ಕಲ್ಲೇರಿಯಲ್ಲೂ ಕಿಲ್ಲರ್ ಕೊರೋನಾ; ಕರಾವಳಿಯಲ್ಲಿ ಹೆಚ್ಚಿದ ಆತಂಕ

ಮಂಗಳೂರು: ಕೊರೋನಾ ವಿಚಾರದಲ್ಲಿ ದಕ್ಷಿಣಕನ್ನಡ ಸೇಫ್ ಅಲ್ಲ. ನಿನ್ನೆಯಷ್ಟೇ ಬಂಟ್ವಾಳ ಸಮೀಪ ಮಗುವಿಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ತಲ್ಲಣ ಸೃಷ್ಟಿಸಿದ್ದಾರೆ, ಇದೀಗ ಮತ್ತೊಂದು ಪ್ರಕರಣ ಅದೇ ಜಿಲ್ಲೆಯಲ್ಲಿ ವರದಿಯಾಗಿದೆ.

ಬೆಳ್ತಂಗಡಿ ಸಮೀಪದ ಕಲ್ಲೇರಿ ಮೂಲದ ಯುವಕನಿಗೆ ಕೋವಿಡ್-19 ಸೋಂಕು ಅಂಟಿಕೊಂಡಿದೆ. ಕೆಲ ಸಮಯದ ಹಿಂದೆ ವಿದೇಶದಿಂದ ತವರಿಗೆ ವಾಪಸಾಗಿದ್ದ ಯುವಕ ಅನಾರೋಗ್ಯ ಕಾರಣದಿಂದಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಕೆಲ ದಿನಗಳಿಂದ ಐಸೋಲೇಶನಿನಲ್ಲಿದ್ದ ಈತನಿಗೆ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ವಿದೇಶದಿಂದ ಆಗಮಿಸಿದ್ದ ಈ ಯುವಕ ಬೆಂಗಳೂರು ತಲುಪುತ್ತಿದ್ದಂತೆಯೇ ಜ್ವರ ಹಾಗೂ ಕೆಮ್ಮಿಗಾಗಿ ಔಷದಿ ಪಡೆದಿದ್ದ. ಊರಿಗೆ ಆಗಮಿಸಿದ ಬಳಿಕ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಯುವಕನಿಗೆ ಕೊರೋನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಕಲ್ಲೇರಿ ಗ್ರಾಮಕ್ಕೆ ದಿಗ್ಬಂಧನ ವಿಧಿಸಲಾಗಿದೆ. ಯಾರು ಕೂಡಾ ಗ್ರಾಮದಿಂದ ಹೊರಗೆ ಹಾಗೂ ಗ್ರಾಮದೊಳಗೆ ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಇದನ್ನೂ ಓದಿ..
ಮಂಗಳೂರಿನಲ್ಲಿ ಮತ್ತೊಂದು ಕೊರೋನಾ ಕೇಸ್

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಇದುವೇ ಮೊದಲ ಕೊರೋನಾ ಪ್ರಕರಣ. ಪ್ರವಾಸಿಗರ ತಾಣವೂ ಆಗಿರುವ ಈ ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದಾಗಿ ಪ್ರವಾಸಿಗರಲ್ಲೂ ಆತಂಕ ಕಾದಿದೆ.

ಇದನ್ನೂ ಓದಿ..
ಶರವೇಗದಲ್ಲಿ ಹರಡುತ್ತಿರುವ ಕೊರೋನಾ;  ಮುಂದಿದೆ ಆತಂಕದ ಕ್ಷಣ

Related posts