ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವೀಡಿಯೋ ಕುತೂಹಲ

ಕುಡ್ಲದ ಕುವರಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅನೇಕ ದಿನಗಳ ನಂತರ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರು ಸಾನಾಜಿಕ ಜಾಲ ತಾಣಗಳಲ್ಲಿ‌ ಹರಿಯಬಿಟ್ಟಿರುವ ವಿಚಾರದಿಂದಾಗಿಯೇ ಅವರು ಸುದ್ದಿಯ ಮುನ್ನಲೆಗೆ ಬಂದಿರೋದು.

ಅಂದ ಹಾಗೆ ಅವರು ಅಮ್ಮಂದಿರ ದಿನದ ಅಂಗವಾಗಿ ಹಂಚಿಕೊಂಡ ಸಂಗತಿ ಸಾಕಷ್ಟು ಮಂದಿಗೆ ಹಿತವೆನಿಸಿದಂತಿದೆ. ಹಾಗಾಗಿ ಬಹುಜನರು ಶಿಲ್ಪಾ ಶೆಟ್ಟಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಯಂದಿರ ದಿನದಂದು ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ. ಮಗಳು ಸಮಿಷಾ ಜೊತೆಗಿರುವ ಹಾಗೂ ಮಗ ವಯಾನ್ ಬರೆದಿರುವ ಸಂದೇಶವನ್ನೊಳಗೊಂಡ ವೀಡಿಯೋ ತುಣುಕು ಇದಾಗಿದೆ. ಇದು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

ಇದನ್ನೂ ಓದಿ.. ಹಳ್ಳಿ ಶೈಲಿಯ ‘ಚಿಕನ್ ಚಾಪ್ಸ್’ಗೆ ಟೇಸ್ಟೀ ಟಚ್

 

Related posts