ಬೆಂಗಳೂರು: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ವತಿಯಿಂದ ನೀಡಲಾಗುವ ಬೆಂಗಳೂರು ಜಿಲ್ಲಾ ಮಟ್ಟದ ‘ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ-2026’ಗೆ 10 ಉಪನ್ಯಾಸಕರು ಆಯ್ಕೆಯಾಗಿದ್ದಾರೆ. ರಾಜಾಜಿನಗರದ ಕದಂಬ ಹೋಟೆಲ್‌ನಲ್ಲಿ ನಡೆದ ಕುಪ್ಮಾ ಬೆಂಗಳೂರು ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪನ್ಯಾಸಕರ ವೃತ್ತಿಪರ ಅನುಭವ, ಬೋಧನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಪ್ರತಿಭೆ ಹಾಗೂ ಸೇವೆಯನ್ನು ಪರಿಗಣಿಸಿ ಸರ್ವಾನುಮತದಿಂದ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ವಿದ್ಯಾಸೌಧ ಪಿಯು ಕಾಲೇಜಿನ ಡಾ. ಲಕ್ಷ್ಮೀ ಪ್ರಸನ್ನ, ಕಡಂಬಿ ಪಿಯು ಕಾಲೇಜಿನ ರೂಪಾ ಪೈ, ಪ್ರೆಸಿಡೆನ್ಸಿ ಪಿಯು ಕಾಲೇಜಿನ ಕೃತಿಕಾ, ವಿಜಯ ಜ್ಯೋತಿ ಪಿಯು ಕಾಲೇಜಿನ ನರೇಂದ್ರ, ದಯಾನಂದ ಸಾಗರ್ ಪಿಯು ಕಾಲೇಜಿನ ಶ್ರೀಪ್ರಿಯಾ, ಶೇಷಾದ್ರಿಪುರಂ ಪಿಯು ಕಾಲೇಜಿನ ಜಿ.ಕೆ. ಮಂಜುನಾಥ್, ಸೌಂದರ್ಯ ಪಿಯು ಕಾಲೇಜಿನ ಉಷಾರಾಣಿ, ಎಎಸ್ಸಿ ಪಿಯು ಕಾಲೇಜಿನ ನೇತ್ರ, ಗಂಗಾ ಪಿಯು…
