ಜನಪರ ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಲು ಸಾಧ್ಯ: ಡಾ. ರವಿ ಸಿ.ಟಿ.

ಚಿಕ್ಕಮಗಳೂರು: ಜನಪರ ಕಾರ್ಯ ಮತ್ತು ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಿ ಬೆಳೆಯಲು ಸಾಧ್ಯ. ಸ್ಥಳೀಯವಾಗಿ ನಾಯಕತ್ವದ ಕೊರತೆ ಕಂಡುಬಂದಲ್ಲಿ ಕಾರ್ಯಕರ್ತರೇ ಜವಾಬ್ದಾರಿ ವಹಿಸಿಕೊಂಡು ಜನರ ನಡುವೆ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಕರೆ ನೀಡಿದರು. ಚಿಕ್ಕಮಗಳೂರು ಪಕ್ಷದ ಜಿಲ್ಲಾ ಕಾರ್ಯಾಲಯ ಪಾಂಚಜನ್ಯದಲ್ಲಿ ನಡೆದ ಜಾಗರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಮತ್ತು ಅಧಿಕಾರದ ಆಸೆಗಳಿಗೆ ಅವಕಾಶ ನೀಡಬಾರದು. ಪಕ್ಷದ ಸಿದ್ಧಾಂತಕ್ಕೆ ಆದ್ಯತೆ ನೀಡಿದಾಗ ಗುಂಪುಗಾರಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು ಎಂದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಚುನಾವಣೆಯ ಸಾಧ್ಯತೆ ಮತ್ತು ಮೀಸಲಾತಿ ಸ್ಪಷ್ಟವಾದ ಬಳಿಕ ಸ್ಥಳೀಯರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು. ಎಸ್‌ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ…