕಾರ್ಯಕರ್ತರಿಗೆ ಬೆಲೆಯಿಲ್ಲ’: ಕಮಲ ತೊರೆದ ನರೇಂದ್ರಬಾಬು
ಬೆಂಗಳೂರು: ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ರಾಜಾಜಿನಗರ–ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರು ಸೆ.13ರಂದು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ನಗರದ ಮೌರ್ಯ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಸದಸ್ಯರಾಗಿ ಮೂರು ಬಾರಿ ಹಾಗೂ ಶಾಸಕರಾಗಿ ಎರಡು ಬಾರಿ ಸೇರಿದಂತೆ ಸುಮಾರು 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಳೆದ 10 ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದರೂ ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ತಮ್ಮನ್ನು ಹಾಗೂ ತಮ್ಮ ಕಾರ್ಯಕರ್ತರನ್ನು ಪಕ್ಷದಿಂದ ದೂರ ಮಾಡಲಾಗಿದೆ ಎಂದು ಆರೋಪಿಸಿದರು. ‘ನನ್ನ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಪಕ್ಷದ ತೀರ್ಮಾನಗಳಲ್ಲಿ ಜಾಣ ಕುರುಡು,…
ಸಚಿವ ಜಾರಕಿಹೊಳಿ ನಿವಾಸದಲ್ಲಿ ED ಶೋಧ: ವಿದೇಶಿ ಹೂಡಿಕೆ, ಎರಡು ಟ್ರಂಕ್ ಹಣದ ಆರೋಪಕ್ಕೆ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧದ ಬೆನ್ನಲ್ಲೇ ಹರಿದಾಡುತ್ತಿರುವ ₹750 ಕೋಟಿ ವಿದೇಶಿ ಹೂಡಿಕೆ, ಎರಡು ಟ್ರಂಕ್ ಹಣ ಹಾಗೂ ‘ಮೈಸೂರು ಲಿಂಕ್’ ಕುರಿತ ಚರ್ಚೆಗಳಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ₹1.73 ಕೋಟಿ ಮಾತ್ರ ವಶಪಡಿಸಿಕೊಳ್ಳಲಾಗಿದೆ. ₹750 ಕೋಟಿ ವಿದೇಶಿ ಹೂಡಿಕೆ ಅಥವಾ ಎರಡು ಟ್ರಂಕ್‌ಗಳಲ್ಲಿ ಹಣ ಪತ್ತೆಯಾಗಿದೆ ಎಂಬುದು ಸರಿಯಲ್ಲ ಎಂದು ಹೇಳಿದರು. ಇ.ಡಿ. ಅಧಿಕಾರಿಗಳು ಎರಡು ಟ್ರಂಕ್‌ಗಳನ್ನು ತಂದಿದ್ದರು. ಒಂದು ಟ್ರಂಕ್‌ನಲ್ಲಿ ಹಣ ತೆಗೆದುಕೊಂಡು ಹೋಗಿದ್ದು, ಮತ್ತೊಂದು ಖಾಲಿ ಟ್ರಂಕ್ ಅನ್ನು ಮನೆಯಲ್ಲೇ ಬಿಟ್ಟಿದ್ದಾರೆ. ಅಗತ್ಯವಿದ್ದರೆ ಆ ಟ್ರಂಕ್ ಅನ್ನು ತೋರಿಸಲು ಸಿದ್ಧ ಎಂದು…
