ನವದೆಹಲಿ: ವೈಜ್ಞಾನಿಕ ಸಹಯೋಗ ಬಲಪಡಿಸುವ ಹಾಗೂ ಭಾರತೀಯ ಸಂಶೋಧಕರು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾರತ ಮತ್ತು ಇಟಲಿ ಮೂಲದ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತಶಾಸ್ತ್ರ ಕೇಂದ್ರ (ಐಸಿಟಿಪಿ) ಜಂಟಿಯಾಗಿ ಸಹಕಾರ ನಿಧಿ ಆರಂಭಿಸಿವೆ. ಇಟಲಿಯ ಟ್ರೈಸ್ಟೆಯಲ್ಲಿರುವ ಐಸಿಟಿಪಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಹಾಗೂ ಐಸಿಟಿಪಿ ನಡುವೆ ಉದ್ದೇಶ ಪತ್ರಕ್ಕೆ ಸಹಿ ಹಾಕಲಾಯಿತು. ಬಳಿಕ ‘ಭಾರತ–ಐಸಿಟಿಪಿ ಸಹಕಾರ ನಿಧಿ’ ಆರಂಭಿಸಲಾಯಿತು. ಡಿಎಸ್‌ಟಿಯ ಅಂತರರಾಷ್ಟ್ರೀಯ ಸಹಕಾರ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್‌ಕುಮಾರ್ ಸೋಮಸುಂದರಂ ಭಾರತದ ಪರವಾಗಿ ಉದ್ದೇಶ ಪತ್ರ ವಿನಿಮಯ ಮಾಡಿಕೊಂಡರು. ಈ ಉಪಕ್ರಮವು ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಿದೆ ಎಂದು…
Day: November 16, 2026
ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಫುಡ್ ಕಿಯೋಸ್ಕ್ ಮೂಲಕ ಸ್ವಯಂ ಉದ್ಯೋಗ: ₹4 ಲಕ್ಷದವರೆಗೆ ಸಹಾಯಧನ
ಬೆಂಗಳೂರು, ನ.15: ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಶೇಷ ಫುಡ್ ಕಿಯೋಸ್ಕ್ ಯೋಜನೆ ಜಾರಿಗೆ ತರಲು ಮುಂದಾಗಿದೆ. ಫಾಸ್ಟ್‌ಫುಡ್ ಟ್ರಕ್ ಟ್ರೈಲರ್, ಮೊಬೈಲ್ ಕಿಚನ್ ಹಾಗೂ ಫುಡ್ ಕಿಯೋಸ್ಕ್ ಆರಂಭಿಸಲು ಘಟಕ ವೆಚ್ಚದ ಶೇ.75ರಷ್ಟು ಅಥವಾ ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರ ಮುತುವರ್ಜಿಯಿಂದ ರೂಪುಗೊಂಡಿರುವ ಈ ಯೋಜನೆಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಕಳೆದ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದರು. ಬಳಿಕ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಟಿ. ರಘುಮೂರ್ತಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದಾರೆ. ಪರಿಶಿಷ್ಟ ಪಂಗಡಗಳ ಇಲಾಖೆಯ ನಿಗಮಗಳ…
20 ಸಾವಿರ ನಾಗರಿಕರ ಭೇಟಿ, 5 ಸಾವಿರ ಸಮಸ್ಯೆಗಳಿಗೆ ಪರಿಹಾರ: ಶಾಸಕ ಎಸ್. ಸುರೇಶ್ ಕುಮಾರ್
ಬೆಂಗಳೂರು: ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ಜನರೊಂದಿಗೆ ಜನಸೇವಕ’ ಮತ್ತು ‘ದಿನಕ್ಕೊಂದು ವಾರ್ಡ್ ನಡಿಗೆ’ ಕಾರ್ಯಕ್ರಮಗಳ ಮೂಲಕ ಈವರೆಗೆ 20 ಸಾವಿರ ಜನರನ್ನು ಭೇಟಿ ಮಾಡಿದ್ದು, 5 ಸಾವಿರ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು. ದಯಾನಂದನಗರ ವಾರ್ಡ್‌ನಲ್ಲಿ ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮವಾದ ‘ದಿನಕ್ಕೊಂದು ವಾರ್ಡ್ ನಡಿಗೆ’ಯ 150ನೇ ದಿನದ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾತನಾಡಿದ ಅವರು, ‘ಜನರೊಂದಿಗೆ ಜನಸೇವಕ’ ಕಾರ್ಯಕ್ರಮ 76 ವಾರಗಳನ್ನು ಹಾಗೂ ‘ದಿನಕ್ಕೊಂದು ವಾರ್ಡ್ ನಡಿಗೆ’ 150 ದಿನಗಳನ್ನು ಪೂರೈಸಿದೆ ಎಂದರು. ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮದಡಿ ದಯಾನಂದನಗರ, ಪ್ರಕಾಶನಗರ, ಶ್ರೀರಾಮಮಂದಿರ, ರಾಜಾಜಿನಗರ, ಶಿವನಗರ, ಬಸವೇಶ್ವರನಗರ ಮತ್ತು…
