ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ಶಾಸಕಾಂಗ ಅನುಭವ ಹೊಂದಿರುವ ಹಿರಿಯ ಸಂಸದೀಯ ನಾಯಕರಾಗಿದ್ದು, ಸಾರ್ವಜನಿಕ ಜೀವನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ವಿರುದ್ಧ ಬಿಜೆಪಿ ನಾಯಕರು ಪದೇಪದೇ ವೈಯಕ್ತಿಕ ಟೀಕೆಗಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ರಾಜಕೀಯ ಸಂವಾದದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಖರ್ಗೆ ಅವರ ಸಾರ್ವಜನಿಕ ಭಾಷಣಗಳ ಕುರಿತ ವಿವಾದಗಳಿಂದ ಹಿಡಿದು ವೈಯಕ್ತಿಕ ಟೀಕೆಗಳು ಮತ್ತು ರಾಜೀನಾಮೆಗೆ ಒತ್ತಾಯಿಸಿ ನಡೆಸುವ ಪ್ರತಿಭಟನೆಗಳವರೆಗೆ ರಾಜಕೀಯ ಸಂಘರ್ಷವು ರಚನಾತ್ಮಕ ಚರ್ಚೆಯಿಂದ ವೈಯಕ್ತಿಕ ದಾಳಿಗಳತ್ತ ಸಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. 2023ರ ಆಗಸ್ಟ್ನಲ್ಲಿ ಕರ್ನಾಟಕದ ಬಿಜೆಪಿ ನಾಯಕ ಅರಾಗ ಜ್ಞಾನೇಂದ್ರ ಅವರು ಖರ್ಗೆ ಅವರ ಮೈಬಣ್ಣದ ಕುರಿತು ಮಾಡಿದ ಟೀಕೆ ಸೇರಿದಂತೆ, ಅವರ…
Day: October 28, 2026
ಶಿಕ್ಷಕರ ಧ್ವನಿಯ ಗೆಲುವು: ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತೇನೆ ಎಂದ ಪರಿಷತ್’ಗೆ ಆಯ್ಕೆಯಾದ ಎ.ಪಿ. ರಂಗನಾಥ್
ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು, ತಮ್ಮ ಗೆಲುವಿಗೆ ಶ್ರಮಿಸಿದ ಶಿಕ್ಷಕ ಬಾಂಧವರು ಹಾಗೂ ಮೈತ್ರಿಕೂಟದ ನಾಯಕರು ಮತ್ತು ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ನನಗೆ ಗೆಲುವು ತಂದುಕೊಟ್ಟ ಪ್ರಜ್ಞಾವಂತ ಶಿಕ್ಷಕ ಬಾಂಧವರಿಗೆ ಹಾಗೂ ಹಗಲಿರುಳು ಶ್ರಮಿಸಿದ ಎನ್ಡಿಎ ಮೈತ್ರಿಕೂಟದ ಎಲ್ಲ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಅವರು ತಿಳಿಸಿದ್ದಾರೆ. ಈ ಗೆಲುವು ಪ್ರಜ್ಞಾವಂತ ಶಿಕ್ಷಕರ ಧ್ವನಿಯ ಗೆಲುವು ಹಾಗೂ ಎಲ್ಲರ ಒಗ್ಗಟ್ಟಿನ ವಿಜಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ರಂಗನಾಥ್, ಶಿಕ್ಷಕರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಅವರ ಪರವಾಗಿ ನಿರಂತರವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ತಮ್ಮನ್ನು ಬೆಂಬಲಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದ ಶಿಕ್ಷಕರು ಹಾಗೂ ಚುನಾವಣೆಯಲ್ಲಿ ಹಗಲಿರುಳು ದುಡಿದ ಎನ್ಡಿಎ ಮುಖಂಡರು ಮತ್ತು ಕಾರ್ಯಕರ್ತರಿಗೆ ಅವರು ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ಅಂತಿಮ ಪಟ್ಟಿ ಪ್ರಕಟ: 1.07 ಕೋಟಿ ಹೆಸರುಗಳಿಗೆ ಕೊಕ್, 6.83 ಲಕ್ಷ ಮತದಾರರ ಸೇರ್ಪಡೆ
ಬೆಂಗಳೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ-2026 ಅನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಮತದಾರರು ಸ್ಥಾನ ಪಡೆದಿದ್ದಾರೆ. ಅಂತಿಮ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ 2.29 ಕೋಟಿ ಮಹಿಳಾ ಮತದಾರರು ಹಾಗೂ 2.25 ಕೋಟಿ ಪುರುಷ ಮತದಾರರಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ಮನೆಮನೆ ಪರಿಶೀಲನೆ ನಡೆಸಿದ ಬಳಿಕ ಕರಡು ಪಟ್ಟಿಯಿಂದ ಒಟ್ಟು 1.07 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ. ಸ್ಥಳಾಂತರಗೊಂಡ 65.4 ಲಕ್ಷ ಮತದಾರರು, ಪತ್ತೆಯಾಗದ 19 ಲಕ್ಷ ಮತದಾರರು ಹಾಗೂ ಮೃತಪಟ್ಟ 16.3 ಲಕ್ಷ ಮಂದಿಯ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಸುಮಾರು 7 ಲಕ್ಷ ನಕಲಿ ಮತದಾರರ ಹೆಸರುಗಳನ್ನೂ ಕೈಬಿಡಲಾಗಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಹೊಸ ಮತದಾರರ ಸೇರ್ಪಡೆಗೂ ಅವಕಾಶ ಕಲ್ಪಿಸಲಾಗಿದ್ದು, 18ರಿಂದ 19 ವರ್ಷದೊಳಗಿನ 6.83 ಲಕ್ಷ ಯುವ…
