ರಕ್ಷಣಾ ಭೂಮಿ ಹಸ್ತಾಂತರಕ್ಕೆ ವೇಗ: ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್

ನವದೆಹಲಿ: ಬೆಂಗಳೂರಿನ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ರಕ್ಷಣಾ ಇಲಾಖೆಯ ಭೂಮಿ ಹಸ್ತಾಂತರ ಹಾಗೂ ಬಾಕಿ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಸೋಮವಾರ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಶಿವಕುಮಾರ್, ಬೆಂಗಳೂರಿನ ಸಾರ್ವಜನಿಕ ಉದ್ಯಾನಗಳು, ರಸ್ತೆ ಸಂಪರ್ಕ, ಕೊಳೆಗೇರಿ ಪುನರಾಭಿವೃದ್ಧಿ ಹಾಗೂ ಪ್ರಸ್ತಾವಿತ ಅವಳಿ ಸುರಂಗ ಮಾರ್ಗ ಯೋಜನೆಗಳಿಗೆ ರಕ್ಷಣಾ ಭೂಮಿಯ ಬಳಕೆಯ ಕುರಿತು ಚರ್ಚಿಸಿದರು. ಇಬ್ಲೂರ್ ಫೈರಿಂಗ್ ರೇಂಜ್ ಬಳಿಯ ಸುಮಾರು 730 ಎಕರೆ ಬಳಕೆಯಾಗದ ರಕ್ಷಣಾ ಭೂಮಿಯನ್ನು ಶಾಶ್ವತ ಸಾರ್ವಜನಿಕ ಉದ್ಯಾನ ಮತ್ತು ಹಸಿರು ವಲಯವಾಗಿ ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ಅವರು ಕೋರಿದರು. 43.838 ಎಕರೆ ರಕ್ಷಣಾ ಭೂಮಿಯಲ್ಲಿರುವ 10 ಅಧಿಕೃತ ಕೊಳೆಗೇರಿಗಳ ಪುನರಾಭಿವೃದ್ಧಿಗೆ ಅನುಮತಿ, ಎಚ್‌ಎಎಲ್ ಹಾಗೂ ಯಲಹಂಕ ವಾಯುನೆಲೆಗಳ ಸುತ್ತಲಿನ ಕಟ್ಟಡ ನಿರ್ಮಾಣ ನಿರ್ಬಂಧಗಳ ಮರುಪರಿಶೀಲನೆ…