ಹೆಚ್ಚುತ್ತಿರುವ ಕೊರೋನಾ ವೈರಸ್; ಒಂದೇ ದಿನ 1990 ಕೇಸ್

ದೆಹಲಿ: ಕೊರೋನಾ ವೈರಾಣು ಅಗೋಚರವಾಗಿದ್ದರೂ ಪರಿಣಾಮ ಮಾತ್ರ ಊಹಿಸಲೂ ಸಾಧ್ಯವಾಗದಷ್ಟು. ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೋವಿಡ್-19 ವೈರಸ್ ಹಾವಳಿ ಭಾರತದಲ್ಲೂ ಆತಂಕದ ಅಲೆ ಎಬ್ಬಿಸಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇಂದ್ರ ಸರ್ಕಾರ ಹೇಳುವಂತೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೬೦೦೦ ಕ್ಕೂ ಹೆಚ್ಚು.

ಕೊರೋನಾ ವೈರಾಣು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ. ಈ ಸೂತ್ರ ಅನುಸರಿಸಲೆಂದೇ ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ. ಸಮಾರಂಭ, ಸಭೆಗಳೂ ನಡೆಯದೆ ಜನ ಗುಂಪು ಸೇರುತ್ತಿಲ್ಲ. ಆದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ದೇಶಕ್ಕೆ ಸವಾಲೆಂಬಂತಾಗಿದೆ.

—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-

ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಶನಿವಾರ ಸಂಜೆವರೆಗೆ 24 ತಾಸುಗಳಲ್ಲಿ 49 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಮೂಲಕ ಸೋಂಕಿತರ ಸಂಖ್ಯೆಯೂ 26,490 ದಾಟಿದೆ. ಈ ಮೂಲಕ ದೇಶಾದ್ಯಂತ ಕೊರೋನಾ ಕಾರಣಕ್ಕಾಗಿ ಸಾವನ್ನಪ್ಪಿದವರ ಸಂಖ್ಯೆ ೮೦೯ ಕ್ಕೆ ಏರಿಕೆಯಾಗಿದೆ. ಅವಧಿಯಲ್ಲಿ 1,990 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದ್ದು, ಈ ಸಂಖ್ಯೆ ಕೂಡಾ 809ಕ್ಕೆ ಏರಿಕೆಯಾಗಿದೆ.

ಈ ನಡುವೆ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ.

ಇದನ್ನೂ ಓದಿ.. ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..?

 

Related posts