ಒಂದು ವಾರದಲ್ಲಿ ಉಕ್ರೇನ್ ಮೇಲೆ 2,300ಕ್ಕೂ ಹೆಚ್ಚು ಡ್ರೋನ್, 1,590 ಬಾಂಬ್ ದಾಳಿ: ಝೆಲೆನ್ಸ್ಕಿ
ಕೈವ್: ಕಳೆದ ಒಂದು ವಾರದಲ್ಲಿ ರಷ್ಯಾ ಉಕ್ರೇನ್ ಮೇಲೆ 2,300ಕ್ಕೂ ಹೆಚ್ಚು ದಾಳಿ ಡ್ರೋನ್‌ಗಳು, 1,590 ವೈಮಾನಿಕ ಬಾಂಬ್‌ಗಳು ಮತ್ತು 15 ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇಂಧನ ಮೂಲಸೌಕರ್ಯದ ಮೇಲಿನ ನಿರಂತರ ದಾಳಿಗಳು ಚಳಿಗಾಲದ ಸಿದ್ಧತೆಗೆ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಸಿದ್ದಾರೆ. ಜಪೋರಿಝಿಯಾ, ಸುಮಿ, ಒಡೆಸಾ, ಝೈಟೊಮಿರ್ ಮತ್ತು ಕಿರೊವೊಹ್ರಾಡ್ ಪ್ರದೇಶಗಳ ಇಂಧನ ಸೌಲಭ್ಯಗಳನ್ನು ರಷ್ಯಾ ಗುರಿಯಾಗಿಸಿಕೊಂಡಿದೆ. ಡ್ನಿಪ್ರೊ, ಖಾರ್ಕಿವ್ ಮತ್ತು ಜಪೋರಿಝಿಯಾದ ರೈಲ್ವೆ ಮೂಲಸೌಕರ್ಯಕ್ಕೂ ಹಾನಿಯಾಗಿದೆ. ಡೊನೆಟ್ಸ್ಕ್ ಮತ್ತು ಕೈವ್ ಪ್ರದೇಶಗಳಲ್ಲೂ ದಾಳಿಗಳು ನಡೆದಿದ್ದು, ಕನಿಷ್ಠ 16 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸಬ್‌ಸ್ಟೇಷನ್‌ಗಳನ್ನು ಗುರಿಯಾಗಿಸಲು ರಷ್ಯಾ ಶಹೀದ್ ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ. ಗಂಟೆಗೆ 161 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗುವ ಡ್ರೋನ್‌ಗಳೊಂದಿಗೆ ಸಂಪರ್ಕ ಕಡಿತಗೊಳ್ಳುವುದರಿಂದ ಅವುಗಳನ್ನು ತಡೆಯಲು ಉಕ್ರೇನ್‌ಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ. ಸ್ಟಾರ್‌ಶೀಲ್ಡ್…
KPSC: ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗೆ ಶೇ.59ರಷ್ಟು ಅಭ್ಯರ್ಥಿಗಳು ಹಾಜರು: 59,807 ಮಂದಿ ಗೈರು
ಬೆಂಗಳೂರು: ರಾಜ್ಯಾದ್ಯಂತ ನವೆಂಬರ್ 15ರಂದು ನಡೆದ ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಗೆ ಶೇ.59ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತಿಳಿಸಿದೆ. ಒಟ್ಟು 1,47,067 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 1,14,406 ಮಂದಿ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಈ ಪೈಕಿ 87,260 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 59,807 ಮಂದಿ ಗೈರಾಗಿದ್ದಾರೆ. ಹಾಲ್‌ಟಿಕೆಟ್ ಪಡೆದಿದ್ದರೂ 27,146 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ. ರಾಜ್ಯದ 15 ಜಿಲ್ಲೆಗಳ 345 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಅಕ್ರಮ ತಡೆಗೆ ಸಿಸಿಟಿವಿ, ಪೊಲೀಸ್ ಕಣ್ಗಾವಲು, ಬಿಗಿ ತಪಾಸಣೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ನಿಷೇಧ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿತ್ತು. ವಸ್ತ್ರಸಂಹಿತೆಯನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಈ ಬಾರಿ ಒಎಂಆರ್ ಪತ್ರಿಕೆಯಲ್ಲಿ ನಾಲ್ಕು ಆಯ್ಕೆಗಳ ಜತೆಗೆ ಐದನೇ ಕಾಲಂ ಸೇರಿಸಲಾಗಿದೆ. ಉತ್ತರ ತಿಳಿಯದ ಪ್ರಶ್ನೆಗಳಿಗೆ ಈ ಕಾಲಂ ಗುರುತಿಸುವ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳು, ಕೆಪಿಎಸ್‌ಸಿ ಮತ್ತು…
