ಕರುನಾಡಿನಲ್ಲಿ ಕೊರೋನಾ ಕಳವಳ ; ಸೋಂಕಿತರ ಸಂಖ್ಯೆ 500

ಬೆಂಗಳೂರು: ಕರುನಾಡಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದೆ.  ಶನಿವಾರ ಸಂಜೆವರೆಗೆ ಕಳೆದ 24 ತಾಸುಗಳಲ್ಲಿ ಕರ್ನಾಟಕದ ವಿವಿಧೆಡೆ ಒಟ್ಟು 26 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 500 ತಲುಪಿದೆ.

ಶನಿವಾರ ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್’ನಲ್ಲಿ ಈ ಕಳವಳಕಾರಿ ಸಂಗತಿ ಬಹಿರಂಗವಾಗಿದ್ದು, 13 ಹೊಸ ಪ್ರಕರಣಗಳು ರಾಜಧಾನಿ ಬೆಂಗಳೂರನ್ನು ಕೇಂದ್ರೀಕರಿಸಿದೆ.

ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 9 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಮಂಡ್ಯ, ದಕ್ಷಿಣಕನ್ನಡ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.

ಎಲ್ಲೆಲ್ಲೆ ಎಷ್ಟೆಷ್ಟು ಪ್ರಕರಣ?

  • ಬೆಂಗಳೂರು  133 (4 ಸಾವು)
  • ಮೈಸೂರು  89 
  • ಬೆಳಗಾವಿ  54  (1 ಸಾವು)
  • ವಿಜಯಪುರ  39  (2 ಸಾವು)
  • ಕಲಬುರಗಿ  36  (4 ಸಾವು)
  • ಬಾಗಲಕೋಟೆ 24  (1 ಸಾವು)
  • ಚಿಕ್ಕಬಳ್ಳಾಪುರ 18  (2 ಸಾವು)
  • ದಕ್ಷಿಣ ಕನ್ನಡ 17  (2 ಸಾವು)
  • ಬೀದರ್ 15
  • ಮಂಡ್ಯ 16
  • ಬಳ್ಳಾರಿ 13
  • ಬೆಂಗಳೂರು ಗ್ರಾ. 12
  • ಉತ್ತರ ಕನ್ನಡ 11
  • ಧಾರವಾಡ 9
  • ಗದಗ್ 4  (1 ಸಾವು)
  • ಉಡುಪಿ 3
  • ದಾವಣಗೆರೆ 2
  • ತುಮಕೂರು 3  (1 ಸಾವು)
  • ಚಿತ್ರದುರ್ಗ 1
  • ಕೊಡಗು 1

ಈ ವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 500 ಮಂದಿ ಕೊರೋನಾ ಸೋಂಕಿಗೊಳಗಾಗಿದ್ದು ಈ ಪೈಕಿ 158 ಮಂದಿ ಗುಣಮುಖರಾಗಿದ್ದಾರೆ. 334 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ರಾಜ್ಯದ 9 ಜಿಲ್ಲೆಗಳಲ್ಲಿ ಈ ವರೆಗೆ 18 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ಒದಗಿಸಿದೆ.

—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-

Related posts