ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರಿಂದ ಮುಖ್ಯಮಂತ್ರಿ ಭೇಟಿ; ಹೂಡಿಕೆ, ವ್ಯಾಪಾರ ಸಹಕಾರ ಕುರಿತು ಚರ್ಚೆ

ಬೆಂಗಳೂರು: ಭಾರತದಲ್ಲಿನ ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಉಭಯ ಕಡೆಯವರ ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಬಲಪಡಿಸುವುದು, ಕೈಗಾರಿಕಾ ಹೂಡಿಕೆ ಆಕರ್ಷಿಸುವುದು, ವ್ಯಾಪಾರ ಮತ್ತು ಆರ್ಥಿಕ ಸಹಕಾರ ವೃದ್ಧಿಸುವುದು ಹಾಗೂ ತಂತ್ರಜ್ಞಾನ ವಿನಿಮಯದ ಅವಕಾಶಗಳ ಕುರಿತು ಸಮಾಲೋಚನೆ ನಡೆಯಿತು. ಕರ್ನಾಟಕದಲ್ಲಿ ಇರಾನ್‌ನ ಹೂಡಿಕೆ ಹೆಚ್ಚಿಸುವುದು, ಕೈಗಾರಿಕಾ ಸಹಭಾಗಿತ್ವಕ್ಕೆ ಉತ್ತೇಜನ ನೀಡುವುದು ಮತ್ತು ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಬಗ್ಗೆ ಒತ್ತು ನೀಡಲಾಯಿತು. ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕ ಮತ್ತು ಸಹಭಾಗಿತ್ವ ಬಲಪಡಿಸುವ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಎಸ್.ಈ. ಸುಧೀಂದ್ರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ತುಷಾರ್ ಗಿರಿನಾಥ್, ಸೆಲ್ವಕುಮಾರ್ ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು…

ಸಾವರ್ಕರ್ ಕುರಿತ ಬರಹಕ್ಕೆ ಆಕ್ಷೇಪ; ಸೋನಿಯಾ ಗಾಂಧಿ ಪುಸ್ತಕ ಹರಿದು ಶಿವಸೇನೆ ಪ್ರತಿಭಟನೆ

ಮುಂಬೈ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ನಲ್ಲಿನ ವೀರ್ ಸಾವರ್ಕರ್ ಕುರಿತ ಬರಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪ್ರತಿಭಟನೆ ನಡೆಸಿದೆ. ಶಿವಸೇನೆ ನಾಯಕರಾದ ಶೈನಾ ಎನ್‌ಸಿ, ಸಂಜಯ್ ನಿರುಪಮ್ ಮತ್ತು ಆನಂದ್ ದುಬೆ ಪತ್ರಿಕಾಗೋಷ್ಠಿಯಲ್ಲಿ ಪುಸ್ತಕದ ಪುಟಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. 201 ಮತ್ತು 443ನೇ ಪುಟಗಳಲ್ಲಿನ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕುವಂತೆ ಪ್ರಕಾಶಕ ಹಾರ್ಪರ್‌ಕಾಲಿನ್ಸ್‌ಗೆ ಒತ್ತಾಯಿಸಿದರು. ಸಾವರ್ಕರ್ ಅವರನ್ನು ತ್ಯಾಗ, ತಪಸ್ಸು ಮತ್ತು ಶೌರ್ಯದ ಪ್ರತೀಕ ಎಂದು ಬಣ್ಣಿಸಿದ ದುಬೆ, ಅವರ ಕುರಿತ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಸಾವರ್ಕರ್ 11 ವರ್ಷ ಸೆಲ್ಯುಲಾರ್ ಜೈಲಿನಲ್ಲಿ ಕಠಿಣ ಹಿಂಸೆ ಅನುಭವಿಸಿದ್ದರು ಎಂದು ತಿಳಿಸಿದರು. ಸಾವರ್ಕರ್ ಅವರನ್ನು ಪದೇಪದೇ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಅವರ ತ್ಯಾಗ ಮತ್ತು ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳುವಂತೆ ಆಗ್ರಹಿಸಿದರು. ಸೋನಿಯಾ…

ಬೆಂಗಳೂರು ಘನತ್ಯಾಜ್ಯ ಟೆಂಡರ್‌ನಲ್ಲಿ ₹350 ಕೋಟಿ ಅಕ್ರಮದ ಆರೋಪ; ಸಮಗ್ರ ತನಿಖೆಗೆ ‘ಸಿಟಿಜನ್ಸ್’ ದೂರು,

