ದೆಹಲಿ: ಕೆಂಪು ರಾಷ್ಟ್ರ ಚೀನಾದಲ್ಲಿ ಸೃಷ್ಟಿಯಾಗಿ ಪ್ರಪಂಚ ಪರ್ಯಟನೆ ಕೈಗೊಂಡಿರುವ ಕಿಲ್ಲರ್ ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಿಸುತ್ತಿದೆ. ಇಡೀ ವಿಶ್ವವೇ ಆತಂಕದ ಮಡುವಿನಲ್ಲಿ ಬಿದ್ದಿದ್ದು, ವಿಶ್ವದಾದ್ಯಂತ ಸುಮಾರು ಮೂರೂವರೆ ಲಕ್ಷ ಮಂದಿ ಪಾಲಿಗೆ ಕೋವಿಡ್-19 ವೈರಾಣು ಯಮದೂತನಾಗಿ ಬಂದೆರಗಿದೆ.
ಒಂದು ಅಂಕಿ ಅಂಶ ಪ್ರಕಾರ ಜಗತ್ತಿನೆಲ್ಲೆಡೆ ಸೋಂಕಿತರ ಸಂಖ್ಯೆ 55 ಲಕ್ಷ ಸಮೀಪಿಸುತ್ತಿದ್ದು, ಈವರೆಗೆ ಸುಮಾರು 3 ಲಕ್ಷ 43 ಸಾವಿರ ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 99,780 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಪೈಕಿ ಅಮೆರಿಕಾದಲ್ಲಿಯೇ 143,739 ಮಂದಿಯನ್ನು ಕೊರೋನಾ ಬಲಿತೆಗೆದುಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸರಾಸರಿ 1100 ಕ್ಕೂ ಹೆಚ್ಚು ಮಂದಿ ಅಮೆರಿಕಾದಲ್ಲಿ ಬಲಿಯಾಗುತ್ತಿದ್ದರೆಂ ದು ಅಂದಾಜಿಸಲಾಗಿದೆ. ಬ್ರಿಟನ್’ನಲ್ಲಿ 37,130 ಮಂದಿ ಕಿಲ್ಲರ್ ಕೊರೋನಾ ಹಾವಳಿಯಿಂದಾಗಿ ಅಸುನೀಗಿದ್ದಾರೆ. ಇಟಲಿಯಲ್ಲಿ 32,955 , ಫ್ರಾನ್ಸ್’ನಲ್ಲಿ 28,533, ಸ್ಪೇನ್’ನಲ್ಲಿ 27,117, ಬ್ರೆಸಿಲ್’ನಲ್ಲಿ 24,502, ಜರ್ಮನಿಯಲ್ಲಿ 8,372 ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದಲ್ಲೂ 3,807 ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು