1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ. ‘ಕೈವ’ ಹೆಸರಿನ ಈ ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ.
‘ಕೈವ’ ಎಂಬುದು ಒಬ್ಬ ವ್ಯಕ್ತಿಯ ಹೆಸರು. ಬೆಂಗಳೂರು ಕರಗದಲ್ಲಿ ಸೃಷ್ಟಿಯಾದ ಪ್ರೇಮಪ್ರಸಂಗವೊಂದು ಕೋತೂಹಲಘಟ್ಟಕ್ಕೆ ತಲುಪಿ ನಿರ್ಣಾಯಕ ತಿರುವನ್ನು ಪಡೆಯುವ ನಡುವೆ ಅನೇಕಾನೇಕ ಅಚ್ಚರಿಯ ಪ್ರಸಂಗಗಳು ಘಟಿಸುತ್ತವೆ. ಈ ಸಿನಿಮಾದ ಬಹುತೇಕ ಸನ್ನಿವೇಶಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ.
ಗಂಗಾರಾಮ್ ಕಟ್ಡಡದ ದುರಂತಕ್ಕೂಈ ಚಿತ್ರದ ಕಥೆಗೂ ಸಂಬಂಧವಿದೆ ಎಂಬುದೂ ಮತ್ತೊಂದು ಅಚ್ಚರಿ.
ಚಿತ್ರದ ನಾಯಕನಾಗಿ ಧನ್ವೀರ್, ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದು, ದಿನಕರ್ ತೂಗುದೀಪ್ ಕೂಡಾ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐವರು ನಿರ್ದೇಶಕರು ನಟನೆ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಡಿಸೆಂಬರ್ ನಲ್ಲಿ ‘ಕೈವ’ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.
ಈ ಸಿನಿಮಾದ ಟೀಸರನ್ನು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದು ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.