ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೇಗದೂತ ಮಾದರಿ ಬಸ್‌ಗಳ ಲೋಕಾರ್ಪಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೇಗದೂತ ಮಾದರಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಗಮನಸೆಳೆಯಿತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೂತನ ಬಸ್ಸುಗಳಿಗೆ ಹಸಿರು ನಿಶಾನೆ ತೋರಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಖರೀದಿಸಲಾದ ಒಟ್ಟು 109 ವೇಗದೂತ ಮಾದರಿಯ ಬಸ್ಸುಗಳ ಪೈಕಿ ಮಂಗಳವಾರ 50 ಬಸ್‌ಗಳನ್ನು ಉದ್ಘಾಟನೆ ಮಾಡಲಾಗಿದೆ‌.

ಈ ಬಸ್ಸುಗಳು ಅಶೋಕ ಲೈಲಾಂಡ್ ಕಂಪನಿಯಿಂದ ತಯಾರಿಸಲಾಗಿದ್ದು, 109 ಬಸ್ಸುಗಳ ಖರೀದಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ರೂ 45.00 ಕೋಟಿಗಳ ಅನುದಾನವನ್ನು ನೀಡಿದೆ. ಈ ಬಸ್‌ಗಳಲ್ಲಿ 200 HP ಸಾಮರ್ಥ್ಯದ BS-6 ಎಂಜಿನ್‌ಗಳನ್ನು ಅಳವಡಿಸಿದ್ದು, 50 ಪ್ರಯಾಣಿಕ ಆಸನಗಳನ್ನು ಹೊಂದಿವೆ. ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಬಸ್ ಕೋಡ್‌ನಂತೆ ನಿರ್ಮಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ, ಈ ಬಸ್ಸುಗಳಲ್ಲಿ, Fire Detection and Alarm System, Electronic Vehicle Stability Control System, ಸ್ವಯಂ ಚಾಲಿತ ಬಾಗಿಲು , ನಾಲ್ಕು ಸಿ.ಸಿ. ಕ್ಯಾಮೆರಾಗಳು, ರೀವರ್ಸ್ ಪಾರ್ಕಿಂಗ್ ಅಲರಾಮ್ ಸಿಸ್ಟಂ, ವೆಹಿಕಲ್ ಲೋಕೆಶನ್ ಟ್ರ್ಯಾಕಿಂಗ್ ಸಿಸ್ಟಂ ಹಾಗೂ ಪ್ಯಾಸೆಂಜರ್ ಇನಫಾರಮೆಶನ್ ಸಿಸ್ಟಂ & ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

Related posts