ಪ್ರತಿಷ್ಠಿತ ಪ್ರಿಂಟ್ ಬಿನಾಲೆ ಇಂಡಿಯಾ–2026 ಪ್ರಶಸ್ತಿ ಪಡೆದ ಹಾಸನ ಜಿಲ್ಲೆಯ ಕಲಾವಿದ

ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಬ್ಬೂರು ಗ್ರಾಮದ ಕಲಾವಿದ ಕೆ.ಆರ್. ಬಸವರಾಜಾಚಾರ್ ಅವರು ಪ್ರತಿಷ್ಠಿತ ಪ್ರಿಂಟ್ ಬಿನಾಲೆ ಇಂಡಿಯಾ–2026 ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಡಿ.ಕೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಸವರಾಜಾಚಾರ್ ಅವರು ಪ್ರಶಸ್ತಿ ಸ್ವೀಕರಿಸಿರುವುದು ಅವರ ಕಲಾಸಾಧನೆಗೆ ಸಂದ ಗೌರವವಾಗಿದೆ ಎಂದು ಅವರು ತಿಳಿಸಿದ್ದಾರೆ.

34 ದೇಶಗಳ 1,449 ಕಲಾಕೃತಿಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಅತ್ಯುತ್ತಮ ಕಲಾಕೃತಿಗಳಿಗಾಗಿ ಆಯ್ಕೆಯಾದ ಐವರು ಕಲಾವಿದರಲ್ಲಿ ಬಸವರಾಜಾಚಾರ್ ಸ್ಥಾನ ಪಡೆದಿರುವುದು ವಿಶೇಷ ಹೆಗ್ಗಳಿಕೆ. ಜಾಗತಿಕ ಕಲಾವೇದಿಕೆಯಲ್ಲಿ ಅವರ ಪ್ರತಿಭೆಗೆ ದೊರೆತ ಈ ಮನ್ನಣೆ ಕನ್ನಡ ನಾಡಿನ ಕಲಾ ಕ್ಷೇತ್ರಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿ ಪಡೆದ ಬಸವರಾಜಾಚಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಅವರು, ಕಲಾವಿದರ ಕಲಾಸಾಧನೆ ಮತ್ತಷ್ಟು ಎತ್ತರಕ್ಕೇರಲಿ ಹಾಗೂ ಕನ್ನಡ ನಾಡಿನ ಕೀರ್ತಿ ಜಗದಗಲ ಪಸರಿಸಲಿ ಎಂದು ಶುಭ ಹಾರೈಸಿದ್ದಾರೆ.

Related posts