ಚೆನ್ನೈ: ತಮಿಳುನಾಡು ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಕಡಿಯಲಾಗದ ಸಂಬಂಧ ಇದೆ. ಈವರೆಗೂ ತಮಿಳುನಾಡು ರಾಜಕಾರಣವನ್ನು ಮುನ್ನಡೆಸಿದವವರಲ್ಲಿ ಬಹುಪಾಲು ಮಂದಿ ಸಿನಿಮಾ ಮಂದಿಯೇ. ಇದೀಗ ಸಿನಿಮಾ ದಿಗ್ಗಜರಾಗಿರುವ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೂಡಾ ತಮಿಳುನಾಡು ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ.
ಅಂದ ಹಾಗೆ ಈ ಇಬ್ಬರೂ ಗಣ್ಯರು ರಾಜಕೀಯದಾಟದಲ್ಲಿ ಜಂಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ಅಣ್ಣಾ ಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ತಮಿಳುನಾಡು ರಾಜಕೀಯ ರಂಗದಲ್ಲಿ ಇತಿಹಾಸ ಬರೆಯುತ್ತಲೇ ಇವೆ. ಇದೀಗ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೂಡ ರಾಜಕೀಯ ಅಖಾಡ ಪ್ರವೇಶಿಸಿದ್ದು ಇವರ ಬೆಂಬಲಿಗರು ಹೊಸ ಚರಿತ್ರೆಗೆ ಬೆಂಗಾವಲಾಗುತ್ತಾರೆ.
ಸಿನಿಮಾ ರಂಗದ ಫಾಲೋವರ್ ಬಹುತೇಕ ರಾಜಕೀಯ ತೀರ್ಮಾನಗಳಿಗೆ ಬೆಂಗಾವಲಾಗುತ್ತಾರೆ ಎಂಬುದು ಕಮಲ್ ಹಾಸನ್ ಅವರ ವಿಶ್ಲೇಷಣೆ. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರು ಹೊಸ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಅಗತ್ಯಬಿದ್ದರೆ ರಾಜಕೀಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ತಮ್ಮ ಮಕ್ಕಳ್ ನೀಧಿ ಮಯ್ಯಂ ಪಕ್ಷ ಕೈ ಜೋಡಿಸುವುದಾಗಿ ಅದರ ಸಂಸ್ಥಾಪಕ ನಟ ನಮಲ್ ಹಾಸನ್ ಹೇಳಿದ್ದಾರೆ.
ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ ತಾವು ಕೈ ಜೋಡಿಸಲು ಸಿದ್ಧ ಎಂದು ಕಮಲ್ ಹೇಳಿದ್ದಾರೆ. ಕಳೆದ 44 ವರ್ಷಗಳಿಂದಲೂ ಚಿತ್ರರಂಗದಲ್ಲಿ ಜೊತೆಯಲ್ಲಿದ್ದೇವೆ. ನಾವು ರಾಜಕೀಯದಲ್ಲೂ ಒಂದಾದರೆ ದರಲ್ಲಿ ಅರ್ಥ ಇರುತ್ತದೆ. ಒಂದು ವೇಳೆ ಅಗತ್ಯಬಿದ್ದರೆ ತಮಿಳುನಾಡಿನ ಅಭಿವೃದ್ದಿಗಾಗಿ ನಾವಿಬ್ಬರೂ ಒಂದಾಗುತ್ತೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದಕ್ಕಿ ಪ್ರತಿಕ್ರಿಯಿಸಿರುವ ರಜನಿಕಾಂತ್, ಸಂದರ್ಭ ಕೂಡಿಬಂದರೆ ರಾಜಕಾರಣದಲ್ಲಿ ಕಮಲ್ ಹಾಸನ್ ಜೊತೆ ಸೇರಲು ನಾನೂ ಸಿದ್ಧನಿದ್ದೇನೆ ಎಂದಿದ್ದಾರೆ.