ರಕ್ಷಾ ಬಂಧನಕ್ಕೆ ಅಂಚೆ ಇಲಾಖೆಯ ವಿಶೇಷ ವ್ಯವಸ್ಥೆ; ರಾಖಿ ಕಳುಹಿಸಲು ವಿಶೇಷ ಕೌಂಟರ್‌ಗಳು ಆರಂಭ

ನವದೆಹಲಿ: ಆಗಸ್ಟ್ 28ರಂದು ಆಚರಿಸಲಿರುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ರಾಖಿಗಳು ಸಕಾಲಕ್ಕೆ ತಲುಪುವಂತೆ ಭಾರತ ಅಂಚೆ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ. ದೆಹಲಿಯಾದ್ಯಂತ ವಿಶೇಷ ರಾಖಿ ಮೇಲ್ ಬುಕ್ಕಿಂಗ್ ಕೌಂಟರ್‌ಗಳನ್ನು ಆರಂಭಿಸಲಾಗಿದ್ದು, ಗ್ರಾಹಕರು ಆಗಸ್ಟ್ 22ರವರೆಗೆ ಈ ಸೇವೆಯನ್ನು ಬಳಸಿಕೊಳ್ಳಬಹುದು. ದೆಹಲಿ ರೈಲ್ವೆ ನಿಲ್ದಾಣ ಮತ್ತು ನವದೆಹಲಿ ರೈಲ್ವೆ ನಿಲ್ದಾಣದ ಸಾರಿಗೆ ಮೇಲ್ ಕಚೇರಿಗಳ ಜೊತೆಗೆ ದೆಹಲಿಯ 34 ಪ್ರಮುಖ ಅಂಚೆ ಕಚೇರಿಗಳಲ್ಲಿ ಈ ವಿಶೇಷ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ. ಹಬ್ಬದ ವೇಳೆಯ ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು ಹಾಗೂ ರಾಖಿ ಸಮಯಕ್ಕೆ ತಲುಪಲು ಗ್ರಾಹಕರು ಮುಂಚಿತವಾಗಿಯೇ ಅಂಚೆ ಮೂಲಕ ಕಳುಹಿಸುವಂತೆ ಇಲಾಖೆ ಮನವಿ ಮಾಡಿದೆ. ವೇಗದ ವಿತರಣೆಗಾಗಿ ಇಂಡಿಯಾ ಪೋಸ್ಟ್‌ನ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಸೇವೆಗಳನ್ನು ಬಳಸುವಂತೆ ಗ್ರಾಹಕರಿಗೆ ಸಲಹೆ ನೀಡಲಾಗಿದೆ. ಈ ಸೇವೆಗಳಲ್ಲಿ ನಿಗದಿತ ಸಮಯದೊಳಗೆ ವಿತರಣೆ ಖಾತರಿಯಿದ್ದು,…

2027ರಲ್ಲಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ; ವೇಗ ಪಡೆದುಕೊಂಡ ಗಗನಯಾನ ಯೋಜನೆ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ ವೇಗ ಪಡೆದುಕೊಂಡಿದ್ದು, ಮೊದಲ ಸಿಬ್ಬಂದಿರಹಿತ ಪರೀಕ್ಷಾ ಮಿಷನ್‌ 2026ರ ನಾಲ್ಕನೇ ತ್ರೈಮಾಸಿಕದಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನವನ್ನು 2027ರಲ್ಲಿ ನಡೆಸುವ ಗುರಿ ಹೊಂದಲಾಗಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮಾನವ-ರೇಟೆಡ್ ಎಲ್‌ವಿಎಂ3 ಉಡಾವಣಾ ವಾಹಕ, ಕಕ್ಷಾ ಮಾಡ್ಯೂಲ್, ಸಿಬ್ಬಂದಿ ಪಾರು ವ್ಯವಸ್ಥೆ ಸೇರಿದಂತೆ ಪ್ರಮುಖ ತಾಂತ್ರಿಕ ವ್ಯವಸ್ಥೆಗಳ ಅಭಿವೃದ್ಧಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಟಿವಿ-ಡಿ1 ಅಬಾರ್ಟ್ ಪರೀಕ್ಷೆ ಹಾಗೂ ಏರ್-ಡ್ರಾಪ್ ಪರೀಕ್ಷೆಗಳು ಯಶಸ್ವಿಯಾಗಿದ್ದು, ಇದೀಗ ಟಿವಿ-ಡಿ2 ಪರೀಕ್ಷಾ ಮಿಷನ್‌ಗೆ ಸಿದ್ಧತೆಗಳು ನಡೆಯುತ್ತಿವೆ ಎಂದರು. ಮೊದಲ ಸಿಬ್ಬಂದಿರಹಿತ ಪರೀಕ್ಷಾ ಹಾರಾಟದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಅರ್ಧ-ಮಾನವಾಕೃತಿ ರೋಬೋಟ್ ವ್ಯೋಮಮಿತ್ರ ಸೇರಿದಂತೆ ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಪರೀಕ್ಷಿಸಲಾಗುತ್ತದೆ. ಮಾನವ ಬಾಹ್ಯಾಕಾಶ ಯಾನಕ್ಕೂ ಮುನ್ನ ಇನ್ನೆರಡು ಸಿಬ್ಬಂದಿರಹಿತ ಮಿಷನ್‌ಗಳನ್ನು…

