ಬೆಂಗಳೂರು: ಉತ್ತರ ಹೊರವಲಯದ ವಿಆರ್‌ಎಲ್ ಅರೆನಾ ಬಳಿ ಸಿನಿಮಾ ಚಿತ್ರೀಕರಣ ವೇಳೆ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಶಿವರಾಜ್ (30) ಎಂಬಾತ ಸಾವನ್ನಪ್ಪಿದ್ದು ಈ ಘಟನೆ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ವಿರುದ್ದ ಎಫ್ಐಆರ್ ದಾಖಲಾಗಿದೆ.
ಗುರುವಾರ ‘ಮನದ ಕಡಲು’ ಸಿನಿಮಾದ ಚಿತ್ರೀಕರಣದ ವೇಳೆ ಸುಮಾರು 30 ಅಡಿ ಮೇಲಿನಿಂದ ಬಿದ್ದು ಲೈಟ್ ಬಾಯ್ ಸಾವನ್ನಪ್ಪಿದ್ದಾನೆ. ಮಾದನಾಯಕನಹಳ್ಳಿ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.
ಎಫ್‌ಐಆರ್‌ನಲ್ಲಿ ಮ್ಯಾನೇಜರ್ ಸುರೇಶ್ ಅವರನ್ನು ಮೊದಲನೇ ಆರೋಪಿಯನ್ನಾಗಿ ಗುರುತಿಸುರುವ ಪೊಲೀಸರು ಯೋಗರಾಜ್ ಭಟ್ ಅವರನ್ನು ಮೂರನೇ ಆರೋಪಿಯಾಗಿ ಉಲ್ಲೇಖಿಸಿದ್ದಾರೆ. ಶೂಟಿಂಗ್ ವೇಳೆ ಸೂಕ್ತ ಮುಂಜಾಗ್ರತೆ ವಹಿಸದ ಕಾರಣ ಇವರ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.