ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಗೊಳಿಸಿದ್ದ ಸರ್ಕಾರ ಇದೀಗ ಕಠಿಣ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಲಾಕ್’ಡೌನ್’ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಹಾಗಾಗಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ.
ಕೊವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚು ಕಂಡುಬಂದಿರುವ ಹಿನ್ನೆಲೆಯಲ್ಲಿ ಕಂಟೇನ್’ನ್ಮೆಂಟ್ ಝೋನ್’ಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಕಡೆ ಹೊಸ ಮಾರ್ಗಸೂಚಿ ಪ್ರಕಾರ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಲಾಗಿದೆ. ಪ್ರದೇಶಗಳಲ್ಲಿ
ಅಗತ್ಯ ಸೇವೆಗಳಿಗೆ ಲಾಕ್ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಆದರೆ ಮನರಂಜನೆ ಹಾಗೂ ಸಾರಿಗೆ ಸಹಿತ ಕೆಲವು ಸೇವೆಗಳಿಗೆ ಯಾವುದೇ ಅನುಮತಿ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅವಕಾಶ:
- ಪಾಸ್ ಇದ್ದವರಿಗಷ್ಟೇ ಸಂಚಾರಕ್ಕೆ ಅನುಮತಿ
- ಹೊಟೆಲ್ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶ
- ಕೊರಿಯರ್ ಸೇವೆಗೆ ಅನುಮತಿ
- ಪೇಪರ್, ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ತೆರೆಯಲಿವೆ
- ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಅನುಮತಿ
- ಕೃಷಿ ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
- ಕಟ್ಟಡ ನಿರ್ಮಾಣ, ಕಟ್ಟಡ ಕಾಮಗರಿಗಳಿಗೆ ಅನುಮತಿ
- ಟೀ ಕಾಫಿ ಪ್ಲಾಂಟೇಷನ್ಗೆ ಅವಕಾಶ
- ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಅವಕಾಶ
- ಪಶುಸಂಗೋಪನೆ, ಬ್ಯಾಂಕುಗಳ ನಿರ್ವಹಣೆ
- ಲಾರಿ ರಿಪೇರಿ ಮಾಡುವ ಗ್ಯಾರೇಜ್’ಗೆ ಅವಕಾಶ
ಅವಕಾಶ ಇಲ್ಲ
- ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ
- ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ತೆರೆಯುವುದಿಲ್ಲ
- ಶಾಲಾ ಕಾಲೇಜು ತೆರೆಯುವಂತಿಲ್ಲ
- ಟ್ಯಾಕ್ಸಿ ಆಟೋ ಬಸ್ ಸಂಚಾರ ಬಂದ್