ಹಾಸನದಲ್ಲಿ ಹೆಚ್ ಡಿ ರೇವಣ್ಣ ಆಪ್ತ ಗುತ್ತಿಗೆದಾರಕೃಷ್ಣೇಗೌಡರ ಬರ್ಬರ ಕೊಲೆ

ಹಾಸನ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಆಪ್ತ, ಗ್ರಾನೈಟ್ ವ್ಯಾಪಾರಿ ಕೃಷ್ಣೇಗೌಡ ಎಂಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. 55 ವರ್ಷ ಹರೆಯದ ಹಾಸನದ ಕೈಗಾರಿಕಾ ಅಭಿವೃದ್ಧಿ ಕೇಂದ್ರದ ಬಳಿ ಹಂತಕರು ಹತ್ಯೆ ಮಾಡಿದ್ದಾರೆ.

ತಮ್ಮ ಒಡೆತನದಲ್ಲಿರುವ ಹಾಸನದ ಶ್ರೀರಾಮ ಮಾರ್ಬಲ್ ಸಂಸ್ಥೆಯ ಮುಂಭಾಗದಲ್ಲಿ ಅವರು ಬುಧವಾರ ಮಧ್ಯಾಹ್ನ 12.45 ರ ಸುಮಾರಿಗೆ ಇನ್ನೋವಾ ಕಾರಿನಿಂದ ಇಳಿದು ಗ್ರಾನೈಟ್ ಘಟಕಕ್ಕೆ ತೆರಳುತ್ತಿದ್ದಾಗ ಐವರು ಯುವಕರು ದಾಳಿ ಮಾಡಿದ್ದಾರೆ. ಗಾಯಗೊಂಡು ನೆಲಕ್ಕೆ ಬಿದ್ದ ನಂತರವೂ ಮಾರಕಾಸ್ತ್ರಗಳಿಂದ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದಾರೆ.
ಗುತ್ತಿಗೆದಾರರೂ ಆಗಿಹಲವರೊಂದಿಗೆ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ಹಲವು ಬಾರಿ ಜಗಳ ಏರ್ಪಟ್ಟು ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರುಗಳು ದಾಖಲಾಗಿತ್ತು. ಈ ವೈಷಮ್ಯದ ಕಾರಣದಿಂದಾಗಿ ಕೊಲೆ ನಡೆದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts