ಸಮಾಜಮುಖಿ ‘ಯುವಸೈನ್ಯ’; ಸಾಮಾಜಿಕ ಜಾಲತಾಣಗಳಲ್ಲಿ ChefTalk ಮೇನಿಯಾ

ಬೆಂಗಳೂರು: ರಾಜಧಾನಿ ನಗರಿಗಳಲ್ಲಿ ಆಹಾರೋದ್ಯಮ ನಡೆಸಿ, ಆದಾಯವನ್ನು ಹಳ್ಳಿಗಳಲ್ಲಿ ಸಾಮಾಜಮಖಿ ಕಾರ್ಯಗಳಿಗೆ ಬಳಸುವ ಮೂಲಕ ChefTalk ಕಂಪೆನಿ ನಾಡಿನ ಗಮನಸೆಳೆದಿದೆ. ಯುವಜನರಿಗೆ ಉದ್ಯೋಗ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಇಂಥದ್ದೊಂದು ಸಂಸ್ಥೆಗೆ ಮುನ್ನುಡಿ ಬರೆದಿದ್ದ ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿ ಬಳಗ ಇದೀಗ ಯುವಜನರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕೆಲಸದಲ್ಲಿ ತೊಡಗಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ವಾಟ್ಸಾಪ್’ನಲ್ಲಿ ಈಗಾಗಲೇ ವಿಶೇಷ ತಂಡ ಕಾರ್ಯಪ್ರವೃತ್ತವಾಗಿದ್ದರೆ, ಫೇಸ್ಬುಕ್’ನಲ್ಲಿ ಕೂಡಾ ಪೇಜ್ ಅಸ್ತಿತ್ವಕ್ಕೆ ಬಂದಿದೆ. ಇನ್ಸ್ಟಾಗ್ರಾಮ್, ಟ್ವಿಟರ್’ಗಳಲ್ಲಿ ಸಕ್ರಿಯವಾಗಿದೆ.

ಏನಿದು ChefTalk?

ಕರಾವಳಿ ಮೂಲದ ಗೋವಿಂದ ಪೂಜಾರಿಯವರು ಬಾಲ್ಯದಲ್ಲಿ ಶಿಕ್ಷಣ ತ್ಯಜಿಸಿ ಮುಂಬೈಗೆ ತೆರಳಿದ ಸಂದರ್ಭದಲ್ಲಿ ಕೆಲಸವಿಲ್ಲದೇ ಅಸಹಾಯಕರಾಗಿದ್ದರು. ಹೃದಯವೈಶಾಲ್ಯದ ಸಮೂಹ ಇವರನ್ನೇ ಬಳಸಿ ದೈತ್ಯ ಉದ್ಯಮವನ್ನೇ ನಡೆಸಿತು. ಅವರು ಕೂಡಾ ಸ್ನೇಹಿತರ ತಂಡ ಕಟ್ಟಿ ಬಡಪಾಯಿ ಮಂದಿಗೆ ಊಟ-ತಿಂಡಿ ನೀಡುವ ಕೈಂಕರ್ಯ ನಡೆಸಿದರು. ಬರಬರುತ್ತಾ ಉದ್ಯಮಸ್ನೇಹಿ ಗುಂಪು ಕಟ್ಟಿದ ಗೋವಿಂದ ಬಾಬು ಪೂಜಾರಿಯವರು ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಬೆಂಗಳೂರು ನಗರಗಳಲ್ಲಿ ಆಹಾರೋದ್ಯಮ ಕ್ಷೇತ್ರ ಆಯ್ದುಕೊಂಡು Cheftalk Food & Hospitality Services Pvt Ltd ಕಂಪೆನಿ ಬೆಳೆಸಿದರು. ಈ ಮೂಲಕ ಸುಮಾರು 5,000 ಮಂದಿಗೆ ಉದ್ಯೋಗ ನೀಡಿದ್ದಾರೆ. ಅಷ್ಟೇ ಅಲ್ಲ, ಕರಾವಳಿಯಲ್ಲಿ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಿ ಯುವಜನರಿಗೆ ಕೆಲಸ ಕೊಡಿಸುವ ಯೋಜನೆಗೂ ಅವರು ಮುನ್ನುಡಿ ಬರೆದಿದ್ದಾರೆ. ಉದ್ಯಮಶೀಲ ಹಾಗೂ ಮೀನುಗಾರರು, ಬೀದಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದವರಿಗಾಗಿ ‘ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ’ ಕಟ್ಟಿ ಆರ್ಥಿಕ ಶಕ್ತಿಯಾಗಿಯೂ ನಿಂತಿದ್ದಾರೆ. (ಇದನ್ನೂ ಓದಿ.. ಯುವಜನರ ಸಬಲೀಕರಣಕ್ಕೆ ಮುನ್ನುಡಿ ಬರೆದ ಸೊಸೈಟಿ: ಕರಾವಳಿ ಮೂಲದ ಉದ್ಯಮಿಯ ಸಾಹಸಗಾಥೆ..)

ಕೆಲ ದಿನಗಳ ಹಿಂದೆ, ಲಾಕ್’ಡೌನ್ ಸಂದರ್ಭದಲ್ಲಿ ಅಸಹಾಯಕರಿಗೆ ನಿತ್ಯವೂ ಊಟೋಪಚಾರ, ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಿದ್ದ ಗೋವಿಂದ ಬಾಬು ಪೂಜಾರಿಯವರು, ಕುಂದಾಪುರ ಸಮೀಪದ ಬಿಜೂರು ಸುತ್ತಮುತ್ತಲ ಪ್ರದೇಶಗಳಿಗೆ ಜೀವಜಲ ಪೂರೈಸಿ ಬರಡುಭೂಮಿಯ ಜನರಲ್ಲಿ ಚೈತನ್ಯ ತುಂಬಿ ದೇಶದ ಗಮನಸೆಳೆದಿದ್ದಾರೆ.

ಇದನ್ನೂ ಓದಿ.. ಬರಡು ಭೂಮಿಗೆ ಜೀವಜಲ ಹರಿಸಿದ “ಭಗೀರಥ’ 

 

Related posts