ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಚೇತರಿಕೆ; ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಅನಾರೋಗ್ಯ ಹಿನ್ನೆಲೆ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು.

ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದ ಕಾರಣ ಡಾ. ಮನಮೋಹನ್ ಸಿಂಗ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಆರೋಗ್ಯ ಬಗ್ಗೆ ಆತಂಕ ಗೊಂಡಿದ್ದ ದೇಶದ ಜನ ದೆಹಲಿಯ ಆಸ್ಪತ್ರೆಯತ್ತ ಗಮನ ಹರಿಸಿದ್ದರು. ವಿಶೇಷ ವಾರ್ಡಿನಲ್ಲಿ ಚಿಕಿತ್ಸೆ ನೀಡಿದ ಏಮ್ಸ್ ವೈದ್ಯರು ಸೋಮವಾರವೇ ಪ್ರಕಟಣೆ ನೀಡಿ, ಮಾಜಿ ಪ್ರಧಾನಿಯವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದರು.

ಜ್ವರದಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿನ ಏರುಪೇರಿಗೆ ಔಷಧದ ಅಡ್ಡಪರಿಣಾಮ ಕಾರಣವಾಗಿತ್ತು ಎಂಬ ಮಾತುಗಳೂ ಹರಿದಾಡುತ್ತಿತ್ತು.
ಈ ನಡುವೆ ರಾಷ್ಟ್ರ ರಾಜಕಾರಣದ ಅಜಾತ ಶತ್ರು ಡಾ.ಮನಮೋಹನ್ ಸಿಂಗ್ ಚೇತರಿಕೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದ್ದರು.

ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಯಶಸ್ವೀ ಚಿಕಿತ್ಸೆ ನೀಡಿದ್ದು ಮನಮೋಹನ್ ಸಿಂಗ್ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಏಮ್ಸ್ ಪ್ರಮುಖರು ತಿಳಿಸಿದ್ದಾರೆ.

Related posts