ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು 6 ತಿಂಗಳು ಮುಂದೂಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 6,012 ಗ್ರಾಮ ಪಂಚಾಯತ್’ಗಳಿದ್ದು, ಬಹುತೇಕ ಗ್ರಾಮ ಪಂಚಾಯತ್’ಗಳ ಅವಧಿ ಜೂನ್-ಜುಲೈರೊಳಗೆ ಅಂತ್ಯಗೊಳ್ಳಲಿದೆ.
ಕೊರೋನಾ ಪರಿಣಾಮ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆಯನ್ನು 6 ತಿಂಗಳು ಮುಂದೂಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಗ್ರಾಮ ಪಂಚಾಯತ್’ಗಳಿಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಆಯಾ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಹುತೇಕ ಕಡೆ ಜಿ.ಪಂ. ಮಟ್ಟದ ಅಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ.
ನೂತನ ಆಡಳಿತಾಧಿಕಾರಿಗಳ ಪಟ್ಟಿ ಹೀಗಿದೆ:
- ಬಾಗಲಕೋಟೆ ಜಿಲ್ಲೆ: ಗುಳೇಗುಡ್ಡ, ರಬಕವಿ-ಬನಹಟ್ಟಿ, ಇಲಕಲ್ ತಾಲೂಕುಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ.
- ಬೆಳಗಾವಿ ಜಿಲ್ಲೆ: ನಿಪ್ಪಾಣಿ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ);
ಕಾಗವಾಡ, ಮೂಡಲಗಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ), - ಚಾಮರಾಜನಗರ ಜಿಲ್ಲೆ: ಹನೂರು ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ.ಉಪ ಕಾರ್ಯದರ್ಶಿ
- ದಾವಣಗೆರೆ ಜಿಲ್ಲೆ: ನ್ಯಾಮತಿ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಬೀದರ್ ಜಿಲ್ಲೆ: ಚಿಟ್ಟಗುಪ್ಪ, ಹುಲಸೂರು, ಕಮಲನಗರ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಬಳ್ಳಾರಿ ಜಿಲ್ಲೆ: ಕುರುಗೋಡು ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ(ಆಡಳಿತ);
ಕೊಟ್ಟೂರು, ಕಂಪ್ಲಿ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ(ಅಭಿವೃದ್ಧಿ) - ಧಾರವಾಡ ಜಿಲ್ಲೆ: ಅಣ್ಣಿಗೇರಿ, ಅಳ್ನಾವರ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ.ಉಪ ಕಾರ್ಯದರ್ಶಿ
- ಗದಗ ಜಿಲ್ಲೆ: ಗಜೇಂದ್ರ ಗಡ, ಲಕ್ಷ್ಮೇಶ್ವರ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ.ಉಪ ಕಾರ್ಯದರ್ಶಿ
- ಕಲಬುರ್ಗಿ ಜಿಲ್ಲೆ: ಕಾಳಗಿ, ಕಮಲಾಪುರ, ಯಾಡ್ರಮಿ, ಶಹಬಾದ್ ತಾಲೂಕುಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಯಾದಗಿರಿ ಜಿಲ್ಲೆ: ಹಣಸಗಿ, ವಡಗೇರಾ, ಗುರುಮಿಟ್ಕಲ್ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಕೊಪ್ಪಳ ಜಿಲ್ಲೆ: ಕುಕುನೂರು, ಕನಕಗಿರಿ, ಕಾರಟಗಿ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ(ಆಡಳಿತ)
- ರಾಯಚೂರು ಜಿಲ್ಲೆ: ಮಸ್ಕಿ, ಸಿರವಾರ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ.ಉಪ ಕಾರ್ಯದರ್ಶಿ
- ಉಡುಪಿ ಜಿಲ್ಲೆ: ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ದಕ್ಷಿಣ ಕನ್ನಡ ಜಿಲ್ಲೆ: ಮೂಡಬಿಡ್ರಿ , ಕಡಬ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಬೆಂಗಳೂರು ನಗರ: ಯಲಹಂಕ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ವಿಜಯಪುರ ಜಿಲ್ಲೆ: ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟಿ, ಚಡಚಣ, ಕೊಲ್ಹಾರ್ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ,
- ಹಾವೇರಿ ಜಿಲ್ಲೆ: ರಟ್ಟಿಹಳ್ಳಿ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಮೈಸೂರು ಜಿಲ್ಲೆ: ಸರಗೂರು ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ)
- ಚಿಕ್ಕಮಗಳೂರು ಜಿಲ್ಲೆ: ಅಜ್ಜಂಪುರ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ)
- ಉತ್ತರ ಕನ್ನಡ ಜಿಲ್ಲೆ: ದಾಂಡೇಲಿ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
- ಕೋಲಾರ ಜಿಲ್ಲೆ: ಕೆಜಿಎಫ್ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ
ಇದನ್ನೂ ಓದಿ.. ಸೋನಿಯಾ ಗಾಂಧಿ Vs ಶೋಭಾ ಕರಾಂದ್ಲಾಜೆ; FIR ರದ್ದು ಮಾಡದಂತೆ ಸಲಹೆ