ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..?

ದೆಹಲಿ: ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವ ಯಮರೂಪಿ ಅಗೋಚರ ಕೊರೋನಾ ವೈರಸ್ ಹಾವಳಿ ಇನ್ನೆಷ್ಟು ದಿನ ಎಂಬ ಪ್ರಶ್ನೆ ಕಾಡುತ್ತಲೇ ಇವೆ. ಇದೀಗ ಎರಡನೇ ಅವಧಿಗೆ ದೇಶಾದ್ಯಂತ ಲಾಕ್’ಡೌನ್ ವಿಸ್ತರಣೆಯಾಗಿದ್ದು, ಮೇ 3ರಂದು ಇದು ಕೊನೆಗೊಳ್ಳುತ್ತಾ ಅಥವಾ ಮತ್ತಷ್ಟು ದಿನ ಮುಂದುವರಿಯುತ್ತಾ ಎಂಬ ಗೊಂದಲ ಎಲ್ಲರಲ್ಲೂ ಇದೆ.

ಈ ನಡುವೆ ನೀತಿ ಆಯೋಗದ ಅಧ್ಯಕ್ಷರನ್ನೊಳಗೊಂಡ ಕಾರ್ಯಪಡೆ ನೀಡಲಿರುವ ವರದಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆಯನ್ನಾಧರಿಸಿ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-

ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ಪ್ರಸ್ತುತ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಅಷ್ಟೇ ಅಲ್ಲ ಹಲವು ರಾಜ್ಯಗಳು ಇದೀಗ ಕೊರೋನಾ ಮುಕ್ತವಾಗಿವೆ. ಹೀಗಿದ್ದರೂ ರೆಡ್ ಝೋನ್ ಹಾಗೂ ಹಾಟ್’ಸ್ಪಾಟ್ ಜಿಲ್ಲೆಗಳಲ್ಲಿ ಇನ್ನು ಮುಂದೆಯೂ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವ ಸಾಧ್ಯತೆಗಳೇ ಹೆಚ್ಚಿವೆ.

ಈ ನಡುವೆ ಉತ್ತರಪ್ರದೇಶ ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ  ಜೂನ್ 30ರವರೆಗೆ ಸಾರ್ವಜನಿಕವಾಗಿ ಗುಂಪುಗೂಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಈ ಕುರಿತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿರುವ ಮುಚ್ಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಕೀಯ ಸಭೆ, ಸಮಾರಂಭ ಮತ್ತು ಸಾಮಾಜಿಕ ಚಟುವಟಿಕೆಯ ಸಮಾರಂಭಗಳು ದೊಡ್ಡ ಮಟ್ಟದ ಜನಸಂದಣಿಗೆ ಅವಕಾಶ ಮಾಡಿಕೊಡಲಿದೆ. ಹೀಗಾಗಿ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ.. ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ; ನೀವೂ ಕೂಡಾ..

 

Related posts