ದೆಹಲಿ: ಲಾಕ್’ಡೌನ್ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾತ್ರಿ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ದೇಶದ ಪಾಲಿಗೆ ಮತ್ತೊಂದು ಚರಿತ್ರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯವರು ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಘೋಷಿಸಿದ್ದಾರೆ.
ಕೊರೋನಾದಿಂದಾಗಿ ದೇಶದ ಜನ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದೆ. ಆದರೂ ಕೂಡ ಭಾರತ ನಡೆಸಿದ ಹೋರಾಟವನ್ನು ಇಡೀ ವಿಶ್ವವೇ ಗಮನಿಸಿದೆ ಎಂದ ಮೋದಿ, ಸಂಕಷ್ಟದಲ್ಲಿರುವ ದೇಶದ ಜನರಿಗೆ ನೆರವಾಗುವ ದೃಷ್ಟಿಯಿಂದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸುತ್ತಿರುವುದಾಗಿ ಹೇಳಿದರು.
ಇದನ್ನೂ ಓದಿ.. ಖಡಕ್ ಅಧಿಕಾರಿ ವರ್ಗಾವಣೆ; ಒತ್ತಡಕ್ಕೆ ಮಣಿಯಿತೇ ಸರ್ಕಾರ?
ದೇಶದ ಜಿಡಿಪಿಯ ಶೇಕಡಾ 10ರಷ್ಟು ಅನುದಾನ ಇದಾಗಿದೆ ಎಂದ ಮೋದಿ, ಜನಧನ್, ಮೊಬೈಲ್, ಆಧಾರ್ ಮೂಲಕ ಜನರಿಗೆ ಹಣ ಸಿಗಲಿದೆ. ಸರ್ಕಾರ ನೀಡುವ ಪ್ರತೀ ಪೈಸೆಯೂ ಬಡವರಿಗೆ ಸಿಗಲಿದೆ ಎಂದರು.
ಭೂಮಿಗೆ, ಹಣದ ಹರಿವಿಗೆ, ಸಣ್ಣ ಉದ್ದಿಮೆಗಳ ನೆರವಿಗೆ ಈ ಪ್ಯಾಕೇಜ್ ಪ್ರಕಟಿಸಲಾಗಿದೆ ಎಂದ ಅವರು, ಮಾಧ್ಯಮ ವರ್ಗದವರಿಗಾಗಿ, ಶ್ರಮಿಕರಿಗೆ, ರೈತರಿಗೆ, ಕಾರ್ಮಿಕರಿಗಾಗಿ ಪ್ಯಾಕೇಜ್ ವರದಾನವಾಗಲಿದೆ ಎಂದಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿ, ಆರ್ಥಿಕ ಸುಧಾರಣೆಗೆ ಈ ಪ್ಯಾಕೇಜ್ ವರದಾನವಾಗಲಿದೆ. ಈ ಪ್ಯಾಕೇಜ್ ಮೂಲಕ ದೇಶದಲ್ಲಿ ಹೊಸ ಕ್ರಾಂತಿ ಆರಂಭವಾಗಲಿದೆ. ಸ್ವದೇಶಿ ವಸ್ತುಗಳ ಉತ್ಪಾದನೆಗೆ ಪೂರಕವಾಗಲಿದೆ ಎಂದವರು ಹೇಳಿದರು
ಲಾಕ್ ಡೌನ್-4.0 ಜಾರಿ
ಇದೆ ವೇಳೆ, ಲಾಕ್ ಡೌನ್ -4.0 ಜಾರಿಯಾಗುತ್ತದೆ ಎಂದ ಅವರು, ಇದು ಹೊಸ ರೂಪ ಹಾಗೂ ಹಿಸ ನಿಯಮಗಳೊಂದಿಗೆ ಜಾರಿಗೆ ಬರಲಿದೆ ಎಂದು ತಿಳಿಸಿದರು. ಸಮಯ ಈಗ ನಮಗೆ ಪಾಠ ಕಳಿಸಿದೆ. ಕೊರಾನಾ ಜೊತೆ ಹೋರಾಡುತ್ತಲೇ ಬದುಕೋಣ. ಅದು ನಮ್ಮ ನಿಯಂತ್ರಣದಲ್ಲಿರುವವರೆಗೂ ಹೋರಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದರು.
ಇದನ್ನೂ ಓದಿ.. ನಾಳೆಯಿಂದ ಭಾರೀ ವರ್ಷಧಾರೆ; ಮೇ 15,16 ರಂದು ಬಿರುಗಾಳಿ ಮಳೆ ಆತಂಕ