ಚಿಕ್ಕಮಗಳೂರು: ದೇಶಾಭಿಮಾನ, ಆತ್ಮಾಭಿಮಾನ ಹಾಗೂ ಬಿಜೆಪಿಯ ಸಿದ್ಧಾಂತ ಮತ್ತು ರಾಷ್ಟ್ರೀಯ ವಿಚಾರಧಾರೆಗಳನ್ನು ಮೆಚ್ಚಿ ಕಳಸಾಪುರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಡಾ. ರವಿ ಸಿ.ಟಿ. ಅವರ ನಿವಾಸದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ್, ದೇವರಾಜ್ ಮತ್ತು ಯತೀಶ್ ಅವರ ನೇತೃತ್ವದಲ್ಲಿ ಪವನ್, ಚಂದನ್, ಉಮೇಶ್ ಕೆ.ಎಂ., ಜೀವನ್, ಸುನಿಲ್, ಪ್ರೀತಮ್ ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಡಾ. ರವಿ ಸಿ.ಟಿ. ಅವರು ಪಕ್ಷದ ಬಾವುಟ ನೀಡಿ ನೂತನ ಕಾರ್ಯಕರ್ತರನ್ನು ಬರಮಾಡಿಕೊಂಡರು. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದ ಪಕ್ಷದ ನಿಲುವುಗಳಿಂದ ಬೇಸತ್ತು ಬಿಜೆಪಿ ಸೇರುತ್ತಿರುವುದಾಗಿ ಯುವಕರು ತಿಳಿಸಿದರು. ಬಿಜೆಪಿಯ ಸಿದ್ಧಾಂತ ಮತ್ತು ದೇಶದ ಹಿತಾಸಕ್ತಿಗೆ ಆದ್ಯತೆ ನೀಡುವ ಪಕ್ಷದ ಕಾರ್ಯವೈಖರಿ ತಮ್ಮನ್ನು ಆಕರ್ಷಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.…
Day: November 4, 2026
ಚಳ್ಳಕೆರೆ: ಚಿರತೆ ಸೆರೆಗೆ ತ್ವರಿತ ಕಾರ್ಯಾಚರಣೆ, ಕುಟುಂಬಕ್ಕೆ ಪರಿಹಾರ ಬಿಡುಗಡೆಗೆ ಅಧಿಕಾರಿಗಳಿಗೆ ಸಚಿವರ ಸೂಚನೆ
ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ದೊಡ್ಡಚೆಲ್ಲೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಚಂದ್ರಪ್ಪ ಅವರ ನಿವಾಸಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ ಸಚಿವರು, ಚಂದ್ರಪ್ಪ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ಸಲ್ಲಿಸಿದರು. ದುಃಖತಪ್ತ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು. ಗ್ರಾಮದಲ್ಲಿ ಚಿರತೆ ದಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಶೀಘ್ರವಾಗಿ ಸೆರೆಹಿಡಿಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಚಂದ್ರಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಹಾಗೂ ಅಗತ್ಯ ಆರ್ಥಿಕ ನೆರವನ್ನು…
ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಬಂಧಿಸಿ ಸತ್ಯ ಬಹಿರಂಗಪಡಿಸಿ: ಡಾ. ರವಿ ಸಿ.ಟಿ ಆಗ್ರಹ
ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದ ಹಿಂದೆ ಯಾರಿದ್ದಾರೆ, ಅದನ್ನು ಯಾರು ಮಾಡಿಸಿದ್ದಾರೆ ಮತ್ತು ಯಾವ ಉದ್ದೇಶಕ್ಕಾಗಿ ನಡೆಸಲಾಗಿದೆ ಎಂಬ ಸಂಪೂರ್ಣ ಸತ್ಯವನ್ನು ರಾಜ್ಯದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದರು. ಸ್ಟಿಂಗ್ ಆಪರೇಷನ್ ನಡೆದಿದ್ದರೆ ಮೊದಲು ಅದರ ಮೂಲವನ್ನು ಪತ್ತೆಹಚ್ಚಬೇಕು. ಅದು ಎಲ್ಲಿಂದ ಆರಂಭವಾಯಿತು, ಯಾರು ಮಾಡಿಸಿದರು ಮತ್ತು ಯಾರು ನಡೆಸಿದರು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮೊಬೈಲ್ ಮತ್ತು ಸಿಮ್ಗಳನ್ನು ಪಡೆದು ಅಪ್ಲೋಡ್ ಮಾಡಿದವರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ನಿಜವಾಗಿ ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು ಎಂಬುದನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಅವರ ಹೆಸರು ಬಹಿರಂಗವಾದರೆ ಅಧಿಕಾರದ ಸ್ಥಾನಪಲ್ಲಟವಾಗುತ್ತದೆ ಎಂಬ ಭಯವಿದೆಯೇ? ಸಿದ್ದರಾಮಯ್ಯ ಅವರನ್ನು…
ಸಾರಿಗೆ ಬಸ್ ಪ್ರಯಾಣ ದರ ಏರಿಕೆಕೆಗೆ ಪ್ರತಿಪಕ್ಷ ಆಕ್ರೋಶ; ನವೆಂಬರ್ 5ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ
ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಹಣ ಪಾವತಿಸಿದ್ದರೆ ಬಸ್ ಪ್ರಯಾಣ ದರ ಏರಿಸುವ ಅಗತ್ಯವಿರಲಿಲ್ಲ. ಸರ್ಕಾರದ ವೈಫಲ್ಯದ ಹೊರೆ ಇದೀಗ ಜನರ ಮೇಲೆ ಹಾಕಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ದಾಖಲೆ ಎನ್ನುವ ರೀತಿಯಲ್ಲಿ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. ಕೆಲವು ಮಾರ್ಗಗಳಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ದೀಪಾವಳಿ ಸಂದರ್ಭದಲ್ಲಿ ಜನರಿಗೆ ನೆಮ್ಮದಿ ನೀಡುವ ಬದಲು ಆರ್ಥಿಕ ಹೊರೆ ಹಾಕಲಾಗಿದೆ ಎಂದು ಟೀಕಿಸಿದರು. ಕೆಎಸ್ಆರ್ಟಿಸಿಗೆ ₹2,943 ಕೋಟಿ, ಎನ್ಡಬ್ಲ್ಯುಕೆಆರ್ಟಿಸಿಗೆ ₹1,306 ಕೋಟಿ, ಬಿಎಂಟಿಸಿಗೆ ₹1,019 ಕೋಟಿ ಹಾಗೂ ಕೆಕೆಆರ್ಟಿಸಿಗೆ ₹999 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ಅವರು ಹೇಳಿದರು. ಮೆಜೆಸ್ಟಿಕ್ನಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಪ್ರಯಾಣ ದರ ₹12ರಿಂದ ₹18ಕ್ಕೆ, ಮೆಜೆಸ್ಟಿಕ್ನಿಂದ ಯಶವಂತಪುರಕ್ಕೆ ₹18ರಿಂದ ₹25ಕ್ಕೆ ಹೆಚ್ಚಾಗಿದೆ. ಬೆಂಗಳೂರು-ತುಮಕೂರು ಪ್ರಯಾಣ…
ಅಗ್ನಿವೀರರಿಗೆ ದೀಪಾವಳಿ ಗಿಫ್ಟ್: ಸೇವಾವಧಿ 4ರಿಂದ 6 ವರ್ಷಕ್ಕೆ ವಿಸ್ತರಣೆ!
ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ಅಗ್ನಿವೀರರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡಿರುವ ಅಗ್ನಿವೀರರ ಸೇವಾವಧಿ ವಿಸ್ತರಣೆ ಹಾಗೂ ಖಾಯಂ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಹ್ಮಣ್ಯಂ ಘೋಷಿಸಿದ್ದಾರೆ. ಹೊಸ ನಿರ್ಧಾರದ ಪ್ರಕಾರ, ಶೇ.25ರಷ್ಟು ಅಗ್ನಿವೀರರಿಗೆ ಸಾಮಾನ್ಯ ಸೈನಿಕರಾಗಿ ಸೇನೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗುತ್ತದೆ. ಉಳಿದ ಶೇ.75ರಷ್ಟು ಅಗ್ನಿವೀರರಿಗೆ ಎರಡು ವರ್ಷಗಳ ಹೆಚ್ಚುವರಿ ಸೇವಾವಧಿ ನೀಡುವ ಪ್ರಸ್ತಾವನೆ ಪ್ರಕಟಿಸಲಾಗಿದೆ. ಇದರಿಂದ ಅಗ್ನಿವೀರರ ಒಟ್ಟು ಸೇವಾವಧಿ ನಾಲ್ಕು ವರ್ಷಗಳಿಂದ ಆರು ವರ್ಷಗಳಿಗೆ ವಿಸ್ತರಣೆಯಾಗಲಿದೆ. ಹೆಚ್ಚುವರಿ ಸೇವಾವಧಿ ಪಡೆಯುವವರಿಗೂ ಹೆಚ್ಚಿನ ವೇತನ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ ಎಂದು ಸಿಡಿಎಸ್ ತಿಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜನರಲ್ ರಾಜಾ ಸುಬ್ರಹ್ಮಣ್ಯಂ, ಭಾರತೀಯ ರಕ್ಷಣಾ…
ಅಮೆರಿಕ ರಾಜಕೀಯದಲ್ಲಿ ಮಹತ್ವದ ತಿರುವು; ಟ್ರಂಪ್ ಆಡಳಿತಕ್ಕೆ ಎದುರಾದ ಹೊಸ ಸವಾಲು
ವಾಷಿಂಗ್ಟನ್: ಅಮೆರಿಕದ 2026ರ ಮಧ್ಯಂತರ ಚುನಾವಣೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ರಾಜಕೀಯ ಹಿನ್ನಡೆ ತಂದಿದೆ. ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಎರಡರಲ್ಲೂ ಬಹುಮತ ಸಾಧಿಸಿದೆ. ಇದರಿಂದ ಕಾಂಗ್ರೆಸ್ ಮೇಲಿನ ರಿಪಬ್ಲಿಕನ್ ಪಕ್ಷದ ನಿಯಂತ್ರಣ ಅಂತ್ಯಗೊಂಡಿದ್ದು, ಟ್ರಂಪ್ ಆಡಳಿತದ ಮುಂದಿನ ಎರಡು ವರ್ಷಗಳ ಹಾದಿ ಸವಾಲಿನಿಂದ ಕೂಡಿರಲಿದೆ. ಈ ಚುನಾವಣೆಯ ಪ್ರಮುಖ ಅಚ್ಚರಿ ಟೆಕ್ಸಾಸ್ನಲ್ಲಿ ಕಂಡುಬಂದಿದೆ. ದಶಕಗಳಿಂದ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಈ ರಾಜ್ಯದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸ್ ಟಲಾರಿಕೊ ಅವರು ರಿಪಬ್ಲಿಕನ್ ಅಭ್ಯರ್ಥಿ ಕೆನ್ ಪ್ಯಾಕ್ಸ್ಟನ್ ಅವರನ್ನು ಸೋಲಿಸಿದ್ದಾರೆ. 1988ರ ಬಳಿಕ ಟೆಕ್ಸಾಸ್ನಲ್ಲಿ ಡೆಮಾಕ್ರಟ್ ಅಭ್ಯರ್ಥಿಯೊಬ್ಬರು ಸೆನೆಟ್ ಸ್ಥಾನ ಗೆದ್ದಿರುವುದು ಇದೇ ಮೊದಲು. ಮತ್ತೊಂದೆಡೆ, ಗಿನಾ ಹಿನೋಜೋಸಾ ಅವರು ರಿಪಬ್ಲಿಕನ್ ಗವರ್ನರ್ ಗ್ರೆಗ್ ಅಬಾಟ್ ಅವರನ್ನು ಸೋಲಿಸಿ ಐತಿಹಾಸಿಕ…
ಯುವಜನತೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಲಿ; ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಿ: ದತ್ತಾತ್ರೇಯ ಹೊಸಬಾಳೆ
