ಬೆಂಗಳೂರು: ಕರ್ನಾಟಕದ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿ, ಅಂತರರಾಷ್ಟ್ರೀಯ ತಂತ್ರಜ್ಞಾನ ವಿನಿಮಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಥೈಲ್ಯಾಂಡ್ ದೇಶದೊಂದಿಗೆ ದ್ವಿಪಕ್ಷೀಯ ಸಹಕಾರ ಸ್ಥಾಪಿಸಲು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಹತ್ವದ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಂಡಳಿ ಅಧ್ಯಕ್ಷ ಎಸ್. ಈ. ಸುಧೀಂದ್ರ ತಿಳಿಸಿದ್ದಾರೆ. ಈ ಸಂಬಂಧ ಥೈಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವರ ರಾಜಕೀಯ ವ್ಯವಹಾರಗಳ ಸಲಹೆಗಾರ ಜೂಕ್ರ್ ಬೂನ್ ಲಾಂಗ್, ಚೆನ್ನೈನ ಕಾನ್ಸುಲ್ ಜನರಲ್ ರಾಚಾ ಅರಿಬಾರ್ಗ್ ಮತ್ತು ಉಪ ಕಾನ್ಸುಲ್ ಜನರಲ್ ಪೊನ್ಪುನ್ ಪುಪಿಯಾಂಗ್ಜೈ ಅವರನ್ನೊಳಗೊಂಡ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆ ನಡೆಯಿತು. ಮುಖ್ಯಮಂತ್ರಿಗಳ ಪರವಾಗಿ ನಿಯೋಗವನ್ನು ಸ್ವಾಗತಿಸಿದ ಸುಧೀಂದ್ರ, ಜೈವಿಕ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದರು. ಬಳಸಿದ ಅಡುಗೆ ಎಣ್ಣೆ ನಿರ್ವಹಣೆಗೆ ಒತ್ತು ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಂದ ಬಳಸಿದ…