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹350 ಕೋಟಿ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವತಂತ್ರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಅಧ್ಯಕ್ಷ ಕೆ.ಎ.ಪಾಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಏನಿದು ಹಗರಣ ಆರೋಪ: BSWML ಟೆಂಡರ್‌ನಲ್ಲಿ ₹350 ಕೋಟಿ ಅಕ್ರಮದ ಆರೋಪ. ಸಾರ್ವಜನಿಕ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಆರೋಪಿಸಿರುವ CRF. ₹2,500 ಕೋಟಿ ಟೆಂಡರ್‌ಗೆ ₹350 ಕೋಟಿ ಪ್ರೀಮಿಯಂ ವಿಧಿಸಿರುವುದಕ್ಕೆ ಆಕ್ಷೇಪ. ಅಂದಾಜು ಮೊತ್ತಕ್ಕಿಂತ ಶೇ.14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ಆರೋಪ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆ. ಸಿಎಜಿ ಮತ್ತು ಪ್ರಧಾನ ಮಹಾಲೇಖಪಾಲರಿಗೂ ದೂರು. ಟೆಂಡರ್ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮಾದರಿ…

ಜನಪರ ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಲು ಸಾಧ್ಯ: ಡಾ. ರವಿ ಸಿ.ಟಿ.

ಚಿಕ್ಕಮಗಳೂರು: ಜನಪರ ಕಾರ್ಯ ಮತ್ತು ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಿ ಬೆಳೆಯಲು ಸಾಧ್ಯ. ಸ್ಥಳೀಯವಾಗಿ ನಾಯಕತ್ವದ ಕೊರತೆ ಕಂಡುಬಂದಲ್ಲಿ ಕಾರ್ಯಕರ್ತರೇ ಜವಾಬ್ದಾರಿ ವಹಿಸಿಕೊಂಡು ಜನರ ನಡುವೆ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಕರೆ ನೀಡಿದರು. ಚಿಕ್ಕಮಗಳೂರು ಪಕ್ಷದ ಜಿಲ್ಲಾ ಕಾರ್ಯಾಲಯ ಪಾಂಚಜನ್ಯದಲ್ಲಿ ನಡೆದ ಜಾಗರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಮತ್ತು ಅಧಿಕಾರದ ಆಸೆಗಳಿಗೆ ಅವಕಾಶ ನೀಡಬಾರದು. ಪಕ್ಷದ ಸಿದ್ಧಾಂತಕ್ಕೆ ಆದ್ಯತೆ ನೀಡಿದಾಗ ಗುಂಪುಗಾರಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು ಎಂದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಚುನಾವಣೆಯ ಸಾಧ್ಯತೆ ಮತ್ತು ಮೀಸಲಾತಿ ಸ್ಪಷ್ಟವಾದ ಬಳಿಕ ಸ್ಥಳೀಯರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು. ಎಸ್‌ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ…

ಕರ್ನಾಟಕದಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿಗೆ ಆರು ಹೊಸ ಪೊಲೀಸ್ ಆಯುಕ್ತರು

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಆರ್. ಹಿತೇಂದ್ರ ಅವರನ್ನು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಕುರಿತಂತೆ ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆಯೇ ಬೆಂಗಳೂರು ಬೆಂಗಳೂರು ನಗರ ಪೊಲೀಸ್ ಮುಕ್ತ ಆಯುಕ್ತರಾಗಿ ಆರ್. ಹಿತೇಂದ್ರ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಇದೇ ವೇಳೆ, ಬೆಂಗಳೂರು ನಗರದಲ್ಲಿ ವಲಯವಾರು ಹೊಸ ಆಯುಕ್ತರ ಹುದ್ದೆಗಳನ್ನು ಸೃಜಿಸಿ ಲಾಭೂ ರಾಮ್ (ಕೇಂದ್ರ), ಡಾ. ಪಿ.ಎಸ್. ಹರ್ಷ (ಪೂರ್ವ), ವಿಕಾಶ್ ಕುಮಾರ್ ವಿಕಾಶ್ (ಪಶ್ಚಿಮ), ಡಾ. ಎಂ.ಬಿ. ಬೋರಲಿಂಗಯ್ಯ (ಉತ್ತರ) ಮತ್ತು ಹೇಮಂತ್ ಎಂ. ನಿಂಬಾಳ್ಕರ್ (ಸಂಚಾರ) ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹೇಮಂತ್ ನಿಂಬಾಳ್ಕರ್ ಅವರು ಸಂಚಾರ ವಿಭಾಗದ…

‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ

ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾರ್ಗದರ್ಶಕರಾಗಿ ಸ್ವಾಗತಿಸಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರೈನಾ, ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ದಿನಗಳಿಂದ ಟ್ರೋಫಿ ಗೆದ್ದ ಕ್ಷಣಗಳವರೆಗೆ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. ಧೋನಿ ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು ಎಂದು ಹೇಳಿದ್ದಾರೆ. “ನಂಬರ್ 7 ಜೆರ್ಸಿ ಇನ್ನು ಮೈದಾನದಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ ನಿಮ್ಮ ಪರಂಪರೆ ಸದಾ ಚೆಪಾಕ್‌ನ ಹೃದಯಬಡಿತವಾಗಿರುತ್ತದೆ” ಎಂದು ರೈನಾ ಬರೆದಿದ್ದಾರೆ. ಧೋನಿ ಅವರ ಶಾಂತ ಮನೋಭಾವ, ನಿರ್ಭೀತ ವ್ಯಕ್ತಿತ್ವ ಮತ್ತು ಅನುಭವ ಹೊಸ ಜವಾಬ್ದಾರಿಯಲ್ಲೂ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದಿದ್ದಾರೆ. “ಮೈದಾನದಲ್ಲಿ ನಮ್ಮನ್ನು ಮುನ್ನಡೆಸುವುದರಿಂದ ಹಿಡಿದು ಪಕ್ಕದಲ್ಲಿ ನಿಂತು ಮಾರ್ಗದರ್ಶನ ಮಾಡುವವರೆಗೆ, ನೀವು ಸದಾ ನಮ್ಮ ಥಳ ಆಗಿರುತ್ತೀರಿ. ಪಾತ್ರ ಬದಲಾಗಬಹುದು, ಪರಂಪರೆ ಬದಲಾಗುವುದಿಲ್ಲ. ಒಮ್ಮೆ ನಾಯಕನಾದರೆ, ಎಂದೆಂದಿಗೂ…

ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ; ಓರ್ವ ನಾಪತ್ತೆ, 11 ಮಂದಿಗೆ ಗಾಯ

ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇ ಸರ್ಕಾರಿ ತೈಲ ಕಂಪನಿ ADNOCಗೆ ಸೇರಿದ ಹಡಗಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆದಿದ್ದು, ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೇ ವೇಳೆ, ನೌಕಾ ಮೈನ್‌ಗಳಿಗೆ ಡಿಕ್ಕಿಯಾಗಿ ಎರಡು ಹಡಗುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್‌ನ IRGC ಹೇಳಿದೆ. ಈ ಹಡಗುಗಳಿಗೆ ಅಮೆರಿಕದ ಯುದ್ಧವಿಮಾನಗಳು ಬೆಂಗಾವಲು ನೀಡುತ್ತಿದ್ದವು ಎಂದೂ ಆರೋಪಿಸಿದೆ. ಒಂದು ಹಡಗಿನಲ್ಲಿ 20 ಲಕ್ಷ ಬ್ಯಾರೆಲ್‌ಗೂ ಅಧಿಕ ಕಚ್ಚಾ ತೈಲ ಹಾಗೂ ಮತ್ತೊಂದರಲ್ಲಿ ಎಲ್‌ಎನ್‌ಜಿ ಸಾಗಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಇರಾನ್‌ನ ಎಚ್ಚರಿಕೆ ನಿರ್ಲಕ್ಷಿಸಿ ನಿಷೇಧಿತ ಮಾರ್ಗ ಪ್ರವೇಶಿಸಿದ್ದರಿಂದ ಘಟನೆ ನಡೆದಿದೆ ಎಂದು IRGC ಆರೋಪಿಸಿದೆ. ಆದರೆ ಈ ಹೇಳಿಕೆಗಳು ಸ್ವತಂತ್ರವಾಗಿ ದೃಢಪಟ್ಟಿಲ್ಲ.