ತುಳುನಾಡಿನ ಇತಿಹಾಸದ ದಾಖಲೀಕರಣ ಅಗತ್ಯ: ಡಾ. ತುಕರಾಮ ಪೂಜಾರಿ
ಮಂಗಳೂರು: ತುಳುನಾಡಿನ ಇತಿಹಾಸದಲ್ಲಿ ಆಳುಪರ ಆಡಳಿತದ ಅವಧಿಯಲ್ಲಿ ದಂಡನಾಯಕರಾಗಿ ಮುಂಚೂಣಿಯಲ್ಲಿದ್ದ ಕೆಲ್ಲ ಪುತ್ತಿಗೆಯ ಕೆಲ್ಲ ವಂಶಸ್ಥರ ಸಾಧನೆಗಳನ್ನು ದಾಖಲಿಸಿರುವುದು ಮಹತ್ವದ ಕಾರ್ಯ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹಮೂರ್ತಿ ರಚನೆಯ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಕೃತಿಯನ್ನು ತುಳು ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತುಳುನಾಡು ಎಂದರೆ ಕೇವಲ ಆಚರಣೆ ಮತ್ತು ಆರಾಧನೆಗೆ ಸೀಮಿತವಲ್ಲ. ಇಲ್ಲಿನ ಇತಿಹಾಸವನ್ನು ತಿಳಿಯುವ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕು. ಇನ್ನೂ ಬೆಳಕಿಗೆ ಬಾರದ ತುಳುನಾಡಿನ ಇತಿಹಾಸದ ಅಧ್ಯಯನ ಹಾಗೂ ದಾಖಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಕೃತಿಕಾರ ಡಾ. ಪಿ.ಎನ್. ನರಸಿಂಹಮೂರ್ತಿ ಮಾತನಾಡಿ, ನಮ್ಮ ಊರಿನ ಚರಿತ್ರೆಯನ್ನು ಅರಿತುಕೊಳ್ಳುವುದೇ ನಾಡಿಗೆ ಸಲ್ಲಿಸುವ ನಿಜವಾದ ಗೌರವ. ಈ ಕೃತಿ ರಚನೆಗಾಗಿ…
ಕೇರಳದ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಮಮ್ಮೂಟ್ಟಿ ಬ್ರಾಂಡ್ ಅಂಬಾಸಿಡರ್
ಕೊಚ್ಚಿ: 2030ರ ವೇಳೆಗೆ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವು ಮತ್ತು ಗಾಯಗಳ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡುವ ಗುರಿ ಹೊಂದಿರುವ ಕೇರಳ ಸರ್ಕಾರದ ‘ಜೀವ-ಸುಯಾತ್ರಾ ಮಿಷನ್’ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಮಲಯಾಳಂ ನಟ ಮಮ್ಮೂಟ್ಟಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಎರ್ನಾಕುಲಂ ಟೌನ್‌ಹಾಲ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ರಾಜ್ಯಾದ್ಯಂತ ರಸ್ತೆ ಸುರಕ್ಷತೆ ಸುಧಾರಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು. ಮಮ್ಮೂಟ್ಟಿ ಅವರ ನೇಮಕವನ್ನು ಘೋಷಿಸಿದ ಅವರು, ಸುರಕ್ಷಿತ ರಸ್ತೆ ನಿರ್ಮಾಣದ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು. ಸಮಗ್ರ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳ ಮೂಲಕ ಅಪಘಾತಗಳಿಂದ ಉಂಟಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವುದು ಮಿಷನ್‌ನ ಉದ್ದೇಶವಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರಿಗೆ ಸಚಿವ ಸಿ.ಪಿ. ಜಾನ್ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್, ಎರ್ನಾಕುಲಂ ಸಂಸದ ಹಿಬಿ ಈಡನ್,…
