ಟಿವಿಯಿಂದ ಚಿತ್ರಲೋಕಕ್ಕೆ ; ಇದೀಗ ಬೋಪಣ್ಣ ಸರದಿ

ಬೆಂಗಳೂರು: ಅಂದು ಟಿವಿ ಆಂಕರ್.. ಇದೀಗ ಫಿಲಂ ಸ್ಟಾರ್. ಅಂದ ಹಾಗೆ ಇದು ಉದಯ ಟಿವಿಯಲ್ಲಿ ನ್ಯೂಸ್ ರೀಡರ್ ಆಗಿದ್ದ ಪ್ರಮೋದ್ ಬೋಪಣ್ಣ ಸ್ಟೋರಿ.
ಉದಯ ಟಿವಿಯಲ್ಲಿ ಆಂಕರ್ ಆಗಿದ್ದ ಅನೇಕರು ಫಿಲಂ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದವರೇ. ಗೋಲ್ಡನ್ ಸ್ಟಾರ್ ಗಣೇಶ್, ಕಾಮಿಡಿ ಸ್ಟಾರ್ ಚಿಕ್ಕಣ್ಣ ಇರಬಹುದು, ಹರ್ಷಿಕಾ ಪುಣಚ ಇರಬಹುದು, ಸ್ಫೂರ್ತಿ ಸಹಿತ ಅನೇಕರು ಕನ್ನಡ ಸಿನಿಮಾ ಲೋಕದಲ್ಲಿ ತಾರೆಯರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಉದಯ ನ್ಯೂಸ್ ನಿರೂಪಕರಾಗಿದ್ದ ಪ್ರಮೋದ್ ಬೋಪಣ್ಣ ಕೂಡ ಸಾಗಿದ್ದಾರೆ.
ನಿರ್ದೇಶಕ ಶ್ರೇಯಸ್ ಅವರ ಅಂದುಕೊಂಡಂತೆ ಚಿತ್ರದಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಳ್ಳಲಿದ್ದು ಆ ಸಿನಿ ತಂಡದಲ್ಲಿ ಪ್ರಮೋದ್ ಬೋಪಣ್ಣ ಕೂಡ ನಟಿಸುತ್ತಿದ್ದಾರೆ.
ಒಂದು ಕೊಲೆಯ ನಿಗೂಢತೆ ಸುತ್ತಾ ಸುತ್ತುವ ಅಂದುಕೊಂಡಂತೆ ಚಿತ್ರದಲ್ಲಿ ಆರು ಮಂದಿ ನಟಿಸುತ್ತಿದ್ದಾರೆ. ಪ್ರಮೋದ್ ಬೊಪ್ಪಣ್ಣ, ರಿಶ್ವಿ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ರಂಗಭೂಮಿ ಕಲಾವಿದರಾದ ವಿಶ್ರುತ್ ರಾಜ್, ಕಿರಣ್, ಲೋಹಿತ್ ಗೌಡ, ಲೋಕೇಶ್ ಮತ್ತು ವಿನಯ್ ರಾಜ್ ಕೂಡ ಉತ್ತಮ ಪಾತ್ರಗಳನ್ನೂ ಮಾಡಲಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

Related posts