ಬೆಂಗಳೂರು: ಕರುನಾಡಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದೆ. ಶನಿವಾರ ಸಂಜೆವರೆಗೆ ಕಳೆದ 24 ತಾಸುಗಳಲ್ಲಿ ಕರ್ನಾಟಕದ ವಿವಿಧೆಡೆ ಒಟ್ಟು 26 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 500 ತಲುಪಿದೆ.
ಶನಿವಾರ ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್’ನಲ್ಲಿ ಈ ಕಳವಳಕಾರಿ ಸಂಗತಿ ಬಹಿರಂಗವಾಗಿದ್ದು, 13 ಹೊಸ ಪ್ರಕರಣಗಳು ರಾಜಧಾನಿ ಬೆಂಗಳೂರನ್ನು ಕೇಂದ್ರೀಕರಿಸಿದೆ.
ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 9 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಮಂಡ್ಯ, ದಕ್ಷಿಣಕನ್ನಡ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
ಎಲ್ಲೆಲ್ಲೆ ಎಷ್ಟೆಷ್ಟು ಪ್ರಕರಣ?
- ಬೆಂಗಳೂರು 133 (4 ಸಾವು)
- ಮೈಸೂರು 89
- ಬೆಳಗಾವಿ 54 (1 ಸಾವು)
- ವಿಜಯಪುರ 39 (2 ಸಾವು)
- ಕಲಬುರಗಿ 36 (4 ಸಾವು)
- ಬಾಗಲಕೋಟೆ 24 (1 ಸಾವು)
- ಚಿಕ್ಕಬಳ್ಳಾಪುರ 18 (2 ಸಾವು)
- ದಕ್ಷಿಣ ಕನ್ನಡ 17 (2 ಸಾವು)
- ಬೀದರ್ 15
- ಮಂಡ್ಯ 16
- ಬಳ್ಳಾರಿ 13
- ಬೆಂಗಳೂರು ಗ್ರಾ. 12
- ಉತ್ತರ ಕನ್ನಡ 11
- ಧಾರವಾಡ 9
- ಗದಗ್ 4 (1 ಸಾವು)
- ಉಡುಪಿ 3
- ದಾವಣಗೆರೆ 2
- ತುಮಕೂರು 3 (1 ಸಾವು)
- ಚಿತ್ರದುರ್ಗ 1
- ಕೊಡಗು 1
ಈ ವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 500 ಮಂದಿ ಕೊರೋನಾ ಸೋಂಕಿಗೊಳಗಾಗಿದ್ದು ಈ ಪೈಕಿ 158 ಮಂದಿ ಗುಣಮುಖರಾಗಿದ್ದಾರೆ. 334 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ರಾಜ್ಯದ 9 ಜಿಲ್ಲೆಗಳಲ್ಲಿ ಈ ವರೆಗೆ 18 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ಒದಗಿಸಿದೆ.
—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-