ಮೊಬೈಲ್, ಬ್ರಾಡ್‌ಬ್ಯಾಂಡ್ ಸೇವೆಗಳ ಗುಣಮಟ್ಟಕ್ಕೆ ಹೊಸ ಮಾನದಂಡ; ಸಾರ್ವಜನಿಕರಿಂದ ಸಲಹೆ ಕೋರಿದ TRAI

ನವದೆಹಲಿ: ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಸೇವಾ ಗುಣಮಟ್ಟ (QoS) ನಿಯಮಗಳಿಗೆ ತಿದ್ದುಪಡಿ ಪ್ರಸ್ತಾಪಿಸಿ ಸಮಾಲೋಚನಾ ಪತ್ರ ಬಿಡುಗಡೆ ಮಾಡಿದೆ. ಪ್ರಸ್ತಾವಿತ ತಿದ್ದುಪಡಿಗಳು ಸೇವೆ ಒದಗಿಸುವ ಅನುಭವ, ಪಾಲುದಾರರ ಸಲಹೆಗಳು, ತಾಂತ್ರಿಕ ಪ್ರಗತಿ ಹಾಗೂ ಉತ್ತಮ ಗುಣಮಟ್ಟದ ಡಿಜಿಟಲ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಆಧರಿಸಿವೆ ಎಂದು TRAI ತಿಳಿಸಿದೆ. 2024ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಪ್ರಸ್ತುತ ಸೇವಾ ಗುಣಮಟ್ಟದ ನಿಯಮಗಳು, ತಂತ್ರಜ್ಞಾನ-ತಟಸ್ಥ ಚೌಕಟ್ಟು, ಪಾರದರ್ಶಕ ವರದಿ ವ್ಯವಸ್ಥೆ ಹಾಗೂ ಸೇವಾ ಗುಣಮಟ್ಟದ ಮೇಲ್ವಿಚಾರಣೆಗೆ ಹೊಸ ಮಾನದಂಡಗಳನ್ನು ಪರಿಚಯಿಸಿದ್ದವು. ಈಗ ‘ಪ್ರವೇಶ ಸೇವೆ (ವೈರ್‌ಲೈನ್ ಮತ್ತು ವೈರ್‌ಲೆಸ್) ಹಾಗೂ ಬ್ರಾಡ್‌ಬ್ಯಾಂಡ್ (ವೈರ್‌ಲೆಸ್) ಸೇವೆಗಳ ಗುಣಮಟ್ಟ (ಮೊದಲ ತಿದ್ದುಪಡಿ) ನಿಯಮಗಳು-2026’ ಕರಡನ್ನು ಸಾರ್ವಜನಿಕ ಸಮಾಲೋಚನೆಗಾಗಿ TRAI ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕರಡು ತಿದ್ದುಪಡಿಗಳ ಕುರಿತು…

ಅಸಮಾಧಾನಿತ ‘ಕೈ’ ಶಾಸಕರ ಮನವೊಲಿಕೆಗೆ ‘ಹೈ’ ಕಸರತ್ತು; ಉತ್ತರಕ್ಕೆ ಅನ್ಯಾಯವಾಗಿದೆ ಎಂದ ನಾಯಕ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸುರ್ಜೆವಾಲ, ಅವರೊಂದಿಗೆ ಮಾತುಕತೆ ನಡೆಸಿದರು. ಆದರೆ, ಸಚಿವ ಸ್ಥಾನ ಹೊರತುಪಡಿಸಿ ಬೇರೆ ಯಾವುದೇ ಹುದ್ದೆ ಅಥವಾ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಚಿವ ಸ್ಥಾನ ವಂಚಿತರಾದ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಅವರ ನಿವಾಸಕ್ಕೂ ಭೇಟಿ ನೀಡಿ ಚರ್ಚೆ ನಡೆಸಿದರು. ಉತ್ತರ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಾದೇಶಿಕ ಅಸಮಾನತೆ ಇನ್ನೂ ಮುಂದುವರಿದಿದೆ ಎಂದು ಹೆಚ್.ಕೆ. ಪಾಟೀಲ್ ಅಸಮಾಧಾನ…