‘ಋತು ತಾರೆ’ ಯೋಜನೆ: ನಟಿ ರಮ್ಯಾ ಅವರಿಂದ ಮುಖ್ಯಮಂತ್ರಿ ಭೇಟಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಋತು ತಾರೆ’ ಯೋಜನೆಯ ರಾಯಭಾರಿ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರೊ. ನೇತ್ರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 35 ವರ್ಷ ಮೇಲ್ಪಟ್ಟ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಳಜಿ ಹಾಗೂ ಋತುಬಂಧದ (ಮೆನೋಪಾಸ್) ಆರೈಕೆಗೆ ವಿಶೇಷ ಒತ್ತು ನೀಡುವುದು ‘ಋತು ತಾರೆ’ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದ ಮಾಹಿತಿ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಕರ್ನಾಟಕದ ಆಗ್ರಹ

ಬೆಂಗಳೂರು: ಪೆಟ್ರೋಲ್‌ನಲ್ಲಿನ ಎಥನಾಲ್ ಮಿಶ್ರಣದ ಪ್ರಮಾಣದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ರಾಜ್ಯಾದ್ಯಂತ ನಡೆಸಿದ ತಪಾಸಣೆ ಹಾಗೂ ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷಾ ವರದಿಗಳ ಆಧಾರದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಎಥನಾಲ್ ಮಿಶ್ರಣಕ್ಕೆ ವಿರೋಧವಿಲ್ಲ, ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಿಶ್ರಣ ಹಾಗೂ ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಕರ್ನಾಟಕ ಐದು ಕ್ರಮಗಳಿಗೆ ಆಗ್ರಹಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ನೈಜ ಎಥನಾಲ್ ಪ್ರಮಾಣ ಪ್ರದರ್ಶನ, ಇಂಧನ ಬಿಲ್‌ನಲ್ಲಿ ಅದರ ಉಲ್ಲೇಖ, E20 ಜೊತೆಗೆ E10 ಮತ್ತು ಎಥನಾಲ್ ರಹಿತ ಪೆಟ್ರೋಲ್ ಲಭ್ಯತೆ, NABL ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಸ್ವತಂತ್ರ ಪರೀಕ್ಷೆ ಹಾಗೂ ವಾಹನಗಳಿಗೆ ಹಾನಿಯಾದ ಗ್ರಾಹಕರಿಗಾಗಿ…

ಒಂದೇ ಬಾರಿ 23 ಹೆಲಿಕಾಪ್ಟರ್‌ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ

ನವದೆಹಲಿ: ಭಾರತೀಯ ವಾಯುಪಡೆಯ ಹಕೀಂಪೇಟೆಯ ವಾಯುನೆಲೆಯಲ್ಲಿರುವ ಹೆಲಿಕಾಪ್ಟರ್ ತರಬೇತಿ ಶಾಲೆ (Helicopter Training School) ಒಂದೇ ಬಾರಿ ತನ್ನ ಎಲ್ಲಾ 23 ಹೆಲಿಕಾಪ್ಟರ್‌ಗಳನ್ನು ಹಾರಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ. ಶೇ.100ರಷ್ಟು ಕಾರ್ಯಾಚರಣಾ ಸನ್ನದ್ಧತೆ ಸಾಧಿಸಿದ ಹಿನ್ನೆಲೆಯಲ್ಲಿ ಈ ಪ್ರದರ್ಶನ ನಡೆಸಲಾಗಿದೆ. ವಾಯುಪಡೆಯ ಅತಿದೊಡ್ಡ ಹೆಲಿಕಾಪ್ಟರ್ ಘಟಕವಾಗಿರುವ ಈ ಶಾಲೆ, ತನ್ನ ಉನ್ನತ ನಿರ್ವಹಣಾ ಗುಣಮಟ್ಟ, ಸಿಬ್ಬಂದಿಯ ಸಮನ್ವಯ ಮತ್ತು ಅತ್ಯುತ್ತಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ‘Gyanena Siddihi’ ಎಂಬ ಧ್ಯೇಯವಾಕ್ಯದೊಂದಿಗೆ ಜ್ಞಾನ ಮತ್ತು ತರಬೇತಿಯ ಮೂಲಕ ಸಾಮರ್ಥ್ಯ ಹಾಗೂ ಶ್ರೇಷ್ಠತೆ ಸಾಧಿಸುವುದನ್ನು ಘಟಕವು ಸಾರಿದೆ. ಈ ಅಪರೂಪದ ಸಾಧನೆಯ ಚಿತ್ರವನ್ನು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.