ಇಂದೋರ್: ಯುವಜನತೆ ದೇಶದ ಭವಿಷ್ಯ ರೂಪಿಸುವ ಶಕ್ತಿಯಾಗಬೇಕು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸ್ವಯಂ ನಿಯಂತ್ರಣ ಬೆಳೆಸಿಕೊಳ್ಳಬೇಕು ಎಂದು ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಯುವಕರ ಪ್ರತಿಭೆ, ಸೇವಾ ಮನೋಭಾವ ಮತ್ತು ಸಕಾರಾತ್ಮಕ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬದ ಪಾತ್ರ ಮಹತ್ವದ್ದಾಗಿದೆ. ಕೇವಲ ಕಾನೂನುಗಳನ್ನು ರೂಪಿಸುವುದರಿಂದ ಸಮಾಜದಲ್ಲಿ ಉತ್ತಮ ನಡವಳಿಕೆ ಬೆಳೆಸಲು ಸಾಧ್ಯವಿಲ್ಲ. ಪೋಷಕರ ನಡವಳಿಕೆ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ದೊಡ್ಡವರು ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುತ್ತಾ ಮಕ್ಕಳಿಗೆ ಮೊಬೈಲ್ ಬಳಸದಂತೆ ಹೇಳುವುದು ಸರಿಯಲ್ಲ. ಪೋಷಕರೇ ಮೊದಲು ಮಕ್ಕಳಿಗೆ ಮಾದರಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೊಬೈಲ್ ಬಳಕೆಗೆ ಸ್ವಯಂ ನಿಯಂತ್ರಣ ಇರಲಿ ಮಕ್ಕಳು ಮತ್ತು ಯುವಕರು ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ವೇದಿಕೆಗಳನ್ನು…
ಪವಾರ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ; ಮೈತ್ರಿ ವದಂತಿಗೆ ಕಾರಣವಾದ ಮಾತುಕತೆ!
ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಹಾಗೂ ಎನ್ಸಿಪಿ (ಶರದ್ಚಂದ್ರ ಪವಾರ್) ಬಣದ ಮುಖ್ಯಸ್ಥ ಶರದ್ ಪವಾರ್ ಅವರ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ, “ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಯಾವುದಕ್ಕೂ ಚಿಂತಿಸಬೇಡಿ. ಸುಪ್ರಿಯಾ ಸುಳೆ ಮತ್ತು ನಾವು ದೇಶದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇವೆ” ಎಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಪ್ರಧಾನಿಯವರ ಈ ಮಾತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಪವಾರ್ ಅವರ ಆಪ್ತ ಸ್ನೇಹಿತ ವಿಠ್ಠಲ್ ಮಣಿಯಾರ್ ನೀಡಿರುವ ಮಾಹಿತಿಯ ಪ್ರಕಾರ, ಮೋದಿ ಅವರು ದೂರವಾಣಿಯಲ್ಲಿ ಮಾತನಾಡಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. “ಸುಪ್ರಿಯಾ ಸುಳೆ ಈಗ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ದೇಶವನ್ನು ನೋಡಿಕೊಳ್ಳುತ್ತೇವೆ. ನೀವು ವಿಶ್ರಾಂತಿ ಪಡೆಯಿರಿ, ನನ್ನನ್ನು ಆಶೀರ್ವದಿಸಿ” ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ಆರೋಗ್ಯ ವಿಚಾರಿಸಿದ ಪ್ರಧಾನಿಯವರಿಗೆ ಪವಾರ್…
ತಮಿಳುನಾಡಿನಲ್ಲಿ ಮುಂಜಾನೆ 6 ಗಂಟೆಯ ಸಿನಿಮಾ ಶೋಗಳಿಗೆ ಮತ್ತೆ ಅನುಮತಿ
ಚೆನ್ನೈ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಮುಂಜಾನೆಯ ಸಿನಿಮಾ ಪ್ರದರ್ಶನಗಳಿಗೆ ಮತ್ತೆ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ನಿರ್ಧಾರದಿಂದ ಪ್ರದರ್ಶಕರು ಮತ್ತು ವಿತರಕರಿಗೆ ನಿರಾಳತೆ ಸಿಕ್ಕಿದೆ. ಹೊಸ ತಮಿಳು ಸಿನಿಮಾಗಳ ಬಿಡುಗಡೆಯ ಮೊದಲ ವಾರ ಪ್ರತಿದಿನ ಆರು ಶೋಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 2.30ರವರೆಗೆ ಪ್ರದರ್ಶನ ನಡೆಸಬಹುದು. ಸ್ಥಳೀಯ ಹಬ್ಬ, ಸಾರ್ವಜನಿಕ ರಜೆ ಹಾಗೂ ವಾರಾಂತ್ಯಗಳಿಗೂ ಈ ನಿಯಮ ಅನ್ವಯವಾಗಲಿದೆ. 2023ರಲ್ಲಿ ‘ತುನಿವು’ ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ಬಳಿಕ ಮುಂಜಾನೆಯ ಶೋಗಳನ್ನು ರದ್ದುಗೊಳಿಸಲಾಗಿತ್ತು. ಆರು ಪ್ರದರ್ಶನಗಳಿಗೆ ಅವಕಾಶ ನೀಡುವಂತೆ ಚಿತ್ರರಂಗದ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಅಕ್ಟೋಬರ್ 27ರಂದು ಸಚಿವ ರಾಜಮೋಹನ್ ಅವರಿಗೆ ಮನವಿ ನೀಡಿದ್ದಾಗಿ ನಿರ್ಮಾಪಕ ಜಿ. ಧನಂಜಯನ್ ತಿಳಿಸಿದ್ದಾರೆ. ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಿಎಂ ವಿಜಯ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನವೆಂಬರ್ 6ರಂದು ಬಿಡುಗಡೆಯಾಗಲಿರುವ ಸೂರ್ಯ…
ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ರಾಷ್ಟ್ರೀಯ ಮಾರ್ಗಸೂಚಿಗೆ ಚಿಂತನೆ
ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ನವದೆಹಲಿಯಲ್ಲಿ ರಾಷ್ಟ್ರೀಯ ಸಮಾಲೋಚನೆ ಆಯೋಜಿಸಿತ್ತು. ವಿಜ್ಞಾನ ಭವನದಲ್ಲಿ ನಡೆದ ‘ಖೇಲ್ ಶಕ್ತಿ ರಾಷ್ಟ್ರೀಯ ಸಮಾಲೋಚನೆ’ಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು ರಾಷ್ಟ್ರೀಯ ಮಾರ್ಗಸೂಚಿ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎನ್ಸಿಡಬ್ಲ್ಯು ಅಧ್ಯಕ್ಷೆ ವಿಜಯ ರಹತ್ಕರ್, ಸದಸ್ಯರಾದ ನಿವೇದಿತಾ ಸುಬ್ರಮಣಿಯನ್, ಅರ್ಚನಾ ಮಿಶ್ರಾ ಹಾಗೂ ಕ್ರೀಡಾ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಮಹಾಂಕರ್ ಸೇರಿದಂತೆ ಹಲವು ಗಣ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮಹಿಳಾ ಕ್ರೀಡಾಪಟುಗಳ ಸುರಕ್ಷತೆ, ಲೈಂಗಿಕ ಕಿರುಕುಳ ತಡೆಗಟ್ಟುವ (POSH) ನಿಯಮಗಳ ಅನುಷ್ಠಾನ, ಆರೋಗ್ಯ ರಕ್ಷಣೆ, ಮಾನಸಿಕ ಯೋಗಕ್ಷೇಮ, ಮಾತೃತ್ವ ಸೌಲಭ್ಯಗಳು ಮತ್ತು ಕ್ರೀಡಾ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ…