MSMEಗಳಿಗೆ ಹಣಕಾಸು ಬಲ; SIDBIಯಿಂದ 71 ಹೊಸ ಶಾಖೆಗಳು, ECLGS 5.0 ಜಾರಿ: ಕೇಂದ್ರ

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಸಾಲ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) 71 ಹೊಸ ಶಾಖೆಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ. ಜೊತೆಗೆ, ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS) 5.0 ಜಾರಿಗೊಳಿಸಲಾಗಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಏಪ್ರಿಲ್ 2024ರಿಂದ ಜುಲೈ 2026ರವರೆಗೆ ಪ್ರಮುಖ MSME ಕ್ಲಸ್ಟರ್‌ಗಳಲ್ಲಿ SIDBI 71 ಹೊಸ ಶಾಖೆಗಳನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 31, 2026ರ ವೇಳೆಗೆ SIDBIಯ ನೇರ ಸಾಲ ಪೋರ್ಟ್‌ಫೋಲಿಯೊ ಶೇ.36.8ರಷ್ಟು ಏರಿಕೆ ಕಂಡು ₹51,687 ಕೋಟಿಗೆ ತಲುಪಿದ್ದು, ಮರುಹಣಕಾಸು (Refinance) ಪೋರ್ಟ್‌ಫೋಲಿಯೊ ಶೇ.16.9ರಷ್ಟು ಹೆಚ್ಚಳಿ ₹4.5 ಲಕ್ಷ ಕೋಟಿಗೆ…

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ಚಿಕ್ಕಬಳ್ಳಾಪುರದಲ್ಲಿ ಬಂದ್, ರಾಜೀನಾಮೆಗಳ ಸರಣಿ

ಬೆಂಗಳೂರು/ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ ನಾಯಕರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜೀನಾಮೆಗಳ ಸರಣಿಯೂ ಆರಂಭವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಬುಧವಾರ ಬಂದ್‌ಗೆ ಕರೆ ನೀಡಲಾಗಿದೆ. ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಾಗೇಪಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಬಂದ್‌ಗೆ ಸುಬ್ಬಾರೆಡ್ಡಿ ಅವರ ನೇರ ಬೆಂಬಲವಿಲ್ಲ, ಸಾರ್ವಜನಿಕರ ಅಸಮಾಧಾನದಿಂದಲೇ ಪ್ರತಿಭಟನೆ ನಡೆಯುತ್ತಿದೆ ಎಂದು ಬೆಂಬಲಿಗರು ತಿಳಿಸಿದ್ದಾರೆ. ಇತ್ತ…

ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಹೊಸ ಆಯುಷ್ ಕಾಲೇಜು, ಆಸ್ಪತ್ರೆಗಳಿಗೆ ರಾಜ್ಯಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

ನವದೆಹಲಿ: ದೇಶಾದ್ಯಂತ ಆಯುಷ್ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ 2014-15ರಿಂದ 2025-26ರವರೆಗೆ ರಾಷ್ಟ್ರೀಯ ಆಯುಷ್ ಮಿಷನ್ (NAM) ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ₹6,406.99 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಾರ್ವಜನಿಕ ಆರೋಗ್ಯವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಡುವ ವಿಷಯವಾಗಿದ್ದು, ಹೊಸ ಆಯುಷ್ ಕಾಲೇಜುಗಳು, ಸಂಯೋಜಿತ ಆಸ್ಪತ್ರೆಗಳು ಹಾಗೂ ಇತರೆ ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ಜವಾಬ್ದಾರಿ ರಾಜ್ಯಗಳದ್ದಾಗಿದೆ ಎಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ರಾಜ್ಯಗಳು ತಮ್ಮ ರಾಜ್ಯ ವಾರ್ಷಿಕ ಕ್ರಿಯಾ ಯೋಜನೆಗಳ (SAAPs) ಮೂಲಕ ಸಲ್ಲಿಸುವ ಪ್ರಸ್ತಾವನೆಗಳ ಆಧಾರದ ಮೇಲೆ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ಆಯುಷ್ ಸೇವೆ ಲಭ್ಯವಿಲ್ಲದ ರಾಜ್ಯಗಳಲ್ಲಿ ಹೊಸ ಸರ್ಕಾರಿ ಆಯುಷ್ ಕಾಲೇಜುಗಳ ಸ್ಥಾಪನೆ, 10, 30 ಹಾಗೂ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ…

