ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಹಣಕಾಸಿನ ಮೂಲಗಳಿಗೆ ಹೊಡೆತ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಷ್ಯಾ ವಿರುದ್ಧ ವ್ಯಾಪಕ ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲು ಅಧಿಕಾರ ನೀಡುವ ಮಸೂದೆಗೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. ಅಮೆರಿಕ ಕಾಂಗ್ರೆಸ್‌ನಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ರಂಪ್ ಸಹಿ ಮಾಡಿದ್ದಾರೆ. ರಷ್ಯಾದ ಇಂಧನ ಮತ್ತು ರಕ್ಷಣಾ ವಲಯಗಳ ಜತೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನೂ ನಿರ್ಬಂಧಗಳ ವ್ಯಾಪ್ತಿಗೆ ತರಲು ಮಸೂದೆ ಅವಕಾಶ ನೀಡುತ್ತದೆ. ‘ಶ್ಯಾಡೋ ಫ್ಲೀಟ್’ಗೂ ಬಿಸಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಲು ರಷ್ಯಾ ಬಳಸುತ್ತಿದೆ ಎನ್ನಲಾಗಿರುವ ‘ಶ್ಯಾಡೋ ಫ್ಲೀಟ್’ ತೈಲ ಟ್ಯಾಂಕರ್‌ಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆ ಅವಕಾಶ ನೀಡಿದೆ. ರಷ್ಯಾದ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ…
