2029ರ ವೇಳೆಗೆ €20 ಬಿಲಿಯನ್ ವ್ಯಾಪಾರ ಗುರಿಗೆ ಭಾರತ-ಇಟಲಿ ಒತ್ತು

ರೋಮ್: 2029ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು €20 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಭಾರತ ಮತ್ತು ಇಟಲಿ ಪುನರುಚ್ಚರಿಸಿವೆ. ನವೆಂಬರ್ 18ರಂದು ರೋಮ್‌ನಲ್ಲಿ ನಡೆದ 23ನೇ ಭಾರತ-ಇಟಲಿ ಜಂಟಿ ಆರ್ಥಿಕ ಸಹಕಾರ ಆಯೋಗದ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಇಟಲಿಯ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಸಹ-ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವ್ಯಾಪಾರ, ಹೂಡಿಕೆ ಮತ್ತು ಕೈಗಾರಿಕಾ ಸಹಕಾರ ವಿಸ್ತರಣೆ ಕುರಿತು ಚರ್ಚಿಸಲಾಯಿತು. ಆಟೋಮೋಟಿವ್, ಏರೋಸ್ಪೇಸ್, ಉತ್ಪಾದನೆ, ಕೃಷಿ, ಇಂಧನ, ನಿರ್ಣಾಯಕ ಖನಿಜಗಳು, ವಿಜ್ಞಾನ, ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಒತ್ತು ನೀಡಲಾಯಿತು. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಮುಕ್ತಾಯವನ್ನು ಉಭಯ ಸಚಿವರು ಸ್ವಾಗತಿಸಿದರು. ಇದು ಮಾರುಕಟ್ಟೆ ಪ್ರವೇಶ, ಹೂಡಿಕೆ ಮತ್ತು ಪೂರೈಕೆ ಸರಪಳಿಗಳಿಗೆ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಭೇಟಿಯ ವೇಳೆ…

ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್‌ನಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಜೋಡಿ ಕಾಡಾನೆಗಳನ್ನು ನವೆಂಬರ್ 19ರಂದು ಅರಣ್ಯ ಇಲಾಖೆ ಸೆರೆಹಿಡಿದಿದೆ. ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎರಡು ಆನೆಗಳನ್ನು ಏಕಕಾಲದಲ್ಲಿ ಸೆರೆಹಿಡಿಯಲಾಗಿದೆ. ಕಳೆದ ಮೂರು ದಿನಗಳಿಂದ ಕುಮ್ಕಿ ಆನೆ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಡ್ರೋನ್ ಮೂಲಕ ಆನೆಗಳ ಸ್ಥಳ ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಲಾಯಿತು. ಬಳಿಕ ಶ್ರೀಕಂಠ, ಅಶೋಕ, ರೋಹಿತ್, ಮಾಣಿಕ್ಯ, ಅಯ್ಯಪ್ಪ ಮತ್ತು ಏಕಲವ್ಯ ಕುಮ್ಕಿ ಆನೆಗಳ ನೆರವಿನಿಂದ ಎರಡೂ ಸಲಗಗಳನ್ನು ಸೆರೆಹಿಡಿಯಲಾಯಿತು. ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ಜಯಮ್ಮ ಹಾಗೂ ನವೆಂಬರ್ 16ರಂದು ಕಾಫಿ ತೋಟಕ್ಕೆ ತೆರಳುತ್ತಿದ್ದ ಹಫೀಜ್ ಆನೆ ದಾಳಿಗೆ ಬಲಿಯಾಗಿದ್ದರು. ಹಲವು ತಿಂಗಳಿಂದ ಜೊತೆಯಾಗಿ ಸಂಚರಿಸುತ್ತಿದ್ದ ಈ ಆನೆಗಳು ಅರೆಹಳ್ಳಿ ಮತ್ತು ಬಿಕ್ಕೋಡು ಭಾಗಗಳಲ್ಲಿ ಕಾರ್ಯಾಚರಣೆ ತಂಡಕ್ಕೆ ಸವಾಲಾಗಿದ್ದವು. ಸತತ ಕಾರ್ಯಾಚರಣೆಯ…

ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.

ಮೂಡಿಗೆರೆ: ಸಹಕಾರಿ ತತ್ವವು ಕೆಲವರ ಅಭಿವೃದ್ಧಿಗೆ ಸೀಮಿತವಾಗದೆ ಸಮಾಜದ ಸರ್ವರ ಏಳಿಗೆಗೆ ನೆರವಾಗಬೇಕು. ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ರೈತಸ್ನೇಹಿ ಸಂಸ್ಥೆಯಾಗಿ ಮತ್ತಷ್ಟು ಬೆಳೆಯಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಆಶಿಸಿದರು. ಸಂಘದ ವತಿಯಿಂದ ಸುಮಾರು ₹2.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಡಳಿತ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಂಸ್ಥೆಯ 113 ವರ್ಷಗಳ ಇತಿಹಾಸವನ್ನು ಸ್ಮರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲೇ ರೈತರ ನೆರವಿಗಾಗಿ ಮಾಕೋನಹಳ್ಳಿ ಸಿದ್ದೇಗೌಡರು ಮತ್ತು ಕಡವಳ್ಳಿ ಹುಚ್ಚೇಗೌಡರು ಸಹಕಾರಿ ಸಂಸ್ಥೆಗೆ ಅಡಿಪಾಯ ಹಾಕಿದ್ದು ಶ್ಲಾಘನೀಯ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಮೃದ್ಧಿ’ ಆಶಯದಡಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿರುವುದು ಸಹಕಾರಿ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆ ದೊರೆತಿರುವುದನ್ನು ತೋರಿಸುತ್ತದೆ. ಸಾಮೂಹಿಕ ಅಭಿವೃದ್ಧಿಗೆ ಸಹಕಾರಿ ತತ್ವವೇ ಪ್ರಮುಖ ಮಾರ್ಗವಾಗಿದೆ…

ಕೃಷಿ ವಿಸ್ತಾರ ಯೋಜನೆಗೆ ₹75 ಕೋಟಿ; ಒಂದು ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ

ಬೆಂಗಳೂರು: ರೈತರ ಆದಾಯ ಹೆಚ್ಚಿಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸುವ ಉದ್ದೇಶದಿಂದ ₹75 ಕೋಟಿ ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸುವ ಗುರಿಗೂ ಸಂಪುಟ ಒಪ್ಪಿಗೆ ನೀಡಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು ₹1.20 ಲಕ್ಷದಿಂದ ₹2 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿಯವರ ‘ನಮ್ಮ ಮನೆ’ ಯೋಜನೆಯಡಿ ರಾಜ್ಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಸಾಲದ ಬಡ್ಡಿ ₹236…