2014ರಿಂದ 12,819 ಲಕ್ಷ ಮೆಟ್ರಿಕ್ ಟನ್ MSP ಬೆಳೆ ಖರೀದಿ; ರೈತರಿಗೆ ₹27.8 ಲಕ್ಷ ಕೋಟಿ ಪಾವತಿ: ಕೇಂದ್ರ

ನವದೆಹಲಿ: 2014ರಿಂದ 2026ರ ಜೂನ್‌ವರೆಗೆ ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆಯಡಿ 12,819 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗಿದ್ದು, ರೈತರಿಗೆ ಒಟ್ಟು ₹27.8 ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳು, ರಾಜ್ಯ ಸರ್ಕಾರಗಳು ಹಾಗೂ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರತಿವರ್ಷ 22 ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 2018-19ರ ಕೇಂದ್ರ ಬಜೆಟ್ ಘೋಷಣೆಯಂತೆ, ಎಲ್ಲ MSPಗಳನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸುವ ನೀತಿಯನ್ನು ಸರ್ಕಾರ ಮುಂದುವರಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2021-22ರಿಂದ 2026ರ ಜೂನ್‌ವರೆಗೆ ಮಾತ್ರ…

‘ಮಹಾಭಾರತ’ದ ಅಶ್ವತ್ಥಾಮ, ಬಹುಭಾಷಾ ನಟ ಪ್ರದೀಪ್ ರಾವತ್ ನಿಧನಕ್ಕೆ ಕಂಬನಿಯ ಮಹಾಪೂರ

ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ಖ್ಯಾತ ಖಳನಟ ಪ್ರದೀಪ್ ರಾವತ್ ಅವರು ಆಗಸ್ಟ್ 4ರ ಸಂಜೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಸಹನಟ ಯಶ್‌ಪಾಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಚಿತ್ರರಂಗಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. 1988ರಲ್ಲಿ ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮ ಪಾತ್ರದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಪ್ರದೀಪ್ ರಾವತ್, 1990ರಲ್ಲಿ ಸಲ್ಮಾನ್ ಖಾನ್ ಅಭಿನಯದ ‘ಬಾಘಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ಬಳಿಕ ‘ಲಗಾನ್’ ಚಿತ್ರದಲ್ಲಿ ದೇವ್ ಪಾತ್ರ ಹಾಗೂ ‘ಘಜಿನಿ’ ಚಿತ್ರದಲ್ಲಿ ಘಜಿನಿ ಧರ್ಮಾತ್ಮ ಪಾತ್ರದ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ ಖಳನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ತೆಲುಗಿನ ‘ಸೈ’ ಚಿತ್ರದ ಭಿಕ್ಷು…

ಅಸಮಾಧಾನಿತ ಶಾಸಕರ ಮನವೊಲಿಕೆ: ಎಂ. ಕೃಷ್ಣಪ್ಪ, ಟಿ.ಬಿ. ಜಯಚಂದ್ರ ನಿವಾಸಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ

ಬೆಂಗಳೂರು: ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರ ಮನವೊಲಿಕೆ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಸಚಿವ ಎನ್. ಚಲುವರಾಯಸ್ವಾಮಿ ಇಂದು ಶಾಸಕ ಎಂ. ಕೃಷ್ಣಪ್ಪ ಹಾಗೂ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ನಿವಾಸಗಳಿಗೆ ಭೇಟಿ ನೀಡಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಎಂ. ಕೃಷ್ಣಪ್ಪ ನಿವಾಸದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, “ಕೃಷ್ಣಪ್ಪ ಅವರು ಕೆಲವು ವಿಚಾರಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸೂಚನೆ ಮೇರೆಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ” ಎಂದು ಹೇಳಿದರು. “ಬುಧವಾರ ಮುಖ್ಯಮಂತ್ರಿ ಸ್ವತಃ ಕೃಷ್ಣಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಅವರು ನಮಗೆ ಹಿರಿಯಣ್ಣನಂತಹವರು. ಇಲ್ಲಿ ಸಂಧಾನ ಎಂಬ ಪ್ರಶ್ನೆಯೇ ಇಲ್ಲ. ಅಷ್ಟು ದೊಡ್ಡವರು ನಾವಲ್ಲ. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದರು. ಇದೇ ವೇಳೆ, ಈ ಹಿಂದೆ ಉಂಟಾಗಿದ್ದ ಕೆಲವು ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು…